ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರನಿದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು
Team Udayavani, Dec 27, 2022, 3:26 PM IST
ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ ಮೋದಿ ಅವರಿದ್ದ ಕಾರು ಇಲ್ಲಿನ ಕಡಕೊಳ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ಮಂಗಳವಾರ ನಡೆದಿದೆ.
ಪ್ರಹ್ಲಾದ್ ದಾಮೋದರ್ ಮೋದಿ ಅವರು ಮೈಸೂರು ಕಡೆಯಿಂದ ಬಂಡೀಪುರದ ಕಡೆಗೆ ತೆರಳುತ್ತಿದ್ದರು. ಮಧ್ಯಾಹ್ನ 1-40ರ ಸಮಯದಲ್ಲಿ ಕಡಕೊಳದ ಬಳಿ ರೋಡ್ ಡಿವೈಡರ್ ಗೆ ಅವರಿದ್ದ ಬೆನ್ಜ್ ಕಾರು (KA-51-MN-5678) ಡಿಕ್ಕಿ ಹೊಡೆದಿದೆ. ಕಾರಿನ ಚಾಲಕ ಸತ್ಯನಾರಾಯಣ ಅವರನಿಯಂತ್ರಣ ತಪ್ಪಿ ಕಾರು ರೋಡ್ ಡಿವೈಡರ್ ಗೆ ಗುದ್ದಿದೆ. ಯಾರಿಗೂ ಪ್ರಾಣಾಪಾಯವಾಗಿಲ್ಲ.
ಕಾರಿನಲ್ಲಿ ಮೋದಿ ಅವರ ಸಹೋದರ, ಅವರ ಮಗ, ಸೊಸೆ ಹಾಗೂ ಮೊಮ್ಮಗ ನಾಲ್ಕು ಜನರಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ನಗರದ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ʼಪಠಾಣ್ʼಗೆ ಟಕ್ಕರ್ ಕೊಡುತ್ತಾʼ ಗಾಂಧಿ-ಗೋಡ್ಸೆ ಏಕ್ ಯುದ್ಧ್ʼ: ಮೋಷನ್ ರಿಲೀಸ್
ಪ್ರಹ್ಲಾದ ಮೋದಿ ಅವರ ಗಲ್ಲದ ಭಾಗಕ್ಕೆ ಪೆಟ್ಟಾಗಿದ್ದು, ಅವರ ಸೊಸೆಗೆ ತಲೆಯ ಭಾಗಕ್ಕೆ ಪೆಟ್ಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೊಮ್ಮಗನ ಕಾಲಿಗೆ, ಚಾಲಕ ಹಾಗು ಮಗನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಮಹಜರು ವೇಳೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.