ಪ್ರತಿಮಾ ಗ್ಯಾಲರಿಯ ಬೊಂಬೆಮನೆಯಲ್ಲಿ ಬೊಂಬೆಗಳ ಲೋಕ ಅನಾವರಣ
Team Udayavani, Sep 14, 2019, 3:00 AM IST
ಮೈಸೂರು: ದಸರಾ ಎಂದರೆ ಜಂಬೂಸವಾರಿ ಮಾತ್ರವಲ್ಲ ಮೈಸೂರಿನಲ್ಲಿ ದಸರಾ ಬೊಂಬೆ ಹಬ್ಬವೂ ನಡೆಯುತ್ತೆ, ನವರಾತ್ರಿ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಬೊಂಬೆ ಕೂರಿಸಿ ಪೂಜಿಸಲಾಗುತ್ತದೆ. ನಗರದ ನಜರ್‌ಬಾದ್‌ನಲ್ಲಿರುವ ಪ್ರತಿಮಾ ಗ್ಯಾಲರಿಯಲ್ಲಿ ಏರ್ಪಡಿಸಿರುವ ಬೊಂಬೆ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ.
ಪ್ರತಿಮಾ ಗ್ಯಾಲರಿಯ ಈ ಬೊಂಬೆ ಮನೆ ಹತ್ತಾರು ಕಥೆಗಳನ್ನು ಹೇಳುತ್ತಾ, ಇತಿಹಾಸವನ್ನು ಮರು ಪರಿಚಯಿಸುವ ಕೆಲಸ ಮಾಡುತ್ತಿದೆ. 60 ವರ್ಷಗಳ ಹಿಂದೆ ತಯಾರಾದ ಬಾರ್ಬೀ ಬೊಂಬೆಯ ಷಷ್ಟಬ್ದಿಪೂರ್ತಿಗೆ ಬೊಂಬೆ ಮನೆಯಲ್ಲಿ ವಿಶೇಷ ಅಂಕಣ ಮಾಡಲಾಗಿದೆ. ಬಾರ್ಬೀಗೊಂಬೆಯ ವೈವಿಧ್ಯಮಯ ಅವತಾರಗಳ ಜೊತೆಗೆ ಜರ್ಮನಿ, ಉಜ್ಬೇಕಿಸ್ತಾನ್, ಫ್ರಾನ್ಸ್, ಥೈಲ್ಯಾಂಡ್, ವಿಯೆಟ್ನಾಂ, ಬ್ರಿಟನ್ ಮತ್ತಿತರ ಸುಮಾರು ಹತ್ತು ದೇಶಗಳ ಸಾಂಪ್ರದಾಯಿಕ ಬೊಂಬೆಗಳ ದೃಶ್ಯಾವಳಿ ಮನಮೋಹಕವಾಗಿದೆ.
ವರ್ಣಾಂಕಿತ: ವರ್ಣಾಂಕಿತ ಎಂಬ ಮತ್ತೊಂದು ವಿಶೇಷ ಅಂಕಣದಲ್ಲಿ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ನೀಡಲಾಗಿರುವ ನಾಮ-ತಿಲಕಗಳನ್ನು ಪ್ರದರ್ಶಿಸಲಾಗಿದೆ. ಹಿಂದೂ ಧರ್ಮದ ವಿವಿಧ ಪ್ರಭೇದಗಳ, ಮನೆ-ಮಠಗಳ ಸಂಪ್ರದಾಯದ ಶಿರಾರ್ಥ, ವಸ್ತ್ರ, ಅಲಂಕರಣ, ಸಂಜ್ಞಾ ವೈಶಿಷ್ಟéಗಳು, ಸನಾತನ ಜ್ಞಾನದ ಸಮಾಜಮುಖಿ ಸಂಘ ಸೂಚಿಗಳು, ಕುಂಕುಮ, ಅರಿಶಿನ, ಕಾಡಿಗೆ, ವಿಭೂತಿ-ಭಸ್ಮಗಳಲ್ಲದೆ,
ಅಗರು, ಗೋಪಿಚಂದನ, ತುಲಸೀಚೂರ್ಣ, ಕೇಸರಿ, ಸಿಂಧೂರ, ಅಂಗಾರಕ, ಭಂಡಾರ, ಬುಕ್ಕ, ಸಾದ್, ಗಂಧಾಕ್ಷತ, ಗೋರೋಚನ, ಗುಲಾಲ್ ಇತ್ಯಾದಿ ದ್ರವ್ಯ ವಿಶೇಷಗಳ ಬಳಕೆ, ಹಣೆಯ ಜೊತೆಗೆ ಕೆನ್ನೆ, ಕಪೋಲ, ನಾಸಿಕಗಳು ಕೆಲವೊಮ್ಮೆ ದೇಹದ ಬೇರೆ ಬೇರೆ ಭಾಗಗಳಲ್ಲಿ ತಿಲಕ ಅಲಂಕಾರ ಮಾಡಿಕೊಳ್ಳುವುದು ಸಹಜ. ಹಲವು ಜನಾಂಗಗಳವರು, ಅವರ ನಂಬಿಕೆಗಳು ಹೇಗೆ ವೈವಿಧ್ಯವೋ ಅಂತೆಯೇ ಅವರ ತಿಲಕಗಳು ಕೂಡ ವಿಶಿಷ್ಟ.
ಗಣ್ಯರ ವಿಶೇಷತೆ: ಇದರ ಜೊತೆಗೆ ಈ ವರ್ಷ ಮಹಾತ್ಮ ಗಾಂಧಿ ಸೇರಿದಂತೆ ಹಲವಾರು ಮಹನೀಯರ ಜನ್ಮ ವಾರ್ಷಿಕೋತ್ಸವಗಳ ವಿಶೇಷವಿದೆ. ಮಹಾತ್ಮ ಗಾಂಧಿ 150ನೇ ವರ್ಷ, ಮೈಸೂರಿನ 24ನೇಯ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್-135, ಪಂ.ಜವಹರಲಾಲ್ ನೆಹರು-130, ಮೈಸೂರಿನ 25ನೇ ಮಹಾರಾಜ ಜಯಚಾಮರಾಜ ಒಡೆಯರ್‌ರ 100ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬೊಂಬೆ ಮನೆಯಲ್ಲಿ ಇವರುಗಳಿಗೆ ಸಂಬಂಧಿಸಿದ ಬೊಂಬೆಗಳು, ಚಿತ್ರಪಟಗಳು, ಛಾಯಾಚಿತ್ರಗಳು ಹಾಗೂ ವಸ್ತು ವಿಶೇಷಗಳ ಪ್ರದರ್ಶನ ಆಯೋಜಿಸಲಾಗಿದೆ.
ದೇವತೆಯ ಕೈಯಲ್ಲಿ ಕುಳಿತು ಅವರೊಡನೆ ಸಲ್ಲಾಪ ನಡೆಸುವಂತೆ ಕಾಣುವ ಲೀಲಾ ಶುಕ ಗಿಳಿಯ ಹಲವಾರು ಬಣ್ಣಗಳಿಂದ ಕಣ್ಣು ಕೋರೈಸುವಂತೆ ರಂಜಿತಗೊಂಡ ವಿವಿಧ ಆಕಾರ, ಅಳತೆಗಳ ನೂರಾರು ಗಿಳಿಗಳು ಲೀಲಾ ಶುಕ ಅಂಕಣದಲ್ಲಿವೆ. ಇವುಗಳ ಜೊತೆಗೆ ಹಲವಾರು ನವೀನ ಮಾದರಿಯ ಗೊಂಬೆಗಳು ಬೊಂಬೆ ಮನೆಯ 15ನೇ ಅವತರಣಿಕೆಯಲ್ಲಿವೆ. ಮೈಸೂರಿನ ರಾಜದಂಪತಿ ಅಪ್ಪಾಜಿ-ಅಮ್ಮಣ್ಣಿಯರು, ಗಜೇಂದ್ರಮೋಕ್ಷ, ಸಪ್ತನದಿಗಳು, ನವನಟರಾಜ, ಅತ್ತಿ ವರದರಾಜ ಸ್ವಾಮಿ, ರಾಮ-ಗುಹ ಆಲಿಂಗನ, ಗೊಂಬೆ ವಧು-ವರರ ಜೋಡಿ..
ಹೀಗೆ ಪ್ರತಿಮಾ ಗ್ಯಾಲರಿಯಲ್ಲಿ ಅನುಪಮ ಗೊಂಬೆಗಳ ಮೇಳವೇ ಸೇರಿದೆ. ನಜರ್‌ಬಾದ್ ಮುಖ್ಯರಸ್ತೆಯಲ್ಲಿರುವ ಪ್ರತಿಮಾ ಗ್ಯಾಲರಿಯಲ್ಲಿ ರಾಮ್‌ಸನ್ಸ್ ಕಲಾ ಪ್ರತಿಷ್ಠಾನ ಆಯೋಜಿಸಿರುವ ಬೊಂಬೆ ಮನೆಯನ್ನು ವರ್ಷಪೂರ್ತಿ ಬೆಳಗ್ಗೆ 10 ರಿಂದ ಸಂಜೆ 7.30ರವರೆಗೆ ವೀಕ್ಷಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್
Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ
ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.