ಕುಂಬಾರಿಕೆ ಕೌಶಲ್ಯ, ಮಣ್ಣಿನಲ್ಲಿ ಅರಳಿದ ಕಲಾಕೃತಿಗಳು
Team Udayavani, Apr 29, 2019, 3:00 AM IST
ತಿ.ನರಸೀಪುರ: ವೃತ್ತಿ ಯಾವುದೇ ಆದರೂ ಬದುಕು ರೂಪಿಸಿಕೊಳ್ಳುವ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಇಲ್ಲೋರ್ವ ಕುಂಬಾರಿಕೆ ವೃತ್ತಿ ಕೈಗೊಂಡು ಆಕರ್ಷಕ ಮಣ್ಣಿನ ಕಲಾಕೃತಿಗಳನ್ನು ತಯಾರಿಸಿ ರಾಜ್ಯ, ಹೊರ ರಾಜ್ಯಗಳಲ್ಲಿ ತನ್ನದೇ ಕೌಶಲ್ಯ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.
ತಾಲೂಕಿನ ಬನ್ನೂರು ಹೋಬಳಿ ದೊಡ್ಡಮುಲಗೂಡು ಗ್ರಾಮದ ಡಿ.ಗೋವಿಂದ ಅವರು ತಮ್ಮ ಅದ್ಭುತ ಕರ ಕುಶಲ ಕಲೆಯನ್ನು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೆಹಲಿ, ಗೋವಾ, ಚೆನ್ನೈ ಸೇರಿದಂತೆ ವಿವಿಧೆಡೆ ತಮ್ಮ ಕಲೆಯ ಪ್ರಾತ್ಯಕ್ಷಿಕೆ, ಪ್ರದರ್ಶನ ನೀಡಿದ್ದಾರೆ.
ಬದುಕು ನಿರ್ವಹಣೆ: ತಮ್ಮ ಮನೆಯ ಹಿಂಭಾಗದ ಒಂದು ಸಣ್ಣ ಕೊಠಡಿಯಲ್ಲಿ ತಿರುಗುವ ಚಕ್ರದಲ್ಲಿ ಸಿಗುವ ಮಣ್ಣಿನಿಂದ ವಿವಿಧ ಕಲಾಕೃತಿಗಳನ್ನು ತಯಾರಿಸಿ, ಅವುಗಳಿಗೆ ಬಣ್ಣ ಹಚ್ಚಿ ಸೌಂದರ್ಯದ ಕಳೆ ನೀಡಿ ಬಳಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನದ ಮೂಲಕ ಮಾರಾಟ ಮಾಡಿ ಬದುಕಿನ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಬೆನ್ನೆಲುಬಾಗಿ ಇವರ ಪತ್ನಿ ಎಸ್.ಬಿ.ಶ್ರುತಿ ಸಹಕರಿಸುತ್ತಿದ್ದಾರೆ.
ಆಕರ್ಷಕ ಕಲಾಕೃತಿಗಳು: ಉತ್ತಮ ಕೌಶಲ್ಯದೊಂದಿಗೆ ಕುಂಬಾರಿಕೆಯನ್ನು ವೃತ್ತಿ ಮಾಡಿಕೊಂಡಿರುವ ಗೋವಿಂದ್ ದಂಪತಿ ಮಣ್ಣಿನ ಜಗ್, ಗಣಪತಿ, ಹೂವಿನ ಕುಂಡ, ಆಮೆಯ ಬಟ್ಟಲು, ಮಾಯ ದೀಪ(ಮ್ಯಾಜಿಕ್ ಲ್ಯಾಂಪ್) ಬುದ್ಧನ ವಿಗ್ರಹ, ತೊಟ್ಟಿಲು, ಬುಟ್ಟಿ ಗೋಡೆಗಳಿಗೆ ಬಳಸಬಹುದಾದ ವಿವಿಧ ಕಲಾಕೃತಿಗಳನ್ನು ತಯಾರಿಸುತ್ತಾರೆ.
ಕನಸುಗಳಿಗೊಂದು ರೆಕ್ಕೆ ಕಟ್ಟಿ ಬೇಸಿಗೆ ರಜೆಯ ವೇಳೆ ಹಲವಾರು ಮಕ್ಕಳಿಗೆ ಕರಕುಶಲ ತರಬೇತಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ಕೈಗಾರಿಕಾ ಹಾಗೂ ಉದ್ಯಮ ಶೀಲ ತರಬೇತಿ ಕಾರ್ಯಾಗಾರಗಳಲ್ಲಿ ಕೂಡ ಭಾಗವಹಿಸಿ ಫಲಾನುಭಗಳಿಗೆ ಕರಕುಶಲ ತರಬೇತಿ ನೀಡುತ್ತಿದ್ದಾರೆ.
ಬದುಕಿಗೆ ತಿರುವು ಕೊಟ್ಟ ತರಬೇತಿ: ಸ್ವಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಓದಿನ ನಂತರ ರಾಮನಗರದ ಭಾವನ ಮನೆಗೆ ಉದ್ಯೋಗ ಹುಡುಕಲೆಂದು ಹೊರಟ ಗೋವಿಂದ ಅವರು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಡೆಸುತ್ತಿದ್ದ 9 ತಿಂಗಳ ಕರಕುಶಲ ತರಬೇತಿಗೆ ಸೇರಿದರು. ತರಬೇತಿ ಪಡೆಯುತ್ತಿದ್ದ ವೇಳೆ ಅವರಲ್ಲಿ ಮೂಡಿದ ಆಸಕ್ತಿ ಅದೇ ಬದುಕಿನ ವೃತ್ತಿಯಾಗುವಂತೆ ಮಾಡಿತು. ಅಲ್ಲಿಯೇ ಕಲಾಕೃತಿಗಳ ತಯಾರಿಕೆಗೆ ಅವಕಾಶ ದೊರಕಿದ್ದರಿಂದ ಸಾಕಷ್ಟು ಕೆಲಸ ಕಲಿತಿದ್ದಾರೆ.
ರಾಮನಗರದ ಮಣ್ಣು: ರಾಮನಗರ ಮೂಲದಿಂದ ಮಣ್ಣು ತಂದು ಅದನ್ನು ಹದ ಮಾಡಿ ಆಕೃತಿಗಳನ್ನು ತಯಾರಿಸುತ್ತಾರೆ. ಇವರ ಪ್ರದರ್ಶನಕ್ಕೆ ಹಲವಾರು ಪ್ರಮಾಣ ಪತ್ರ ಲಭ್ಯವಾಗಿದ್ದರೂ ಕಲೆಯನ್ನು ನಂಬಿರುವ ಇವರಿಗೆ ಅಗತ್ಯ ಪೋ›ತ್ಸಾಹ ದೊರಕುತ್ತಿಲ್ಲ.
ಸುಮಾರು 25 ವರ್ಷಗಳ ಸೇವೆ ಇದ್ದರೂ ಯಾರು ನಮ್ಮ ಕಲೆ ಗುರುತಿಸಿ ಗೌರವಿಸುತ್ತಿಲ್ಲ ಎಂಬ ನೋವಿದೆ ಆದರೂ ಕಲೆಯು ತಮಗೆ ಆತ್ಮ ತೃಪ್ತಿ ನೀಡುತ್ತಿದೆ. ಒಂದಷ್ಟು ಮಂದಿಯಾದರೂ ನಮ್ಮ ಪ್ರತಿಭೆಯನ್ನು ಪೋ›ತ್ಸಾಸಿ ಕಲಾಕೃತಿಗಳನ್ನು ಖರೀದಿಸುತ್ತಿದ್ದಾರೆ. ನಾವು ಕಲಿತ ಹಾಗೆ ಹಲವರಿಗೆ ತರಬೇತಿ ನೀಡಿ ಇಂತಹ ವೃತ್ತಿಗಳು ಸಮಾಜದಿಂದ ಅಳಿಸಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ ಎನ್ನುತ್ತಾರೆ ಗೋವಿಂದ್.
* ಎಸ್.ಬಿ. ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.