ಹೆಲಿಟೂರಿಸಂಗೆ ಮರ ಹನನ ವಿರೋಧಿಸಿ ಭಿತ್ತಿ ಪತ್ರ
Team Udayavani, Apr 19, 2021, 3:21 PM IST
ಮೈಸೂರು: ನಗರದ ಲಲಿತಮಹಲ್‌ಆವರಣದಲ್ಲಿ ಹೆಲಿ ಟೂರಿಸಂ ಹೆಸರಿನಲ್ಲಿಮರಗಳನ್ನು ಕಡಿಯಲು ಹೊರಟಿರುವಪ್ರವಾಸೋದ್ಯಮ ಇಲಾಖೆಯಯತ್ನವನ್ನು ಖಂಡಿಸಿ ಪರಿಸರ ಬಳಗದಸದಸ್ಯರು ವಿವಿಧ ಭಿತ್ತಿ ಪತ್ರಗಳನ್ನುಹಿಡಿದು ವಿಶೇಷ ಜಾಗೃತಿ ಕಾರ್ಯಕ್ರಮನಡೆಸಿದರು.
“ವೃಕ್ಷೋ ರಕ್ಷತಿ ರಕ್ಷಿತಃ’, “ಪರಿಸರಉಳಿವು-ನಮ್ಮ ಉಳಿವು ಪರಿಸರದಅಳಿವು ನಮ್ಮ ಅಳಿವು'”ನಿಲ್ಲಲಿ ಮರಗಳಹನನ ಬೆಳೆಸಲಿ ಅಲ್ಲಲ್ಲಿ ಕಾನನ’, ,””ಪ್ರಕೃತಿ ಮಾತೆ, ನಿಜವಾದ ಅನ್ನದಾತೆ’,”ಮರಗಳನ್ನು ಬೆಳೆಸೋಣ ಕಡಿಯುವುದನ್ನು ನಿಲ್ಲಿಸೋಣ, ಕಡಿದರೆ ಮರಬರುವುದು ಬರ ಮುಂತಾದ ಘೋಷಣೆಗಳನ್ನು ಹೊತ್ತ ಫಲಕ ಪ್ರದರ್ಶಿಸಲಾಯಿತು.ಪರಿಸರ ಆಸಕ್ತರು ವಿವಿಧಭಿತ್ತಿಪತ್ರಗಳನ್ನು ಹಿಡಿದು ಅರಿವುಮೂಡಿಸಿದರು.
ಗಾಯಕ ನಾರಾಯಣಸ್ವಾಮಿ ತಂಡದ ಕಲಾವಿದರು ಪರಿಸರಗೀತೆಗಳನ್ನು ಹಾಡಿ ಮರಗಳ ಹನನಕ್ಕೆವಿರೋಧ ವ್ಯಕ್ತಪಡಿಸಿದರು.ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚನ್ನೇಗೌಡ ಮಾತನಾಡಿ, ಲಲಿತಮಹಲ್ ಮುಂಭಾಗ ಪ್ರಾಣಿಪಕ್ಷಿಗಳಸಂಕುಲಕ್ಕೆ ನೆಲೆಯಾಗಿದೆ. ಅಲ್ಲದೆ,ಸಾಕಷ್ಟು ಮಂದಿ ನಿತ್ಯ ವಾಯುವಿಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ.
ನೂರಾರು ಯುವಕರ ಕ್ರೀಡಾಭ್ಯಾಸಕ್ಕೂಈ ತಾಣ ಆಧಾರವಾಗಿದ್ದು, ಇಲ್ಲಿನವಾತಾವರಣ ಹೀಗೆ ಇರಬೇಕುಎನ್ನುವುದು ಎಲ್ಲರ ಆಶಯ. ಆದ್ದರಿಂದಇಲ್ಲಿನ ಮರಗಳನ್ನು ಕಡಿಯುವುದುಸೂಕ್ತವಲ್ಲ ಎಂದರು. ಅಲ್ಲದೆ, ಕೊರೊನಾಎರಡನೇ ಅಲೆ ಇದೀಗ ಎಲ್ಲೆಡೆವೇಗವಾಗಿ ಹಬ್ಬುತ್ತಿದೆ. ಹಾಗಾಗಿಏ.23ರಂದು ಅರಣ್ಯ ಭವನದಲ್ಲಿಆಯೋಜಿಸಿರುವ ಸಾರ್ವಜನಿಕಅಹವಾಲು ಸಭೆಯನ್ನು ಮುಂದೂಡಬೇಕು ಎಂದು ಅರಣ್ಯಾಧಿಕಾರಿಗಳುಹಾಗೂ ಜಿಲ್ಲಾಧಿಕಾರಿಗೆ ಮನವಿಮಾಡಿದರು.
ಪರಿಸರ ಬಳಗದ ಪರಶುರಾಮೇಗೌಡ, ಅಂಕಣಗಾರ್ತಿ ಕುಸುಮಾಆಯರಹಳ್ಳಿ, ಹಿರಿಯ ರಂಗಕರ್ಮಿಜನಾರ್ದನ್ (ಜನ್ನಿ), ಗಾಯಕರಾದಡಾ.ನಿಂಗರಾಜು, ವಿಶ್ವನಾಥ್,ದೇವಾನಂದ ವರಪ್ರಸಾದ್, ರಮೇಶ್,ಹೊಸಳ್ಳಿ ಶಿವು, ಕ್ರೆಡಿಟ್ ಐ ಸಂಸ್ಥೆಯ ಡಾ.ಎಂ.ಪಿ. ವರ್ಷಾ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.