‘ನಾನು ಗರ್ಭಿಣಿ, ಹೊಟ್ಟೆ ನೋಯುತ್ತಿದೆ ಎಂದರೂ ಬಿಡುತ್ತಿಲ್ಲ’ ಪೊಲೀಸರ ವಿರುದ್ಧ ಮಹಿಳೆ ಸಿಟ್ಟು
Team Udayavani, May 28, 2021, 4:59 PM IST
ಮೈಸೂರು: ಕೋವಿಡ್ ಲಾಕ್ ಡೌನ್ ಕಾರಣದಿಂದ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡುವವರನ್ನು ಪೊಲೀಸರು ವಿಚಾರಿಸಿ ದಂಡ ಹಾಕುತ್ತಿದ್ದಾರೆ. ಹಲವು ಕಡೆ ವಾಹನ ಜಪ್ತಿ ಮಾಡಿದ ಪ್ರಸಂಗವೂ ನಡೆದಿದೆ. ಬೆಳಗ್ಗೆ 10 ಗಂಟೆಯ ಬಳಿಕ ವೈದ್ಯಕೀಯ ತುರ್ತು ಹೊರತುಪಡಿಸಿ ಯಾರೂ ತಿರುಗಾಡುವಂತಿಲ್ಲ. ಇದೇ ರೀತಿ ಮಹಿಳೆಯೋರ್ವರು ತಾನು ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ಹೇಳಿದರೂ ಬಿಡದ ಕಾರಣ ಪೊಲೀಸರ ವಿರುದ್ಧವೇ ಸಿಟ್ಟಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಈ ಘಟನೆ ನಡೆದಿದೆ. ಮಹಿಳೆಯು ಗರ್ಭಿಣಿಯಾಗಿದ್ದು, ಸಂಬಂಧಿಯೊಡನೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಪೊಲೀಸರು ಬೈಕ್ ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ:ವೈದ್ಯರು-ಪೊಲೀಸ್-ವೇಶ್ಯೆಯರಿಗೆ ಆಹಾರ: ಹಸಿದವರ ಪಾಲಿಗೆ ಅನ್ನಪೂರ್ಣೆ ಈ ಆಕಾಂಕ್ಷಾ
ನಾನು ಗರ್ಭಿಣಿ, ಹೊಟ್ಟೆ ನೋಯುತ್ತಿದೆ, ಆಸ್ಪತ್ರೆಗೂ ಹೋಗುತ್ತಿದ್ದೆನೆ ಎಂದು ಹೇಳಿದರೂ ಬಿಡುತ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಇತರ ಪೊಲೀಸರು ಸರಿಯಾಗಿ ನಡೆದುಕೊಂಡರೂ ಲೇಡಿ ಪೊಲೀಸ್ ತಮ್ಮ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆಂದು ಮಹಿಳೆ ಕಣ್ಣೀರಿಟ್ಟರು.
ಒಂದು ಹಂತದಲ್ಲಿ ಗರ್ಭಿಣಿ ಹಾಗೂ ಮಹಿಳಾ ಪೊಲೀಸ್ ಕೈಕೈ ಮಿಲಾಯಿಸುವ ಹಂತಕ್ಕೆ ಹೋದರು. ಕೊನೆಗೆ ಮಹಿಳೆಯನ್ನು ಸಮಾಧಾನಪಡಿಸಿದ ಪೊಲೀಸರು ಕಳುಹಿಸಿದರು.
ಇದನ್ನೂ ಓದಿ: ಅಧಿಕಾರಿಗಳನ್ನು ಟ್ರಾನ್ಸಫರ್ ಮಾಡುವುದೇ ತಾಕತ್ತಾದರೆ, ಆ ತಾಕತ್ತು ನನಗೆ ಬೇಡ: ಪ್ರತಾಪ್ ಸಿಂಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.