ಸಿಡಿಲು ಸಹಿತ ಮಳೆಯ ಆರ್ಭಟಕ್ಕೆ ಹಾರಿಹೋದ ಚಾವಣಿಗಳು
Team Udayavani, Apr 10, 2017, 12:32 PM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನ ಹಾಗೂ ಹನಗೋಡು ಹೋಬಳಿ ಕೆಲ ಗ್ರಾಮಗಳಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ಬಿರುಗಾಳಿಗೆ ಕೆಲವೆಡೆ ಅಸಿಪಾಸ್ತಿ ನಷ್ಟವುಂಟು ಮಾಡಿದೆ.
ತಾಲೂಕಿನ ಹನಗೋಡು ಭಾಗದ ಕರಣಕುಪ್ಪೆ, ಹರೀನಹಳ್ಳಿ, ಕಡೇಮನುಗನಹಳ್ಳಿ, ನೇರಳಕುಪ್ಪೆ, ಬೀಲ್ಲೇನಹೊಸಹಳ್ಳಿ, ಬಿ.ಆರ್ ಕಾವಲ್ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ಮೋಡಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಮೊದಲು ಬಿರುಗಾಳಿ ಸಹಿತ, ಸ್ವಲ್ಪಮಳೆ ಬಂತು, ಮತ್ತೆ ರಾತ್ರಿ 9 ಗಂಟೆಗೆ ಆರಂಭವಾದ ಗುಡುಗು, ಸಿಡಿಲಿನಿಂದ ಕೂಡಿದ್ದ ಮಳೆಯು ಸತತ ಎರಡು ಗಂಟೆಗೂ ಹೆಚ್ಚು ಕಾಲ ಸುರಿದಿದೆ.
ಮನೆ ಚಾವಣಿ ಹಾಗೂ ಬೆಳೆ ನಾಶ: ಹನಗೋಡು ಹೋಬಳಿಯ ಹರೀನಹಳ್ಳಿ ಗ್ರಾಮದ ಶಿವಕುಮಾರ್ ಹಾಗೂ ಶಿವರಾಜು ಎಂಬುವರ ಮನೆಯ ಚಾವಣಿ ಹೆಂಚು ಹಾಗೂ ಶೀಟುಗಳು ಹಾರಿಹೋಗಿವೆ, ಅಲ್ಲದೆ ಇವರಿಗೆ ಸೇರಿದ ಬಾಳೆಬೆಳೆಯೂ ಸಹ ಬಿರುಗಾಳಿಯ ಹೊಡೆತಕ್ಕೆ ಸಿಲುಕಿದ್ದು, ಕರಣಕುಪ್ಪೆ ಗ್ರಾಮದ ಕೆ.ಎಂ.ರಾಜುಗೆ ಸೇರಿದ ಬಾಳೆ ಹಾಗೂ ತೋಟದ ಸುತ್ತ ನೆಟ್ಟಿದ್ದ ಸಿಲ್ವರ್ ಗಿಡಗಳು ಬುಡ ಸಮೇತ ನೆಲಕ್ಕುರುಳಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ.
ಇನ್ನು ದೇವರಾಜ ಕಾಲೋನಿ (ಕರ್ಣಕುಪ್ಪೆ ಹಾಡಿ) ಯ 8 ಮನೆಗಳ ಚಾವಣಿ ಸಂಪೂರ್ಣ ಹಾನಿಗೊಳ ಗಾಗಿದ್ದು, ಸುತ್ತಮುತ್ತಲಿನಲ್ಲಿ ಮನೆಗಳಿಲ್ಲದೆ, ದೇವರಾಜು, ಜಯಮ್ಮ, ಮುನಿಯಮ್ಮ, ಶಿವಮ್ಮ, ದೊಡ್ಡಮಯ್ಯ, ಸಾಕಮ್ಮ, ರತ್ನಮ್ಮ, ಸಿಳ್ಳಮಾರಯ್ಯ ಅವರುಗಳು ಸುತ್ತಮುತ್ತಲಿನಲ್ಲಿ ಎಲ್ಲೂ ಆಶ್ರಯ ಸಿಗದೆ ಮಳೆಯಲ್ಲೇ ರಾತ್ರಿ ಇಡೀ ಕಳೆದಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿ ಶ್ರೀನಿವಾಸ್ ಮತ್ತು ಪಿಡಿಒ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.