Siddaramaiahಗೆ ಅಧಿಕಾರ ಕೊಟ್ಟರೆ ಗೋವು ತಿನ್ನುವವರು ಜಾಸ್ತಿಯಾಗುತ್ತಾರೆ: ಪ್ರತಾಪ ಸಿಂಹ
Team Udayavani, Apr 10, 2023, 12:43 PM IST
ಮೈಸೂರು: ಹಾಲು ಕೊಡುವ ಹಸುವನ್ನು ಕಡಿಯುವವರ ಪರ ಇರುವುದು ಸಿದ್ದರಾಮಯ್ಯ. ಅವರಿಗೆ ಅಧಿಕಾರ ಕೊಟ್ಟರೆ ಗೋವು ತಿನ್ನುವವರು ಜಾಸ್ತಿಯಾಗುತ್ತಾರೆ. ಸಿದ್ದರಾಮಯ್ಯ ಅವರು ಗೋ ಹತ್ಯೆ ಮಾಡುವವರ ಪರ ಇದ್ದಾರೆ ಎಂಬುದು ಎಲ್ಲರಿಗೆ ಗೊತ್ತಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಬಗ್ಗೆ ನಿಜವಾದ ಕಾಳಜಿ ಬಿಜೆಪಿಗಿದೆ. ಕಾಂಗ್ರೆಸ್, ಜೆಡಿಎಸ್ ನಿಂದ ನಾವು ಪಾಠ ಕಲಿಯಬೇಕಾಗಿಲ್ಲ. ನಂದಿನಿ ಹಾಲಿಗೆ ಪ್ರೋತ್ಸಾಹ ಧನ ಕೊಟ್ಟವರು ಯಡಿಯೂರಪ್ಪ. ಸಿದ್ದರಾಮಯ್ಯಗೆ ಹಾಲು ಕೊಡುವ ಗೋವು ಬೇಕಾಗಿಲ್ಲ. ಗೋವು ತಿನ್ನುವವರ ಮತ ಬೇಕು ಅಷ್ಟೆ ಎಂದರು.
ನಮ್ಮ ಸರಕಾರ ವಿಲೀನವಿಲ್ಲವೆಂದು ಘಂಟಾಘೋಷವಾಗಿ ಹೇಳಿದೆ. ಆದರೂ ಸುಳ್ಳು, ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್, ಜೆಡಿಎಸ್ ಸುಳ್ಳು ಆರೋಪವನ್ನೇ ಪುನರಾವರ್ತನೆ ಮಾಡುತ್ತಿವೆ. ಮೊದಲು ಹಿಂದಿ ಹೇರಿಕೆ ಅಂದರು ಈಗ ಅಮುಲ್ ಹೇರಿಕೆಯೆಂದು ಸುಳ್ಳು ಹರಡಿಸುತ್ತಿದ್ದಾರೆ. ಹೆರಿಟೇಜ್, ಡೂಡ್ಲ, ಆರೋಕ್ಯ ಎಂಬ ಹಾಲಿನ ಬ್ರಾಂಡ್ ಗಳು ನಂದಿನಿಯ ಅಕ್ಕತಂಗಿಯರಾ? ಅಥವಾ ತಮಿಳು ನಾಡು ಮತ್ತು ಆಂಧ್ರದಿಂದ ಬಂದ ಸೊಸೆ, ಅಳಿಯಂದಿರಾ? ಇಷ್ಟು ವರ್ಷದಿಂದ ಈ ಬ್ರಾಂಡ್ ಗಳು ಕರ್ನಾಟಕದಲ್ಲಿ ಮಾರಾಟವಾಗುತ್ತಿಲ್ವಾ? ಬಿಜೆಪಿ ಬಂದ ಮೇಲೆ ಇವು ರಾಜ್ಯಕ್ಕೆ ಬಂದವಾ ಎಂದು ಖಾರವಾಗಿ ಪ್ರಶ್ನಿಸಿದರು.
ಬಂಡೀಪುರದಲ್ಲಿ ಪ್ರಧಾನಿಗೆ ಹುಲಿ ಕಾಣಲಿಲ್ಲ ಎಂಬ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ, ಗುಜರಾತ್ ನ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಯಾಕೆ ಕಾಂಗ್ರೆಸಿಗರು ಹೂಳಿಡುತ್ತಾರೆ? ಸಿದ್ದರಾಮಯ್ಯ ಅವರೇ ಈ ಭಯ ನಿಮ್ಮ ಎದೆಯಲ್ಲಿ ಇರಬೇಕು. ಮೇ 10 ರಂದು ಈ ಭಯ ಮತ್ಯಾವಾ ರೀತಿ ಗೋಚರವಾಗುತ್ತದೆ ನೋಡಿ. ಪ್ರಧಾನಿಗಳು ವನ್ಯಜೀವಿಗಳ ಕಾಳಜಿಗಾಗಿ ದೆಹಲಿಯಿಂದ ಬಂಡೀಪುರಕ್ಕೆ ಬಂದರು. ಸಿದ್ದರಾಮಯ್ಯ ಅವರೇ ನೀವು ಸಿಎಂ ಆಗಿದ್ದವರ ಒಂದು ದಿನವೂ ಬಂಡೀಪುರ, ನಾಗರಹೊಳೆ ಹೋಗಲಿಲ್ಲ. ಮೈಸೂರಿಗೆ ಬಂದು ಕುರಿ ಚರ್ಬಿ ತಿಂದು ಹೋಗ್ತಿದ್ದವರು ನೀವು ನಿಮ್ಮಿಂದ ಪ್ರಧಾನಿಗಳ ಹುಲಿ ಬಗ್ಗೆ ಪಾಠ ಬೇಡ. ಏರ್ ಪೋರ್ಸ್ ನ ಮೂರು ಹೆಲಿಕಾಪ್ಟರ್ ಗಳು ಏಕ ಕಾಲಕ್ಕೆ ಬಂದ ಕಾರಣ ಶಬ್ದ ಹೆಚ್ಚಾಗಿ ಪ್ರಾಣಿಗಳು ದಟ್ಟ ಅರಣ್ಯದೊಳಗೆ ಹೋಗಿವೆ. ಇಷ್ಟು ಕನಿಷ್ಟ ಲೋಕಾಜ್ಞಾನವೂ ನಿಮಗೆ ಇಲ್ಲ ಎಂದರೆ ಹೇಗೆ ಹೇಳಿ? ಭ್ರಷ್ಟರ ಪಾಲಿಗೆ ಹುಲಿಯಂತಿದ್ದ ಲೋಕಾಯುಕ್ತ ಎಂಬ ಹುಲಿಯನ್ನೆ ಮುಗಿಸಿದರು ನೀವು. ನಿಮ್ಮಿಂದ ನಮಗೆ ಪಾಠ ಬೇಡ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.