ಸಶಸ್ತ್ರ ಮೀಸಲು ಪಡೆ ಟೀಂ ಚಾಂಪಿಯನ್
Team Udayavani, Mar 8, 2021, 2:37 PM IST
ಮೈಸೂರು: ನಗರ ಪೊಲೀಸ್ ಇಲಾಖೆ ವಾರ್ಷಿಕ ಕ್ರೀಡಾಕೂಟದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ತಂಡ ಉತ್ತಮ ಪ್ರದರ್ಶನ ನೀಡಿ “ಟೀಂ ಚಾಂಪಿಯನ್‌ಶಿಪ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ನಗರ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ತಂಡಗಳಿಗೆ ಭಾನುವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಮಚಂದ್ರ ಡಿ.ಹುದ್ದಾರ್ ಸ್ಪರ್ಧೆಯಲ್ಲಿ ಗೆಲುವು ಗಳಿಸಿದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿದರು. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಡಾ.ಪ್ರಕಾಶ್‌ಗೌಡ, ಗೀತಾ ಪ್ರಸನ್ನ ಇದ್ದರು. ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಸಿಎಆರ್, ಎನ್‌ಆರ್, ಕೆಆರ್, ದೇವರಾಜ, ಸಂಚಾರ, ಮಹಿಳಾವಿಭಾಗಗಳಿಂದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು.
ವಿಜೇತರ ಪಟ್ಟಿ: ಪುರುಷರ ವಿಭಾಗದಲ್ಲಿ ಮೈಲಾರಿ ಹಾಗೂ ಮಹಿಳೆಯರ ವಿಭಾಗದಲ್ಲಿ ರತ್ನಮ್ಮ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾದರು. ಹಗ್ಗ ಜಗ್ಗಾಟ ಸ್ಪರ್ಧೆಯ ಫೈನಲ್‌ನಲ್ಲಿ ನಗರ ಸಶಸ್ತ್ರ ಮೀಸಲು ಪಡೆ ತಂಡ 2-0 ಯಿಂದ ನಗರ ಸಂಚಾರ ವಿಭಾಗದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.
ಪುರುಷರ 100 ಮೀ.ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಕೆ.ಆರ್.ವಿಭಾಗದ ಮೈಲಾರಿ ವೇಗದ ಓಟಗಾರರಾಗಿ ಹೊರಹೊಮ್ಮಿದರು. ಸಿಎಆರ್ ವಿವಿ ಭಾಗದ ವಿಜಯ ಶಂಕರ್ ದ್ವಿತೀಯ ಹಾಗೂ ಕೆ. ಆರ್. ವಿಭಾಗದ ಅಮರ್‌ನಾಥ್ ತೃತೀಯ ಸ್ಥಾನ ಗಳಿಸಿದರು.ಇವೇ ವೇಳೆ ನಡೆದ ನಿಧಾನಗತಿಯಲ್ಲಿ ಬೈಕ್ ಚಾಲನೆಸ್ಪರ್ಧೆಯಲ್ಲಿ ಡಿಸಿಪಿ ಡಾ.ಪ್ರಕಾಶ್‌ಗೌಡ ಭಾಗವಹಿಸಿ ಗಮನ ಸೆಳೆದರು.
ಪುರುಷರ ವಿಭಾಗದ ಫಲಿತಾಂಶ: 100 ಮೀ.ಓಟ:
1.ಮೈಲಾರಿ (ಕೆ.ಆರ್.ವಿಭಾಗ), 2. ವಿಜಯ ಶಂಕರ್ (ಸಿಎಆರ್), 3. ಅಮರ್‌ನಾಥ್ (ಕೆಆರ್)., 200 ಮೀ.ಓಟ: 1.ಮೈಲಾರಿ (ಕೆಆರ್), 2.ವಿಜಯ ಶಂಕರ್ (ಸಿಎಆರ್), 3.ದಿನೇಶ್ (ಸಿಎಆರ್)., 400 ಮೀ. ಓಟ: 1.ಮೈಲಾರಿ(ಕೆ.ಆರ್.ವಿಭಾಗ), 2. ವಿಜಯಶಂಕರ್ (ಸಿಎಆರ್), 3.ಎಂ.ಬಿ.ನಾಗರಾಜು (ಸಿಎ ಆರ್)., 800 ಮೀ.ಓಟ: 1.ನಾಗರಾಜು (ಸಿಎಆರ್),2.ದಿನೇಶ್ (ಸಿಎಆರ್), 3.ನಾಗೇಂದ್ರ (ಸಂಚಾರ).,1500 ಮೀ.ಓಟ: 1.ಎಂ.ಪಿ.ಹರೀಶ್(ದೇವರಾಜ),2.ರವಿಕುಮಾರ್(ಸಿಎಆರ್), 3.ಎಂ.ಬಿ.ನಾಗರಾಜು(ಸಿಎಆರ್)., 5000 ಮೀ.ಓಟ: 1.ಕೆ.ಸುನೀಲ್ (ಸಿಎ ಆರ್), 2.ಎಂ.ಪಿ.ಹರ್ಷ(ದೇವರಾಜ), 3.ರವಿ ಕುಮಾರ್(ಸಿಎಆರ್)., ಉದ್ದ ಜಿಗಿತ: 1.ವಿಜಯ ಶಂಕರ್ (ಸಿಎಆರ್), 2.ಮೈಲಾರಿ (ಕೆಆರ್), 3. ಅಮರ್ ನಾಥ್ (ವಿಶೇಷ)., ಎತ್ತರ ಜಿಗಿತ: 1.ವಿಜಯಶಂಕರ್ (ಸಿಎಆರ್), 2.ಮೈಲಾರಿ (ಕೆಆರ್),3.ಬಿ.ಡಿ.ದಿನೇಶ್(ಸಿಎಆರ್)., ಗುಂಡು ಎಸೆತ: 1. ಶಾಂತಕುಮಾರ್(ಸಂಚಾರ), 2.ಆರೋಗ್ಯ ರಾಜ್ (ಸಿಎಆರ್), 3. ಹರ್ಷ (ದೇವರಾಜ)., ಹ್ಯಾಮರ್ ಥ್ರೋ: 1.ಎನ್.ಮಂಜು (ಸಿಎಆರ್), 2.ಆರೋಗ್ಯ ರಾಜ್ (ಸಿಎಆರ್), 3. ನವೀನ್(ದೇವ ರಾಜ).,ಜಾವಲಿನ್ ಥ್ರೋ: 1.ಯೂಸೆಫ್ ಅಲಿ (ಕೆಆರ್), 2.ಹನುಮಂತು(ಸಿಎಆರ್), 3.ರಾಮಣ್ಣ(ಸಿಎಆರ್). ಮಹಿಳೆಯರ ವಿಭಾಗದ ಫಲಿತಾಂಶ: 100 ಮೀ. ಓಟ: 1.ಬಿಂದು (ಎನ್‌ಆರ್), 2.ಜ್ಯೋತಿ (ಕೆಆರ್), 3.ಶ್ವೇತಾ(ಎನ್‌ಆರ್)., 200 ಮೀಟರ್ ಓಟ: 1.ಬಿಂದು (ಎನ್‌ಆರ್), 2.ಶ್ವೇತ (ಎನ್‌ಆರ್),
3.ಮಲ್ಲಿಗೆ (ಎನ್‌ಆರ್), ಉದ್ದ ಜಿಗಿತ: 1.ಜೆ.ಎನ್.
ರತ್ನಮ್ಮ (ದೇವರಾಜ), 2.ಬಿಂದು(ಎನ್‌ಆರ್), 3.ನಾಗವೇಣಿ (ಕೆಆರ್)., ಗುಂಡು ಎಸೆತ: 1.ರತ್ನಮ್ಮ(ದೇವರಾಜ), 2.ಸವಿತಾ (ಕೆಆರ್), 3.ಸೀಮಾ ಭನು (ಎನ್‌ಆರ್)., ಜಾವಲಿನ್ ಥ್ರೋ: 1.ಸವಿತಾ(ಕೆಆರ್), 2.ಜಿ.ಎನ್.ರತ್ನಮ್ಮ (ದೇವರಾಜ), 3. ರಮ್ಯಾ (ಮಹಿಳಾ)., ಡಿಸ್ಕಸ್ ಥ್ರೋ: 1.ಸವಿತಾ (ಕೆಆರ್), 2.ರಮ್ಯಾ(ವಿಶೇಷ), 3.ರತ್ನಮ್ಮ (ಮಹಿಳಾ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.