ಬಿಸಿಯೂಟಕ್ಕೆ ಕಳಪೆ ದಿನಸಿ, ನೀರು ಬಳಸಿದ್ದಕ್ಕೆ ತರಾಟೆ
Team Udayavani, Feb 1, 2019, 7:05 AM IST
ಕೆ.ಆರ್.ನಗರ: ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾ.ರಾ.ನಂದೀಶ ಗುರುವಾರ ಮದ್ಯಾಹ್ನ ದಿಢೀರ್ ಭೇಟಿ ನೀಡಿ ಬಿಸಿಯೂಟದ ಅವ್ಯವಸ್ಥೆ ಕಂಡು ಕೆಂಡಮಂಡಲವಾದರು.
ಹೆಣ್ಣು ಮಕ್ಕಳಿಗೆ ಸರ್ಕಾರ ನೀಡುತ್ತಿದ್ದ ಬಿಸಿಯೂಟದಲ್ಲಿ ನಿಯಮಗಳ ಪ್ರಕಾರ ಅಕ್ಕಿ, ತರಕಾರಿ, ಬೇಳೆ ಮೊದಲಾದವುಗಳನ್ನು ಉಪ ಯೋಗಿಸಿಲ್ಲದಿರುವುದು, ಆಹಾರದ ಗುಣಮಟ್ಟ ದಲ್ಲಿ ಕಳಪೆ, ಶುಚಿಯಾದ ನೀರನ್ನು ಬಳಸದೇ ಇರುವುದನ್ನು ಕಂಡು ಶಾಲೆಯ ಉಪ ಪ್ರಾಂಶುಪಾಲ ರಾಮ ಸ್ವಾಮಿಗೌಡ ಮತ್ತು ಸ್ಟೋರ್ ಇನ್‌ಚಾರ್ಜ್ ಶಿಕ್ಷಕ ಜ್ಞಾನದೇವ್ ಅವರನ್ನು ತರಾಟೆಗೆ ತೆಗೆದುಕೊಂಡರು.
ತಪಾಸಣೆ ವೇಳೆ ಬೇಜವಾಬ್ದಾರಿ ವರ್ತನೆ ತೋರಿದ ಶಿಕ್ಷಕ ಜ್ಷಾನದೇವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕು ಶಿಕ್ಷಣಾಧಿಕಾರಿ ರಾಜು ಅವರಿಗೆ ಸೂಚಿಸಿದರು. ಕುಡಿಯುವ ನೀರು ಹಾಗೂ ಬಿಸಿಯೂಟಕ್ಕೆ ಬಳಸುವ ಸಂಪ್ ನೀರನ್ನು ಶುಚಿಯಾಗಿರುವಂತೆ ನೋಡಿಕೊಳ್ಳವಲ್ಲಿ ಬೇಜವಾಬ್ದಾರಿತನ ತೋರುತ್ತಿರು ವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ನಿಮ್ಮ ಮಕ್ಕಳಿಗೂ ಇಂತಹ ನೀರನ್ನೇ ಬಳಸುತ್ತೀರಾ ಎಂದು ಪ್ರಶ್ನಿಸಿದರಲ್ಲದೇ, ಮಕ್ಕಳು ಕಾಯಿಲೆಗೆ ತುತ್ತಾದರೆ ಯಾರು ಹೊಣೆ ಎಂದು ಆತಂಕ ವ್ಯಕ್ತಪಡಿಸಿದರು. ಬಿಇಒ ರಾಜುರವರು ಸಮಸ್ಯೆಗಳ ಬಗ್ಗೆ ಜಿಲ್ಲಾ ಪಂಚಾಯಿತ್ ಅಧ್ಯಕ್ಷರಿಗೆ ಮಾಹಿತಿ ನೀಡಿ ಶಿಕ್ಷಕರಿಗೆ ಎಚ್ಚರಿಕೆ ನೀಡಿದರು. ಇದೇ ವೇಳೆ ಸಾ.ರಾ. ನಂದೀಶ್ ಅವರು ಅಡುಗೆ ಪರಿಚಾರಕಿಯರು ಹಾಗೂ ಸ್ಟೋರ್ ಇನ್ಚಾರ್ಜ್‌ರವರ ಮಾತುಗಳಿಂದ ಅಸಮಾಧಾನಗೊಂಡರಲ್ಲದೇ ಬಿಸಿಯೂಟ ಸವಿದು ಗುಣಮಟ್ಟದ ಬಗ್ಗೆ ಪರಿಶೀಲಿಸಿದರು.
ಬಿಸಿಯೂಟದ ಖರ್ಚಿನ ಉಳಿಕೆ ಹಣದಲ್ಲಿ ಮೊಸರು ಅಥವಾ ಮಜ್ಜಿಗೆ ನೀಡುವಂತೆ ಶಿಕ್ಷಕರಿಗೆ ತಾಕೀತು ಮಾಡಿದರು. ಬಿಸಿಯೂಟದ ಅಧಿಕಾರಿ ಪ್ರದೀಪ್ ಅವರಿಂದ ಬಿಸಿಯೂಟಕ್ಕೆ ನೀಡುವ ಅಕ್ಕಿ, ಬೇಳೆ ಸಾಮಗ್ರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಮಾತನಾಡಿದ ಸಾ.ರಾ.ನಂದೀಶ್, ಬಿಸಿ ಯೂಟಕ್ಕೆ ಬಳಸುವ ನೀರು ಸ್ವಚ್ಛವಾಗಿಲ್ಲ,
ಶೌಚಾ ಲಯಗಳ ಸ್ವಚ್ಛತೆ ಸಾಲದು, ಮಕ್ಕಳಿಗೆ ಗುಣಮಟ್ಟದ ಆಹಾರ ಕೊಡಬೇಕು. ಸರ್ಕಾರ ನೀಡುವ ಬೇಳೆ, ಅಕ್ಕಿ ಗುಣಮಟ್ಟ ಸಾಲುತ್ತಿಲ್ಲ ಹಾಗೂ ಅಡುಗೆ ಯವರು ಸ್ವಚ್ಛತೆ ಕಾಪಾಡಬೇಕು ಎಂದರು. ಈ ವೇಳೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್, ಪುರಸಭಾಧ್ಯಕ್ಷೆ ಹರ್ಷಲತಾ ಶ್ರೀಕಾಂತ್, ಕ್ಷೇತ್ರ ಸಮನ್ವಯಾಧಿಕಾರಿ ರುದ್ರಪ್ಪ, ಶಿಕ್ಷಕ ಹನುಮಂತು ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.