ಪುನೀತ್ ರಾಜಕುಮಾರ್ ಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಮರಣೋತ್ತರ ಗೌರವ ಡಾಕ್ಟರೇಟ್
Team Udayavani, Mar 13, 2022, 1:09 PM IST
![ಪುನೀತ್ ರಾಜಕುಮಾರ್ ಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಮರಣೋತ್ತರ ಡಾಕ್ಟರ್ ಗೌರವ](https://www.udayavani.com/wp-content/uploads/2022/03/puneeth-1-620x342.jpg)
![ಪುನೀತ್ ರಾಜಕುಮಾರ್ ಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಮರಣೋತ್ತರ ಡಾಕ್ಟರ್ ಗೌರವ](https://www.udayavani.com/wp-content/uploads/2022/03/puneeth-1-620x342.jpg)
ಮೈಸೂರು: ದಿವಂಗತ ನಟ ಪುನೀತ್ ರಾಜಕುಮಾರ್ ರವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ
ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಮೈಸೂರು ವಿವಿಯಿಂದ ಈ ಮುಖೇನ ಉಡುಗೊರೆ ನೀಡಲಾಗುತ್ತಿದೆ. ಪುನೀತ್ ರಾಜಕುಮಾರ್ ಕುಟುಂಬದವರನ್ನು ಸಂಪರ್ಕ ಮಾಡಿದ್ದೇವೆ. ಪುನೀತ್ ಪತ್ನಿ ಅಶ್ವಿನಿಯವರು ಘಟಿಕೋತ್ಸವಕ್ಕೆ ಬರಲು ಒಪ್ಪಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೋ ಹೇಮಂತ್ ಕುಮಾರ್ ಘೋಷಣೆ ಮಾಡಿದರು.
ಮಾರ್ಚ 22 ಕ್ಕೆ ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ದಿನ ಮೂವರು ಮಹನೀಯರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು. ಚಲನಚಿತ್ರ ನಟ ದಿವಂಗತ ಪುನೀತ್ ರಾಜಕುಮಾರ ಗೆ ಮರಣೋತ್ತರ ಡಾಕ್ಟರೇಟ್, ಹಿರಿಯ ವಿಜ್ಞಾನಿ ಡಾ ವಿ.ಎಸ್. ಅತ್ರೆ ಮತ್ತು ಜನಪದ ಗಾಯಕ ಮಳ್ಳವಳ್ಳಿ ಮಹಾದೇವಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದರು.
ಇದನ್ನೂ ಓದಿ:ಕಳೆದು ಹೋಗಿದ್ದ ಪುತ್ರನನ್ನು ಹುಡುಕಿಕೊಟ್ಟ ಆಧಾರ್: 6 ವರ್ಷದ ಬಳಿಕ ಅಮ್ಮನ ಮಡಿಲು ಸೇರಿದ ಮಗ
ಘಟಿಕೋತ್ಸವದಂದು 28581 ಅಭ್ಯರ್ಥಿಗಳಿಗೆ ಪದವಿ ಪ್ರದಾನ, 5677 ಅಭ್ಯರ್ಥಿ ಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು. ವಿವಿಧ ಅಭ್ಯರ್ಥಿಗಳು ಚಿನ್ನದ ಪದಕ ಇತರೆ ಬಹುಮಾನ ಪಡೆದಿದ್ದಾರೆ. ಘಟಿಕೋತ್ಸವದ ಭಾಷಣವನ್ನು ಎಸ್ ಸಿ ಶರ್ಮಾ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಕುಲಪತಿ ಪ್ರೋ ಹೇಮಂತ್ ಕುಮಾರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![5-hunsur](https://www.udayavani.com/wp-content/uploads/2025/02/5-hunsur-3-150x90.jpg)
![5-hunsur](https://www.udayavani.com/wp-content/uploads/2025/02/5-hunsur-3-150x90.jpg)
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
![Mys-Udgiri-1](https://www.udayavani.com/wp-content/uploads/2025/02/Mys-Udgiri-1-1-150x90.jpg)
![Mys-Udgiri-1](https://www.udayavani.com/wp-content/uploads/2025/02/Mys-Udgiri-1-1-150x90.jpg)
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
![24](https://www.udayavani.com/wp-content/uploads/2025/02/24-2-150x90.jpg)
![24](https://www.udayavani.com/wp-content/uploads/2025/02/24-2-150x90.jpg)
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
![11](https://www.udayavani.com/wp-content/uploads/2025/02/11-16-150x90.jpg)
![11](https://www.udayavani.com/wp-content/uploads/2025/02/11-16-150x90.jpg)
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
![ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್](https://www.udayavani.com/wp-content/uploads/2025/02/6-17-150x90.jpg)
![ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್](https://www.udayavani.com/wp-content/uploads/2025/02/6-17-150x90.jpg)
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್