ಎಲ್ ಕೆಜಿಯಿಂದ ಪಿಜಿವರೆಗೆ ಒಂದೇ ಕಡೆ ಶಿಕ್ಷಣಕ್ಕೆ ಆದ್ಯತೆ: ಶಾಸಕ ಮಂಜುನಾಥ್
ಮೂಲಸೌಕರ್ಯ ಕಲ್ಪಿಸಲು ಪೋಷಕರ ನೆರವು ಅತ್ಯಗತ್ಯ
Team Udayavani, Sep 4, 2022, 10:26 PM IST
ಹುಣಸೂರು : ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧನೆಯ ಹಾದಿಯಲ್ಲಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ಕಾರ್ಯಕ್ರಮ, ಕೆ.ಜಿ-ಪಿ.ಜಿ.ವರೆಗೆ ನಗರದಲ್ಲಿ ಅವಕಾಶ ಕಲ್ಪಿಸಿದ್ದು ಶಾಲಾ-ಕಾಲೇಜುಗಳ ಮತ್ತಷ್ಟು ಪ್ರಗತಿಗೆ ಪೋಷಕರ ಸಹಕಾರ ಅತ್ಯಗತ್ಯವೆಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.
ಹುಣಸೂರಿನ ಮಹಿಳಾ ಸರಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಪೋಷಕರ ಸಭೆಯಲ್ಲಿ ಮಾತನಾಡಿದ ಅವರು ತಾವು ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಇದರಿಂದ ತಾಲೂಕಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಿದರಷ್ಟೆ ಸಾಲದು, ಆಗಾಗ್ಗೆ ಭೇಟಿ ಇತ್ತು ಮಕ್ಕಳ ಪ್ರಗತಿಯನ್ನು ಗಮನಿಸಿರಿ.
ಕೆ.ಜಿ-ಪಿ.ಜಿ.ವರೆಗೆ ಅವಕಾಶ
ಇಲ್ಲಿನ ಮಹಿಳಾ ಕಾಲೇಜು ಕ್ಯಾಂಪಸ್‌ನಲ್ಲಿ ಐದು ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಮತ್ತೊಂದು ದುಸ್ಥಿತಿ ಕಟ್ಟಡವನ್ನು ಕೆಡವಿ ಒಂದು ಕೋಟಿ ವೆಚ್ಚದ ಮತ್ತೊಂದು ಕಟ್ಟಡ ನಿರ್ಮಿಸಲಾಗುವುದು. ಕಾಲೇಜಿನಲ್ಲಿ ಉತ್ತಮ ಪ್ರಾಧ್ಯಾಪಕರಿದ್ದಾರೆ. ಖಾಸಗಿ ಕಾಲೇಜು ಮೀರಿಸುವಂತೆ ಅತ್ಯುತ್ತಮ ಫಲಿತಾಂಶ ಬಂದಿದೆ. ಕ್ರೀಡೆ ಸೇರಿದಂತೆ ಎಲ್ಲ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದು, ಪೋಷಕರು ಅತ್ಯುತ್ತಮ ಆಯ್ಕೆ ಮಾಡಿಕೊಂಡಿದ್ದೀರೆAದು ಸಂಸತ ವ್ಯಕ್ತಪಡಿಸಿ. ತಾಲೂಕಿನಲ್ಲಿ ಎಲ್.ಕೆ.ಜಿ.ಯಿಂದ ಸ್ನಾತಕೋತ್ತರ ವಿಭಾಗ, ಪಿಎಚ್‌ಡಿವರೆಗೂ ಅವಕಾಶವಿದ್ದು, ಈಗಾಗಲೆ ದೇವರಾಜ ಅರಸು ಕಾಲೇಜು ನ್ಯಾಕ್ ಮಾನ್ಯತೆಗೆ ಒಳಗಾಗಿದ್ದು, ಇದೀಗ ಈ ಕಾಲೇಜು ನ್ಯಾಕ್ ಮಾನ್ಯತೆಗೆ ಒಳಪಡಬೇಕಿದ್ದು, ಪೋಷಕರ ಸಹಕಾರ, ಕೊಡುಗೆ ನೀಡುವಂತೆ ಕೋರಿದರು.
ಪ್ರಾಚಾರ್ಯ ಜ್ಞಾನಪ್ರಕಾಶ್ ಕಾಲೇಜಿನ ನಿಯಮಗಳು ಹಾಗೂ ಪೋಷಕರ ಪಾತ್ರದ ಬಗ್ಗೆ, ಸಹಾಯಕಪ್ರಾಧ್ಯಾಪಕ ಶ್ರೀನಿವಾಸ್ ನೂತನ ಶಿಕ್ಷಣ ನೀತಿ ಕುರಿತು ಮಾಹಿತಿ ನೀಡಿದರು. ಸಿಡಿಸಿ ಉಪಾಧ್ಯಕ್ಷ ಹನಗೋಡುನಟರಾಜ್, ಸಂಚಾಲಕ ಪುಟ್ಟಶೆಟ್ಟಿ, ಪೋಷಕರ ಸಮಿತಿ ಸಂಚಾಲಕ ನಂಜುAಡಸ್ವಾಮಿ ಮಾತನಾಡಿದರು. ಸಿಡಿಸಿ ಸದಸ್ಯರಾದ ನಾಗರಾಜ್, ನಿಂಗರಾಜಪ್ಪ, ನಂದಿನಿ, ಅನುಷಾ, ಚಿನ್ನವೀರಯ್ಯ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಪೋಷಕರು ಬಾಗವಹಿಸಿದ್ದರು.
ಬಸ್ ಸೌಲಭ್ಯ ಕಲ್ಪಿಸಿ
ಕಾಲೇಜಿಗೆ ಮಕ್ಕಳು ಬರಲು ರಾಮಪಟ್ಟಣ, ಬಲ್ಲೇನಹಳ್ಳಿ, ಕೂಡ್ಲೂರು, ವೀರನಹೊಸಹಳ್ಳಿ ಸೇರಿದಂತೆ ಅನೇಕ ಹಳ್ಳಿಗಳಿಂದ ಸಕಾಲದಲ್ಲಿ ಬಸ್‌ಗಳಿಲ್ಲದೆ ಮಕ್ಕಳಿಗೆ ತೊಂದರೆಯಾಗಿದ್ದು ಸಕಾಲದಲ್ಲಿ ಬಸ್ ಬಿಡುವಂತೆ ಪೋಷಕರು ಶಾಸಕರಲ್ಲಿ ಮನವಿ ಮಾಡಿದರೆ, ವಿದ್ಯಾರ್ಥಿನಿ ಸ್ವಾತಿ ರಾಜ್ಯ ಶಾಸ್ತç ವಿಭಾಗಕ್ಕೆ ಅಧ್ಯಾಪಕರ ಕೊರತೆ ಇದೆ ಎಂದರೆ, ಪ್ರತಿಭಾ, ಸಲಿನಾ ಮತ್ತಿತರರು ಕನ್ನಡ, ಹಿಂದಿ, ಉರ್ದು ಭಾಷೆಗೆ ಪ್ರಾಧ್ಯಾಪಕರಿಲ್ಲದೆ ಮೊದಲ ಸೆಮ್ ಪೂರೈಸಿದ್ದೇವೆ. ಈಗಲಾದರೂ ಅತಿಥಿ ಶಿಕ್ಷಕರನ್ನು ನೇಮಿಸಿರೆಂದರೆ, ವಿದ್ಯಾರ್ಥಿನಿ ಅನುಷಾ ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಲೇಜು ಆವರಣದಲ್ಲಿ ಕ್ಯಾಂಟೀನ್ ಸ್ಥಾಪಿಸಬೇಕೆಂಬ ಕೋರಿಕೆಗೆ ಬಸ್ ಸಮಸ್ಯೆ ನೀಗಿಸಲು, ಅಗತ್ಯ ಅಧ್ಯಾಪಕರನ್ನು ನೇಮಿಸಲು ಕ್ರಮವಹಿಸಲಾಗುವುದು, ಪರೀಕ್ಷಾ ಸಂದರ್ಭದಲ್ಲಿ ವೈಯಕ್ತಿಕವಾಗಿ ಕ್ಯಾಂಟಿನ್ ಸೌಲಭ್ಯ ಕಲ್ಪಿಸುವೆನೆಂದು ಭರವಸೆ ಇತ್ತರು.
ಹುಣಸೂರಿನ ಮಹಾರಾಣಿ ಕಾಲೇಜ್
ಸಭೆಯಲ್ಲಿ ಅನೇಕ ಪೋಷಕರು ಹುಣಸೂರು ಮಹಿಳಾ ಕಾಲೇಜು ಮೈಸೂರಿನ ಮಹಾರಾಣಿ ಕಾಲೇಜಿಗೇನೂ ಕಡಿಮೆ ಇಲ್ಲ, ಇಲ್ಲಿ ಎಲ್ಲವೂ ಅಚ್ಚುಕಟ್ಟಾಗಿದೆ. ಹೀಗಾಗಿ ಹುಣಸೂರಿನ ಮಹಾರಾಣಿ ಕಾಲೇಜ್ ಎಂಬ ಬಣ್ಣನೆಗೆ ಸಭೆಯಲ್ಲಿ ಹರ್ಷೋದ್ಗಾರ ಕೇಳಿಬಂತು. ಮಾತನಾಡಿದ ಹಲವಾರು ಪೋಷಕರು ಶಾಸಕರು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್
Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ
ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.