ಇಒ ವಿರುದ್ಧ ಪ್ರತಿಭಟನೆ, ವರ್ಗಾವಣೆಗೆ ಬಿಗಿ ಪಟ್ಟು


Team Udayavani, Jun 30, 2019, 3:00 AM IST

eo-virudd

ಕೆ.ಆರ್‌.ನಗರ: ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆ ಉತ್ತರಿಸದ್ದಕ್ಕೆ ಹಾಗೂ ಸಭೆಯಿಂದ ಹೊರ ನಡೆದಿದ್ದಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಮೋಹನ್‌ ವಿರುದ್ಧ ಸದಸ್ಯರು ಪ್ರತಿಭಟನೆ ನಡೆಸಿದರು. ಜೊತೆಗೆ ಈ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ತಾಪಂ ಸಭಾಂಗಣದಲ್ಲಿ ಮಲ್ಲಿಕಾ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಸದಸ್ಯ ಚಂದ್ರಶೇಖರ್‌ ಏರಿದ ಧ್ವನಿಯಲ್ಲಿ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಒ ಲಕ್ಷ್ಮೀಮೋಹನ್‌,”ನೀವು ಜೋರಾಗಿ ಮಾತನಾಡಿ ಹದ್ದುಮೀರಿ ನಡೆದುಕೊಂಡು ಗೂಂಡಾ ವರ್ತನೆ ತೋರಿಸುತ್ತಿದ್ದೀರಿ’ ಎಂದು ಹರಿಹಾಯ್ದರು. ಇದರಿಂದ ಸಿಡಿಮಿಡಿಗೊಂಡ ಸದಸ್ಯ ನಾನು ಯಾವ ರೀತಿ ಗೂಂಡಾ ವರ್ತನೆ ತೋರಿಸಿದ್ದೇನೆ ಎಂದು ಸಾಬೀತು ಮಾಡಬೇಕೆಂದು ಪಟ್ಟು ಹಿಡಿದರು.

ಈ ಮದ್ಯೆ ಚಂದ್ರಶೇಖರ್‌ ಅವರಿಗೆ ಬೆಂಬಲ ಸೂಚಿಸಿದ ಸದಸ್ಯರಾದ ಶ್ರೀನಿವಾಸಪ್ರಸಾದ್‌, ಎಚ್‌.ಟಿ.ಮಂಜುನಾಥ್‌, ಕುಮಾರ್‌, ಸುನೀತಾ ಮತ್ತಿತರರ ಸದಸ್ಯರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ತಾಪಂ ಇಒ ಲಕ್ಷ್ಮೀ ಮೋಹನ್‌ ಸಭೆಯಲ್ಲಿ ಕ್ಷಮೆ ಯಾಚಿಸಬೇಕು ಎಂದರು.

ಸದಸ್ಯರು ನಿಯಮ ಮೀರಿ ವರ್ತಿಸುತ್ತಿದ್ದು, ಪೊಲೀಸರನ್ನು ಕರೆಸಿ ಅವರ ಭದ್ರತೆಯಲ್ಲಿ ಸಭೆ ನಡೆಸುವುದಾಗಿ ಇಒ ಹೇಳಿದಾಗ, ಕೆಂಡ ಮಂಡಲರಾದ ಸದಸ್ಯ ಶ್ರೀನಿವಾಸಪ್ರಸಾದ್‌ ಸದಸ್ಯರ ಹಕ್ಕುಗಳಿಗೆ ಚ್ಯುತಿ ತರುತ್ತಿರುವ ನೀವು ಕ್ಷಮೆ ಕೇಳಲೇಬೇಕು. ಇಲ್ಲವಾದರೆ ಯಾರನ್ನು ಕರೆಸುತ್ತೀರೊ ಕರೆಯಿಸಿ ನೋಡಿಯೇ ಬಿಡೋಣ ಎಂದು ಸವಾಲು ಹಾಕಿದರು.

ಅಧ್ಯಕ್ಷೆ ಮಲ್ಲಿಕಾ ಮಾತನಾಡಿ, ನಾನು ಕಾರ್ಯನಿರ್ವಹಣಾಧಿಕಾರಿಗಳನ್ನು ಅಭಿವೃದ್ಧಿ ವಿಚಾರ ಮತ್ತು ಕಚೇರಿಗೆ ಸರಿಯಾಗಿ ಹಾಜರಾಗದೆ ಇರುವ ಬಗ್ಗೆ ಕೇಳಿದರೆ ನನ್ನನ್ನು ಪ್ರಶ್ನಿಸಿದ ಮೊದಲ ಮಹಿಳೆ ನೀವೇ ಎಂದು ಕೇವಲವಾಗಿ ಮಾತನಾಡುತ್ತಾರೆ. ಚುನಾಯಿತ ಸದಸ್ಯರ ಬಗ್ಗೆ ಗೌರವವಿಲ್ಲದ ಇವರ ಅವಶ್ಯಕತೆ ನಮಗಿಲ್ಲ. ಆದ್ದರಿಂದ ಅವರ ವಿರುದ್ಧ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗೆ ದೂರು ಕೊಡೋಣ ಎಂದರು.

ಕ್ಷಮೆಗೆ ಆಗ್ರಹ: ಈ ವೇಳೆ ಮಧ್ಯ ಪ್ರವೇಶಿಸಿದ ಸದಸ್ಯೆಯರಾದ ಸುನೀತಾ, ಮಮತಾ ಮತ್ತು ಶೋಭಾ ಅವರು, ಲಕ್ಷ್ಮಿಮೋಹನ್‌ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವುದು ನಂತರದ ವಿಚಾರ. ಈಗ ಅವರು ಸದಸ್ಯ ಚಂದ್ರಶೇಖರ್‌ ಸೇರಿದಂತೆ ಸಭೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದಾಗ ಇದಕ್ಕೆ ಬೆಂಬಲ ಸೂಚಿಸಿದ ಶ್ರೀನಿವಾಸಪ್ರಸಾದ್‌ ಕ್ಷಮೆ ಕೇಳದಿದ್ದರೆ ದಿಗ್ಬಂಧನ ಹಾಕುವುದಾಗಿ ಎಚ್ಚರಿಕೆ ನೀಡಿದರು.

ವಾದ ವಿವಾದಗಳು ನಡೆಯುತ್ತಿದ್ದಾಗ ಸಭೆಯಿಂದ ಏಕಾ ಏಕಿ ಹೊರ ನಡೆದ ತಾಪಂ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷೆ ಸೇರಿದಂತೆ ಸದಸ್ಯರು ಕರೆದರೂ ಕಿವಿಗೊಡದೆ ಸಭಾಂಗಣದಿಂದ ಹೊರ ಬಂದು ಕಾರು ಹತ್ತಿ ಹೊರಟೇ ಹೋದರು.

ಪ್ರತಿಭಟನೆ: ಅಧ್ಯಕ್ಷರು ಮತ್ತು ಸಭೆಯ ಅನುಮತಿ ಪಡೆಯದೆ ಕಾರ್ಯನಿರ್ವಹಣಾಧಿಕಾರಿ ಹೊರ ಹೋಗಿದ್ದರಿಂದ ಆಕ್ರೋಶಗೊಂಡ ಅಧ್ಯಕ್ಷೆ, ಉಪಾಧ್ಯಕ್ಷೆ ಮತ್ತು ಎಲ್ಲಾ ಸದಸ್ಯರು ತಾಲೂಕು ಪಂಚಾಯ್ತಿ ಕಚೇರಿಯ ಮುಂದೆ ವಿರುದ್ಧ ಪ್ರತಿಭಟನೆ ನಡೆಸಿ ಮಹಿಳೆಯರಿಗೆ ಅಗೌರವ ತೋರಿ ಸದಸ್ಯರ ಹಕ್ಕುಗಳಿಗೆ ಚ್ಯುತಿ ತರುತ್ತಿರುವ ಲಕ್ಷ್ಮೀಮೋಹನ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ದೂರು: ತಾಪಂ ಸದಸ್ಯರಾದ ಎಚ್‌.ಟಿ.ಮಂಜುನಾಥ್‌, ಶ್ರೀನಿವಾಸಪ್ರಸಾದ್‌, ಕುಮಾರ್‌, ಕೆ.ಎಲ್‌.ಲೋಕೇಶ್‌, ಬಿ.ಎಂ.ಮಹದೇವ್‌ ಮಾತನಾಡಿ, ಕಾರ್ಯನಿರ್ವಹಣಾಧಿಕಾರಿಯ ದುರ್ವರ್ತನೆ ಮತ್ತು ಕರ್ತವ್ಯ ಲೋಪದ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರು, ಕ್ಷೇತ್ರದ ಶಾಸಕರೂ ಆದ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಹಾಗೂ ಸಂಬಂಧಿತ ಎಲ್ಲಾ ಮೇಲಧಿಕಾರಿಗಳಿಗೂ ಲಿಖೀತ ದೂರು ನೀಡುವುದಾಗಿ ತಿಳಿಸಿದರು.

ಪ್ರತಿಭಟನೆ ವೇಳೆ ಅಧ್ಯಕ್ಷೆ ಮಲ್ಲಿಕಾ ಮತ್ತು ಸದಸ್ಯ ಎಚ್‌.ಟಿ.ಮಂಜುನಾಥ್‌ ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗೆ ಘಟನೆಯ ಬಗ್ಗೆ ದೂರವಾಣಿಯಲ್ಲಿ ಮಾಹಿತಿ ನೀಡಿದರು.
ಉಪಾಧ್ಯಕ್ಷೆ ಸಾಕಮ್ಮಸಣ್ಣಪ್ಪ, ಸದಸ್ಯರಾದ ಜಯರಾಮೇಗೌಡ, ಜಿ.ಎಸ್‌.ಮಂಜುನಾಥ್‌, ವೀಣಾ, ಶೋಭಾ, ಸಿದ್ದಮ್ಮ, ರತ್ನಮ್ಮ, ಪುಟ್ಟಗೌರಮ್ಮ, ನಾಗರಾಜು, ನೀಲಮಣಿ, ಲಲಿತಾ, ಕೆ.ಪಿ.ಯೋಗೇಶ್‌ ಇತರರಿದ್ದರು.

ತಾಲೂಕಿನ ಅಭಿವೃದ್ಧಿಗೆ ಚುನಾಯಿತ ಸದಸ್ಯರೊಡನೆ ಕೆಲಸ ಮಾಡದೆ ನಿರಂತರವಾಗಿ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿರುವ ಇಂತಹ ಅಧಿಕಾರಿಯಿಂದ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಕೆ.ಆರ್‌.ನಗರ ತಾಲೂಕು ಪಂಚಾಯ್ತಿಗೆ ಬೇರೆ ಕಾರ್ಯನಿರ್ವಹಣಾಧಿಕಾರಿಗಳನ್ನು ನೇಮಕ ಮಾಡಬೇಕು.
-ಮಲ್ಲಿಕಾ, ತಾಪಂ ಅಧ್ಯಕ್ಷೆ

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.