ನಾಡಹಬ್ಬ ದಸರಾ ಉತ್ಸವಕ್ಕೆ ಭರದ ಸಿದ್ಧತೆ
Team Udayavani, Aug 1, 2022, 5:12 PM IST
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿ ಎಂದೇ ಬಿಂಬಿತ ವಾಗಿರುವ ಗಜ ಪಯಣಕ್ಕೆ ಜಿಲ್ಲಾಡಳಿ ಮತ್ತು ಅರಣ್ಯ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದ್ದು, ಗಜಪಡೆಯನ್ನು ಅರಮನೆಗೆ ಕರೆತರಲು ಅರಣ್ಯ ಇಲಾಖೆ ಸಕಲ ಸಿದ್ಧತೆ ನಡೆಸಿದೆ.
ಆ.7 ರಂದು ಗಜಪಯಣ ನಡೆಯಲಿದ್ದು, ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಮೈಸೂರಿಗ ಆಗಮಿಸಲಿವೆ. ಅಂಬಾರಿ ಆನೆ ಅಭಿಮನ್ಯು ಜತೆ ಅರ್ಜುನ, ಧನಂಜಯ, ಗೋಪಾಲಸ್ವಾಮಿ, ವಿಕ್ರಮ ಹಾಗೂ ಹೆಣ್ಣಾನೆಗಳಾದ ಕಾವೇರಿ,ಚೈತ್ರಾ, ಲಕ್ಷ್ಮೀ, ವಿಜಯ ಮೈಸೂರಿನ ಕಡೆ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.
ವಿಶೇಷ ಎಂದರೆ ಸತತ 8 ಬಾರಿ ಚಿನ್ನದ ಅಂಬಾರಿ ಹೊತ್ತು ಗಮನ ಸೆಳೆದಿರುವ ಅರ್ಜುನ ಆನೆ ಈ ಬಾರಿ ದಸರಾ ಮಹೋತ್ಸವದಲ್ಲಿ ಮತ್ತೆಭಾಗವಹಿಸುವ ನಿರೀಕ್ಷೆ ಇದೆ. ಎರಡನೇ ತಂಡದಲ್ಲಿ 5 ಅಥವಾ 6 ಆನೆಗಳು ಬರಲಿವೆ. ಎರಡನೇ ತಂಡದಲ್ಲಿ ಹೊಸ ಆನೆಗಳಾದ ಗಣೇಶ, ಭೀಮ, ಸುಗ್ರೀವ, ಅಜಯ, ಮಹೇಂದ್ರ ಆನೆಗಳು ಬರುವ ಸಾಧ್ಯತೆ ಇದೆ.
ಆ.10ಕ್ಕೆ ಅರಮನೆ ಪ್ರವೇಶ: ಆ.7 ರಂದು ವೀರನಹೊಸಳ್ಳಿ ಗೆಟ್ ಬಳಿ ಗಜ ಪಯಣ ಕಾರ್ಯಕ್ರಮ ನಡೆಯಲಿದೆ. ಆನೆಗಳು ಅಲ್ಲಿಂದ ನೇರವಾಗಿ ಅಶೋಕಪುರಂನಲ್ಲಿನಅರಣ್ಯ ಭವನಕ್ಕೆ ಬಂದು ವಾಸ್ತವ್ಯ ಹೂಡಲಿವೆ. ಅಲ್ಲಿಂದ ಆ.10 ರಂದು ಅರಮನೆ ಪ್ರವೇಶಿಸಲಿವೆ.
42 ಶೆಡ್‌ಗಳ ನಿರ್ಮಾಣ: ಆ.10ರಂದು ಅರಮನೆ ಪ್ರವೇಶಿಸಲಿರುವ ಆನೆಗಳಿಗೆ ಮತ್ತು ಮಾವುತ,ಕಾವಾಡಿಗರ ಕುಟುಂಬ ಉಳಿದುಕೊಳ್ಳಲು ಅರಮನೆ ಆವರಣದಲ್ಲಿ ಶೆಡ್ ನಿರ್ಮಾಣ ಕಾರ್ಯ ಭರದಿಂದಸಾಗಿದೆ. ಎರಡು ವರ್ಷಗಳ ಬಳಿಕ ಅದ್ಧೂರಿ ದಸರಾ ಉತ್ಸವ ನಡೆಯುತ್ತಿರುವುದರಿಂದ ದಸರಾ ಆನೆಗಳೊಂದಿಗೆ ಮಾವುತ, ಕಾವಾಡಿಗರ ಪರಿವಾರವೇ ಮೈಸೂರಿಗೆಆಗಮಿಸುತ್ತಿದ್ದು, ಅವರು ಉಳಿದುಕೊಳ್ಳುವ ಸಲುವಾಗಿ42 ಶೆಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಈ ಬಾರಿ 14 ಆನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳು ತ್ತಿದ್ದು, 28 ಮಂದಿ ಮಾವುತರು ಮತ್ತುಕವಾಡಿಗರು ಮತ್ತು ಅವರ ಕುಟುಂಬ ಹಾಗೂ6 ಮಂದಿ ಹೆಚ್ಚುವರಿ ಮಾವುತರು, ಅಡುಗೆತಯಾರಕರು ಸೇರಿ 150ಕ್ಕೂ ಹೆಚ್ಚು ಮಂದಿ ಆನೆಗಳೊಂದಿಗೆ ಆಗಮಿಸಲಿದ್ದಾರೆ.
ಈಗಾಗಲೇ ಅರಮನೆ ಮಂಡಳಿ ವತಿಯಿಂದ ಆನೆಗಳು ಮತ್ತು ಮಾವುತರು ಉಳಿದುಕೊಳ್ಳುವ ಸ್ಥಳವನ್ನು ಸ್ವಚ್ಛಗೊಳಿಸಲಾಗಿದ್ದು, ಅರಣ್ಯ ಇಲಾಖೆಯಿಂದ ಶೆಡ್‌ನಿರ್ಮಾಣ ಕಾರ್ಯ ನಡೆಯುತ್ತಿದೆ. ಜತೆಗೆ ಆನೆಗಳಿಗೆವಿಶೇಷ ಆಹಾರ ತಯಾರು ಮಾಡುವ ಸ್ಥಳ ಮತ್ತು ಆಹಾರ ದಾಸ್ತನು ಕೊಠಡಿಗೆ ಸುಣ್ಣ ಬಳಿಯಲಾಗಿದೆ.
ಮೊದಲ ತಂಡದ ಆನೆಗಳಿವು :
ಮತ್ತಿಗೋಡು ಶಿಬಿರದಲ್ಲಿರುವ 57 ವರ್ಷದ ಅಂಬಾರಿ ಆನೆ ಅಭಿಮನ್ಯು, 39 ವರ್ಷದ ಗೋಪಾಲಸ್ವಾಮಿ, ಬಳ್ಳೆ ಆನೆ ಶಿಬಿರದ 62 ವರ್ಷದ ಅರ್ಜುನ, ದುಬಾರೆ ಆನೆ ಶಿಬಿರದಲ್ಲಿರುವ 59 ವರ್ಷದ ವಿಕ್ರಮ, 44ವರ್ಷದ ಧನಂಜಯ, 45 ವರ್ಷದ ಕಾವೇರಿ, ರಾಮಪುರ ಶಿಬಿರದಲ್ಲಿರುವ 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮೀ ಭಾಗವಹಿಸುವ ಸಾಧ್ಯತೆಗಳಿವೆ.
ಗಜಪಯಣಕ್ಕೆ ಮತ್ತು ಅರಮನೆಅಂಗಳದಲ್ಲಿ ಗಜಪಡೆಯ ವಾಸ್ತವ್ಯಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಾರಿದಸರಾ ಮಹೋತ್ಸವದಲ್ಲಿ 14 ಆನೆಗಳುಭಾಗಿಯಾಗಲಿವೆ. ಈ ಪೈಕಿ ಮೊದಲತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ9 ಆನೆಗಳು ಆಗಮಿಸಲಿವೆ. ಸೆಪ್ಟೆಂಬರ್‌ಮೊದಲ ವಾರದಲ್ಲಿ ಎರಡನೇ ತಂಡದಲ್ಲಿ 5 ಆನೆಗಳನ್ನು ಕರೆ ತರಲಾಗುತ್ತದೆ. –ಡಾ.ವಿ.ಕರಿಕಾಳನ್, ಡಿಸಿಎಫ್
–ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: ಮಗಳ-ಅಳಿಯಗೆ ಮುಡಾ ಸೈಟ್: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು
Actor Darshan: ಇಂದು ನಟ ದರ್ಶನ್ ಮೈಸೂರಿಗೆ ಆಗಮನ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
MUST WATCH
ಹೊಸ ಸೇರ್ಪಡೆ
UV Fusion: ಮಣಭಾರ ಒಯ್ಯಬೇಕು, ಬೆಟ್ಟವನ್ನೂ ಏರಬೇಕು ಎಂದರೆ ಆಗದು!
Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು
Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು
BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
INDWvsIREW: ಜೆಮಿಮಾ ಚೊಚ್ಚಲ ಶತಕ: ದಾಖಲೆಯ ರನ್ ಪೇರಿಸಿದ ಭಾರತ ವನಿತೆಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.