ಸಾವಯವ ಕೃಷಿಯಿಂದ ಲಾಭ: ರೇವಣ್ಣ
Team Udayavani, Sep 28, 2017, 1:00 PM IST
ಬನ್ನೂರು: ರೈತ ದೇಶದ ಬೆನ್ನೆಲುಬು. ಆದರೆ ಅವನು ಬೆಳೆಯುವ ಬೆಳೆ ಒಮ್ಮೆ ಕೈ ಕೊಟ್ಟಾಗ ವ್ಯವಸಾಯವೇ ಸಾಕೆಂದು ನಿರ್ಧರಿಸುವುದು ಸಹಜ. ಆದರೆ ಭೂಮಿಯನ್ನು ನಂಬಿದ ರೈತನಿಗೆ ಭೂಮಿ ತಾಯಿ ಎಂದಿಗೂ ಆತನ ಕೈ ಬಿಡುವುದಿಲ್ಲ. ಇದಕ್ಕೆ ತಾವೇ ಸಾಕ್ಷಿ ಎಂದು ಪ್ರಗತಿಪರ ರೈತ ರಂಗಸಮುದ್ರದ ರೇವಣ್ಣ ತಿಳಿಸಿದರು.
ಪಟ್ಟಣದ ಸಮೀಪದ ರಂಗಸಮುದ್ರ ಗ್ರಾಮದ ರೇವಣ್ಣನವರ ಬಾಳೆ ತೋಟದಲ್ಲಿ ಮೈಸೂರು, ಮಂಡ್ಯ ಚಾಮರಾಜನಗರ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಮೂಸೂರು ತೋಟಗಾರಿಕಾ ಇಲಾಖೆ, ಜೆಎಸ್‌ಎಸ್ ಕೃಷಿ ವಿಜಾnನ ಕೇಂದ್ರ ಹಾಗೂ ರಂಗಸಮುದ್ರದ ಚೇತನ ಸಾವಯವ ಕೃಷಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾವಯವ ಬಾಳೆ ಬೆಳೆ ಹಾಗೂ ಪಪ್ಪಾಯ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
ನಾವು ಕೃಷಿ ಮಾಡಲು ಆರಂಭಿಸಿದ ದಿನಗಳಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟವನ್ನು ಅನುಭಿಸಿದರೂ ತಾವು ಅದರಿಂದ ಕುಗ್ಗಲಿಲ್ಲ. ಎಲ್ಲೆಡೆ ರೈತರಿಗಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ರೈತರಿಗೆ ಅಧಿಕಾರಿಗಳು ನೀಡುವ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ತನ್ನದೇ ಆದ ಮಾರ್ಗ ರೂಪಿಸಿಕೊಂಡು ಆ ಮೂಲಕ ಕೃಷಿ ಮಾಡಲು ಮುಂದಾಗಿದ್ದೆ. ಹೀಗಾಗಿ ಉತ್ಕೃಷ್ಟ ಮಟ್ಟದ ಪಪ್ಪಾಯ ಹಾಗೂ ಬಾಳೆ ಬೆಳೆದಿರುವುದಾಗಿ ತಿಳಿಸಿದರು.
ರೈತರು ಎಂದಿಗೂ ತಮ್ಮ ಮನಸ್ಸಿನಲ್ಲಿ ಗೊಂದಲ ಮಾಡಿಕೊಳ್ಳಬಾರದು ಎಂದು ತಿಳಿಸಿದ ಅವರು, ಇಂದಿನ ಕೃಷಿ ಪದ್ಧತಿಯಲ್ಲಿ ಸ್ವಲ್ಪ$ಬದಲಾವಣೆ ಮಾಡಿಕೊಂಡು ಕೃಷಿಯಲ್ಲಿ ನವೀನ ಸುಧಾರಣೆ ರೂಢಿಸಿಕೊಳ್ಳುವಂತೆ ಕರೆ ನೀಡಿದರು. ತಾವು ಬೆಳೆದಿರುವ ಏಲಕ್ಕಿ ಬಾಳೆ ಇಂದು 25 ರಿಂದ 30 ಕೆಜಿಯಷ್ಟು ತೂಗುತ್ತಿರುವುದು ತಮಗೆ ವೈಯಕ್ತಿಕವಾಗಿ ಸಂತಸ ನೀಡಿದೆ ಎಂದರು.
ರೈತ ಮುಖಂಡ ನಾರಾಯಣ್, ಯಾವುದೇ ಪ್ರಶಸ್ತಿ ಬಹುಮಾನಗಳಿಗಾಗಿ ರೇವಣ್ಣ ಕೃಷಿಯಲ್ಲಿ ತೊಡಗದೇ ಕೃಷಿಯಲ್ಲಿ ಸಾವಯವ ಪದ್ಧತಿ ಅಳವಡಿಕೆ ಮಾಡಿಕೊಂಡಿದ್ದಾರೆಂದರು. ಕೃಷಿ ಪಂಡಿತ ಪುರಸ್ಕೃತ, ಸಾವಯವ ಒಕ್ಕೂಟದ ಅಧ್ಯಕ್ಷ ರಮೇಶ್, ಸಾವಯವ ಬೆಳೆಗೆ ಎಲ್ಲೆಡೆಯಿಂದಲೂ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.
ರೈತರು ಸಾವಯ ಪದ್ಧತಿಯಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸೂಕ್ತವಾದ ಒಂದು ಯೋಜನೆಯನ್ನು ರೂಪಿಸುತ್ತಿದ್ದು, ಅದು ಜಾರಿಯಾದರೆ ಸಾವಯವ ಪದ್ಧತಿಯಲ್ಲಿ ಬೆಳೆಯುವ ರೈತನ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ ಎಂದು ತಿಳಿಸಿದರು. ಯಾವುದೇ ಒಬ್ಬ ರೈತ ಉತ್ತಮವಾದ ಬೆಳೆಯನ್ನು ಬೆಳೆಯುತ್ತಿದ್ದಾನೆಂದರೆ ಮತ್ತೂಬ್ಬ ರೈತ ಅಲ್ಲಿಗೆ ಭೇಟಿ ನೀಡಿ ಅವರಿಂದ ಸೂಕ್ತವಾದ ಮಾರ್ಗದರ್ಶನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಡಾ.ಕೃಷ್ಣಮೂರ್ತಿ, ಸಹಾಯಕ ತೋಟಗಾರಿಕ ನಿರ್ದೇಶಕ ಫಣೀಂದ್ರ, ತೋಟಗಾರಿಕ ವಿಜಾnನಿ ಶ್ರೀನಿವಾಸ ಮಂಕಣಿ, ನಾರಾಯಣ್, ಮೇಗಳಕೊಪ್ಪಲು ರಂಗಸ್ವಾಮಿ, ಬನ್ನೂರು ಕೃಷ್ಣಪ್ಪ, ಜಿಪಂ ಸದಸ್ಯ ಪ್ರಶಾಂತ್‌ಬಾಬು, ಮಂಜುನಾಥ್, ರಂಗಸಮುದ್ರ ಗ್ರಾಮದ ಮಾಜಿ ಅಧ್ಯಕ್ಷ ರೇವಣ್ಣ, ರವಿಕುಮಾರ್, ಜಿಯಾವುಲ್‌ಹಕ್ ಮತ್ತಿತರರಿದ್ದರು.
ಕೃಷಿಯಲ್ಲಿ ಮಣ್ಣು ಹಾಗೂ ನೀರು ಅತ್ಯಂತ ಮುಖ್ಯವಾಗಿದೆ. ಮಳೆ ಸಂದರ್ಭದಲ್ಲಿ ಜಮೀನುಗಳಲ್ಲಿ ನೀರನ್ನು ಇಂಗಿಸಲು ಎಷ್ಟು ಸಾಧ್ಯವಿದೆಯೋ ಅಷ್ಟು ಪ್ರಮಾಣದಲ್ಲಿ ನೀರನ್ನು ಇಂಗಿಸಬೇಕು.
-ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.