ಕೋವಿಡ್ ಭೀತಿಯ ನಡುವೆ ಜಂಬೂ ಸವಾರಿಗೆ ಸಕಲ ಸಿದ್ದತೆ: ಗಜಪಡೆಗೆ ವರ್ಣಾಲಂಕಾರ
Team Udayavani, Oct 26, 2020, 8:59 AM IST
ಮೈಸೂರು: ವಿಶ್ವವಿಖ್ಯಾತ ಮೈಸೂರು ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಕೋವಿಡ್-19 ಸೋಂಕು ಭೀತಿಯ ಕಾರಣದಿಂದ ಈ ಬಾರಿಯ ಆಚರಣೆಗಳಲ್ಲಿ ಹಲವು ಮಾರ್ಪಾಡು ಮಾಡಲಾಗಿದೆ. ಅರಮನೆಯಲ್ಲಿ ಈಗಾಗಲೇ ಆಚರಣೆಗಳು ಆರಂಭವಾಗಿದ್ದು, ಗಜಪಡೆಗೆ ವರ್ಣಾಲಂಕಾರ ಮಾಡಲಾಗುತ್ತಿದೆ.
ಈ ಬಾರಿ ಕೋವಿಡ್-19 ಸೋಂಕು ಭೀತಿಯಿಂದ ಜಂಬೂ ಸವಾರಿ ಅರಮನೆ ಆವರಣಕ್ಕಷ್ಟೇ ಸೀಮಿತವಾಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಸರಾ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2.59ರಿಂದ 3.20ರ ಮಕರ ಲಗ್ನದಲ್ಲಿ ಸಿಎಂ ಯಡಿಯೂರಪ್ಪ ಅವರಿಂದ ನಂದಿಧ್ವಜಕ್ಕೆ ಪೂಜೆ ನೆರವೇರಲಿದೆ. ಮಧ್ಯಾಹ್ನ 3.40ರಿಂದ 4.15ರ ಕುಂಭ ಲಗ್ನದಲ್ಲಿ ಯಡಿಯೂರಪ್ಪ ಹಾಗೂ ಯದುವೀರ್ ಅವರಿಂದ ಪುಷ್ಪಾರ್ಚನೆ ನಡೆಯಲಿದೆ. ಸುಮಾರು 30ರಿಂದ 40 ನಿಮಿಷಗಳಲ್ಲಿ ಈ ಬಾರಿಯ ಜಂಬೂ ಸವಾರಿ ಅಂತ್ಯವಾಗಲಿದೆ.
ಪ್ರತಿ ವರ್ಷದಂತೆ ಜಂಬೂ ಸವಾರಿ ವೀಕ್ಷಣೆಗೆ ಈ ಬಾರಿ ಸಾರ್ವಜನಿಕರಿಗೆ ಅವಕಾಶ ನೀಡಲಾಗಿಲ್ಲ. ಕೋವಿಡ್ ಕಾರಣದಿಂದ ಈ ಬಾರಿ ಕೇವಲ 300 ಜನರಿಗೆ ಮಾತ್ರ ಜಂಬೂ ಸವಾರಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಬಾರಿ ಅಭಿಮನ್ಯು ಆನೆ ಅಂಬಾರಿ ಹೊರಲಿದೆ. ಕೇವಲ ಐದು ಆನೆಗಳು ಮಾತ್ರ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಲಿದೆ. ಗಜಪಡೆಯ ನೇತೃತ್ವ ವಹಿಸಿರುವ ಅಭಿಮನ್ಯು ಜೊತೆಗೆ ಕಾವೇರಿ, ವಿಜಯಾ, ಗೋಪಿ, ವಿಕ್ರಮ ಆನೆಗು ಹೆಜ್ಜೆ ಹಾಕಲಿವೆ. ಆನೆಗಳಿಗೆ ಚಿತ್ತಾರ ಮೂಡಿಸುವ ಕಾರ್ಯ ಆರಂಭವಾಗಿದ್ದು, ಹುಣಸೂರು ಮೂಲದ ಖ್ಯಾತ ಕಲಾವಿದ ನಾಗಲಿಂಗಪ್ಪ ಅವರ ತಂಡದಿಂದ ಗಜಪಡೆಗೆ ವರ್ಣಾಲಂಕಾರ ನಡೆಯುತ್ತಿದೆ.
ಇದನ್ನೂ ಓದಿ:ಅಧರ್ಮದ ವಿರುದ್ಧ ಧರ್ಮದ ವಿಜಯ: ವಿಜಯ ದಶಮಿಯ ಶುಭ ಕೋರಿದ ಸಿಎಂ ಬಿಎಸ್ ವೈ
ಅರಮನೆ ಆವರಣ ಸೇರಿ ಅರಮನೆಯ ಸುತ್ತ ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಲಾಗಿದೆ. ಅರಮನೆಯ ಸುತ್ತ ಹಾಗೂ ಒಳ ಭಾಗದಲ್ಲಿ ಒಟ್ಟು 5 ತಂಡಗಳಿಂದ ತಪಾಸಣೆ ನಡೆಸಲಾಗಿದ್ದು, ಅರಮನೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.