ರಾಜಕೀಯ ಚತುರ ಎಚ್.ಡಿ ದೇವೇಗೌಡರು
Team Udayavani, May 20, 2017, 12:45 PM IST
ಬನ್ನೂರು: ರಾಜ್ಯದ ಅಭಿವೃದ್ಧಿ ಪರವಾಗಿ ಕಾರ್ಯ ನಿರ್ವಹಿಸಿ ದೇಶದ ಪ್ರಧಾನಮಂತ್ರಿ ಹುದ್ದೆಗೇರಿದ ಮಣ್ಣಿನ ಮಗ ಎಚ್.ಡಿ. ದೇವೇಗೌಡರು ರಾಜಕೀಯ ಚತುರರಾಗಿದ್ದಾರೆ ಎಂದು ಜೆಡಿಎಸ್ ಯುವ ಮುಖಂಡ ರಾಹುಲ್ ಹೇಳಿದರು.
ಪಟ್ಟಣದ ಲಯನ್ಸ್ ವಿದ್ಯಾ ಸಂಸ್ಥೆಯ ಬಳಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ 85ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಒಬ್ಬ ಮಣ್ಣಿನ ಮಗ ದೇಶವನ್ನು ನಡೆಸಬಲ್ಲ ಎನ್ನುವುದನ್ನು ತೋರಿಸಿ, ರೈತರ ಪರವಾಗಿ ಉತ್ತಮ ಕಾರ್ಯವನ್ನು ನಿರ್ವಹಿಸಿದ ಅವರು ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ ಎಂದರು.
ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ರೈತರಿಗೆ ಅನ್ಯಾಯವಾದರೆ ರೈತರ ಪರವಾಗಿ ನಿಲ್ಲುವ ಅವರು ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲೂ ರೈತರ ಪರವಾಗಿ ನಿಂತು ತಮಿಳುನಾಡಿಗೆ ನೀರು ಬಿಡದಂತೆ ರಾಜ್ಯ ಸರ್ಕಾರವನ್ನು ಎಚ್ಚರಿಸಿದರು ಎಂದು ತಿಳಿಸಿದರು.
ಕುಮಾರಸ್ವಾಮಿ ಅಭಿಮಾನಿ ಬಳಗದ ರಾಜಾಧ್ಯಕ್ಷ ಬಿ.ಆರ್. ಮಂಜುನಾಥ್ ಮಾತನಾಡಿ, ದೇವೇಗೌಡರಿಗೆ 85 ವರ್ಷಗಳು ಸಂದಿದ್ದರೂ ಇಂದಿಗೂ ಎಲ್ಲರೂ ಬೆರಗಾಗುವಂತೆ ದೇಶವ್ಯಾಪಿ ಸಂಚರಿಸುವ ಮೂಲಕ ಆಶ್ಚರ್ಯವನ್ನುಂಟು ಮಾಡುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಿಂದಲೂ ಜೆಡಿಎಸ್ ಸಂಘಟನೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಜೆಡಿಎಸ್ ಪ್ರಬಲ ಪಕ್ಷವಾಗಿ ಹೊರಹೊಮ್ಮಲು ತಮ್ಮದೇ ಆದ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆಂದು ಹೇಳಿದರು.
ಡಿಎಸ್ ರಾಜ್ಯ ಉಪಾಧ್ಯಕ್ಷ ಡಾ. ಬಿ.ಕೆ. ಜಾnನಪ್ರಕಾಶ್ ಮಾತನಾಡಿ, ದೇವೇಗೌಡ ಅಜಾತ ಶತೃ, ಅವರು ಯಾವುದೇ ಪಕ್ಷ ಅಸ್ಥಿತ್ವದಲ್ಲಿದ್ದರೂ ನಾಡು, ನುಡಿ, ರಾಜ್ಯದ ಪ್ರಗತಿಗೆ ಸಂಬಂಧಿಸಿದಂತೆ ಪಕ್ಷ ಬೇಧ ಮರೆತು ಸೂಕ್ತ ಸಲಹೆ ಸೂಚನೆ ನೀಡುವುದು ಅವರಲ್ಲಿನ ದೂರದೃಷ್ಟಿತ್ವವನ್ನು ಎತ್ತಿ ಹಿಡಿಯುತ್ತದೆ. ಇಂತಹ ಒಬ್ಬ ಸಜ್ಜನ ರಾಜಕಾರಣಿ ನಮ್ಮ ರಾಜ್ಯದವರೆಂಬುದೇ ನಮಗೆ ಹೆಮ್ಮೆ ಎಂದು ತಿಳಿಸಿದರು.
ಮಾಜಿ ಪುರಸಭಾ ಉಪಾಧ್ಯಕ್ಷ ಬಿ.ಸಿ. ಪಾರ್ಥಸಾರಥಿ, ಎಸಿಸಿ ರಮೇಶ್, ರಾಧಾಕೃಷ್ಣ, ಯಾಚೇನಹಳ್ಳಿ ನವೀನ್, ಸಂಘಟನಾ ಕಾರ್ಯದರ್ಶಿ ಫೈರೋಜ್‌ಖಾನ್, ಇಮ್ರಾನ್, ಕಾರ್ ಮಹೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್, ದೇವರಾಜ್, ಸಂಜು, ಬಾಣಗವಾಡಿ ವೆಂಕಟೇಶ್, ಶಿವನಂಜು ಸೇರಿದಂತೆ ಪ್ರಮುಖರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.