ಪುರಸಭೆಗೆ 51.23 ಲಕ್ಷ ರೂಗಳ ಉಳಿತಾಯ ಬಜೆಟ್
Team Udayavani, Mar 23, 2022, 3:49 PM IST
ಪಿರಿಯಾಪಟ್ಟಣ: ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ಅಧ್ಯಕ್ಷ ಮಂಜುನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ 2022-23 ನೇ ಸಾಲಿನ ಬಜೆಟ್ ಸಭೆಯಲ್ಲಿ ಆಯವ್ಯಯ ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಮಂಜುನಾಥ ಸಿಂಗ್ ಮಾತನಾಡಿ ಪ್ರಸ್ತುತ ವರ್ಷದಲ್ಲಿ ಪುರಸಭೆಯ ಸ್ವಂತ ಆದಾಯವನ್ನು ಹೆಚ್ಚಾಗಿ ನಿರೀಕ್ಷೆ ಮಾಡಲಾಗಿದ್ದು, ಆಸ್ತಿತೆರಿಗೆ 120 ಲಕ್ಷ, ನೀರು ನೀರಿನ ಕರ 55 ಲಕ್ಷ, ಮಳಿಗೆ ಬಾಡಿಗೆ 36 ಲಕ್ಷ, ಉದ್ದಿಮೆ ಪರವಾನಿಗೆ ಶುಲ್ಕ ಮತ್ತು ಸಂತೆ ಶುಲ್ಕ ವಸೂಲಿ ಹಕ್ಕು ಹರಾಜು ತಲಾ 25 ಲಕ್ಷ, ಕುರಿ ಮತ್ತು ಕೋಳಿ ಮಾಂಸದ ಮಾರಾಟ ಪರವಾನಿಗೆ 35 ಲಕ್ಷ, ಕಟ್ಟಡದ ಪರವಾನಿಗೆ ಶುಲ್ಕ 7 ಲಕ್ಷ, ಅಭಿವೃದ್ಧಿ ಶುಲ್ಕ 6.75 ಲಕ್ಷ, ಇತರೆ ಆದಾಯ 33.85 ಲಕ್ಷ,ರಾಜ್ಯ ಹಣಕಾಸು ಆಯೋಗದ ಅನುದಾನ 26 ಲಕ್ಷ, ಕೇಂದ್ರ ಸರ್ಕಾರದ ಅನುದಾನ 15ನೇ ಹಣಕಾಸು ಯೋಜನೆ 132 ಲಕ್ಷ, ಸ್ವಚ್ಛಭಾರತ್ ಯೋಜನೆಯಡಿ 50 ಲಕ್ಷ,ರಾಜ್ಯ ಹಣಕಾಸು ಆಯೋಗದ ಬರಪರಿಹಾರ 15 ಲಕ್ಷ, ವಿದ್ಯುಚ್ಛಕ್ತಿ ಅನುದಾನ 178 ಲಕ್ಷ ನಿರೀಕ್ಷಿಸಲಾಗಿದೆ. ವೇತನ ಪಾವತಿಗೆ 122 ಲಕ್ಷ, ರಸ್ತೆ, ಚರಂಡಿ ನಿರ್ಮಾಣಕ್ಕೆ 300 ಲಕ್ಷ, ಕಲ್ವರ್ಟ್ ಮತ್ತು ಕಿರು ಸೇತುವೆ ನಿರ್ಮಾಣಕ್ಕೆ 100 ಲಕ್ಷ, ಬೀದಿದೀಪ ನಿರ್ಮಾಣ ಮತ್ತು ಘನ ತ್ಯಾಜ್ಯ ವಸ್ತು ವಿಲೇವಾರಿ 120 ಲಕ್ಷ, ನೀರು ಸರಬರಾಜಿಗೆ 80 ಲಕ್ಷ, ಬೀದಿದೀಪ ನಿರ್ವಹಣೆಗೆ 31.25 ಲಕ್ಷ,ರಸ್ತೆ, ಚರಂಡಿ ದುರಸ್ತಿ ಮತ್ತು ನಿರ್ವಹಣೆಗೆ 4.50 ಲಕ್ಷ, ನೈರ್ಮಲ್ಯ ನಿರ್ವಹಣೆಗೆ 87 ಲಕ್ಷ, ಬಡತನ ನಿರ್ಮೂಲನೆಗೆ 24.10%ರಡಿಯಲ್ಲಿ ಎಸ್ ಎಫ್ ಸಿ ಅನುದಾನದಲ್ಲಿ 158 ಲಕ್ಷ ಮತ್ತು ಮುನೀಸಿಪಲ್ ಫಂಡ್ ನಿಂದ 2.65% ಹಾಗೂ 07:25 ರಡಿಯಲ್ಲಿ ಎಸ್ ಎಫ್ ಸಿ ಅನುದಾನ 1.90 ಲಕ್ಷ, ಮುನ್ಸಿಪಲ್ ಪಂಡಿನ 0.80 ಲಕ್ಷ, 5%ರಡಿಯಲ್ಲಿ ಎಸ್ ಎಫ್ ಸಿ ಅನುದಾನ 1.30 ಲಕ್ಷ ಅಂದಾಜಿಸಲಾಗಿದೆ. ಕ್ಷೇಮಾಭಿವೃದ್ಧಿ ಮತ್ತು ಕೆಎಂಆರ್ ಪಿ ಯೋಜನೆ ನೌಕರರ ವೇತನ ಪಾವತಿಗೆ 40 ಲಕ್ಷ, ಡೇ ನಲ್ಮ್ ಯೋಜನೆ, ವಿವಿಧ ಕಾರ್ಯಕ್ರಮಗಳಿಗೆ 10 ಲಕ್ಷ ವೆಚ್ಚವನ್ನು ಅಂದಾಜಿಸಲಾಗಿದೆ ಎಂದರು.
ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಎ.ಟಿ.ಪ್ರಸನ್ನ, ಸದಸ್ಯರಾದ ಪಿ.ಎಸ್.ಪ್ರಕಾಶ್ ನಿರಂಜನ್, ಕೆ.ಮಹೇಶ್, ಶ್ವೇತಾ, ರತ್ನಮ್ಮ, ರೇವತಿ, ಮಂಜುಳಾ, ಶ್ಯಾಂ, ಹರ್ಷದ್, ಮಂಜುನಾಥ್, ಪಿ.ಸಿ.ಕೃಷ್ಣ, ಪ್ರಸಾದ್, ಪ್ರಕಾಧ್ ಸಿಂಗ್, ಶಿವರಾಮೇಗೌಡ, ಆರೋಗ್ಯ ನಿರೀಕ್ಷಕ ಆದರ್ಶ, ಪ್ರದೀಪ್, ಕುಮಾರ್, ಸಿಬ್ಬಂದಿಗಳಾದ ಮಹದೇವಸ್ವಾಮಿ, ಶರ್ಮಿಳಾ, ಜಯರಾಮ್, ಕುಮಾರ್ ಸ್ವಾಮಿ, ಶರಣಪ್ಪ, ಪ್ರದೀಪ್, ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್
Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ
ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.