![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 3, 2020, 7:05 PM IST
ನಂಜನಗೂಡು: ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ಇದೇ ಘಟಕದಲ್ಲಿ ಉದ್ಯೋಗ ಅಥವಾ ಭೂಮಿ ವಾಪಸ್ ಎಂಬ ಬೇಡಿಕೆಯೊಂದಿಗೆ ಆರಂಭಿಸಿರುವ ಅಹೋರಾತ್ರಿ ಹೋರಾಟ ಹತ್ತನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಅರೆ ಬೆತ್ತಲೆಯ ಪ್ರತಿಭಟನೆಯಾಗಿ ಮಾರ್ಪಟ್ಟಿತ್ತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜನಾಂದೋಲನ ಮಹಾಮೈತ್ರಿ ದಲಿತ ಸಂಘಟನೆ, ಸ್ವರಾಜ್ ಇಂಡಿಯಾ ಸಹಯೋಗದೊಂದಿಗೆ ಬುಧವಾರ ನಡೆದ ಧರಣಿಯಲ್ಲಿ ಅಖೀಲ ಭಾರತ ಯುವಜನ ಮಹಿಳಾ ಸಂಘ, ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘ ಮತ್ತಿತರರ ಸಂಘಟನೆಗಳು ಪಾಲ್ಗೊಂಡರು ಸಾಥ್ ನೀಡಿದವು.
ಅಹೋರಾತ್ರಿ ಪ್ರತಿಭಟನೆಯನ್ನು ಅರೆ ಬೆತ್ತಲೆಯಾಗಿ ರೈತರು ಮುನ್ನಡೆಸಿದರು. ತಾಲೂಕಿನ ಅಡಕನಹಳ್ಳಿ ಹುಂಡಿಯ ಕೈಗಾರಿಕಾವಲಯದಏಷಿಯನ್‌ಪೇಂಟ್ಸ್‌ಕಾರ್ಖಾನೆ ಎದುರು ನಡೆಸುತ್ತಿರುವ ಧರಣಿಯನ್ನುದ್ದೇಶಿಸಿ ಮಾತನಾಡಿದರಾಜ್ಯ ರೈತ ಸಂಘದ ನಾಯಕ ಅಶ್ವತ್ಥ್ ನಾರಾಯ ಅರಸು,ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಯುವಜನ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಉಮಾದೇವಿ, ಮಹಿಳಾ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಸಂಧ್ಯಾ, ಮುದ್ದು ಕೃಷ್ಣ ಮತ್ತಿತರರು ಮಾತನಾಡಿ,ಇದೇಘಟಕದಲ್ಲಿಉದ್ಯೋಗ ನೀಡಿ ಇಲ್ಲವೇ ಭೂಮಿ ವಾಪಸ್ ಆಗುವವರಿಗೂ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದುಎಚ್ಚರಿಕೆ ನೀಡಿದರು.
ತಾಳ್ಮೆ ಪರೀಕ್ಷಿಸಬೇಡಿ:ಹೋರಾಟಗಾರರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಸರ್ಕಾರದ ನಿರ್ಲಕ್ಷ್ಯ ಧೋರಣೆ ಹೀಗೆ ಮುಂದುವರಿದರೆ ಹೋರಾಟದಸ್ವರೂಪವೇಬದಲಾಗುತ್ತದೆ. ಇದಕ್ಕೆ ಅವಕಾಶ ನೀಡಬೇಡಿ ಎಂದು ತಿಳಿಸಿದರು.ಈವೇಳೆರೈತಮುಖಂಡರಾದಹೊಸಕೋಟೆ ಬಸವರಾಜು, ಶಿರಮಳ್ಳಿಸಿದ್ದಪ್ಪ, ಬೊಕ್ಕಳ್ಳಿ ನಂಜುಂಡಸ್ವಾಮಿ, ಹೆಜ್ಜಿಗೆಪ್ರಕಾಶ, ಪ್ರಸನ್ನಗೌಡ, ಪ್ರಮೋದ, ಆಕಾಶ,ಸಚಿನ್, ಚಂದ್ರಕಲಾ, ಆಶಿಯಾಬೇಗಂ, ತಿ.ನರಸೀಪುರದ ಶಿವನಂಜು, ಬನ್ನೂರಿನಹುಚ್ಚೇಗೌಡ, ತಾಲೂಕು ವಸತಿ ನಿಲಯಗಳ ಸಂಘಟನೆಯ ಚಂದ್ರಮ್ಮ, ಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು.
ಬಂದ್‌ಗೆ ಮೈಸೂರು ಉದ್ಯಮ ಸಂಘಗಳ ಒಕ್ಕೂಟ ಬೆಂಬಲ ಇಲ್ಲ :
ಮೈಸೂರು: ಕನ್ನಡ ಪರ ಸಂಘಟನೆಗಳು ಡಿ.5 ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ನೀಡದಿರಲು ಮೈಸೂರು ಉದ್ಯಮ ಸಂಘಗಳ ಒಕ್ಕೂಟವು ನಿರ್ಧಾರಿಸಿದೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳುಮಾತನಾಡಿ, ಈಗಾಗಲೇ ಕೊರೊನಾ ಹೊಡೆತದಿಂದ ನೆಲಕಚ್ಚಿರುವ ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಉದ್ದಿಮಗಳು ಈಗ ತಾನೆ ಚಿಗುರೊಡೆಯುತ್ತಿವೆ.ಚೇತರಿಸಿಕೊಳ್ಳುವ ಸಮಯದಲ್ಲಿ ಬಂದ್‌ಗೆ ಕರೆನೀಡಿರುವುದು ಸರಿಯಲ್ಲ. ಕನ್ನಡ ನಾಡು ನುಡಿ, ಭಾಷೆಮತ್ತು ಜಲಕ್ಕೆ ಸಂಬಂಧಿಸಿದಂತೆ ಹೋರಾಟಕ್ಕೆ ಬದ್ಧವಾಗಿದ್ದೇವೆ. ಬಂದ್ ಉದ್ದೇಶವನ್ನು ಬೆಂಬಲಿಸುತ್ತೇವೆ. ಆದರೆ, ಸಂಕಷ್ಟ ಪರಿಸ್ಥಿತಿಯಲ್ಲಿ ಬಂದ್ ನಡೆಸುತ್ತಿರುವುದಕ್ಕೆ ನಮ್ಮ
ವಿರೋಧವಿದೆ.ಹೀಗಾಗಿಮೈಸೂರಿನಲ್ಲಿ ಟ್ಯಾಕ್ಸಿಟ್ರಾವೆಲ್ಸ್, ಹೋಟೆಲ್, ಬಸ್, ಪೆಟ್ರೋಲ್ ಬಂಕ್, ಮಾರುಕಟ್ಟೆ ಸೇರಿದಂತೆ ಹಲವು ಸೇವೆ ಎಂದಿನಂತೆ ಮುಂದುವರಿಸುವುದಾಗಿ ತಿಳಿಸಿದರು.
ಮೈಸೂರು ಟ್ರಾವೆಲ್ಸ್ ಅಸೋಸಿಯೇಷೆನ್, ಮೈಸೂರು ಹೋಟೆಲ್ ಮಾಲೀಕರ ಸಂಘ, ಜಿಲ್ಲಾ ಪ್ರವಾಸಿ ವಾಹನ ಚಾಲಕ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಅನುಮೋದಿತ ಪ್ರವಾಸಿ ಮಾರ್ಗದರ್ಶಿಗಳ ಸಂಘ, ಜಿಲ್ಲಾ ಮತ್ತು ನಗರ ಮ್ಯಾಕ್ಸಿಕ್ಯಾಬ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಮೈಸೂರು ರೀಜನ್‌ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್, ದೇವರಾಜ್ ಅರಸ್ ರಸ್ತೆ ಟ್ರೇಡರ್ಸ್ ಅಸೋಸಿಯೇಷನ್, ವರ್ತಕರ ಸಂಘ, ಮೈಸೂರು ಟೈಕ್ಸ್ ಟೈಲ್ಸ್ ಮತ್ತು ಗಾರ್ಮೆಂಟ್ ಮರ್ಚೆಂಟ್ ಅಸೋಸಿಯೇಷನ್, ಜಿಲ್ಲಾ ಡಿಸ್ಟ್ರಿಬ್ಯೂಟರ್ ಅಸೋಸಿಯೇಷನ್, ಕಲ್ಯಾಣ ಮಂಟಪ ಮಾಲೀಕರ ಸಂಘಮತ್ತು ಮೈಸೂರು ಮಹಾನಗರಪಾಲಿಕೆಮಂಡಿಮಾರುಕಟ್ಟೆಬಾಡಿಗೆದಾರರ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.
ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಬಿ.ಎಸ್.ಪ್ರಶಾಂತ್, ಜಿಲ್ಲಾ ಪ್ರವಾಸಿ ವಾಹನ ಚಾಲಕ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ನಾಗರಾಜ್, ಮೈಸೂರು ಅನುಮೋದಿತ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಶೋಕ್, ಜಿಲ್ಲಾಮತ್ತು ನಗರ ಮ್ಯಾಕ್ಸಿಕ್ಯಾಬ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ರವಿ, ದೇವರಾಜ್ ಅರಸ್ ರಸ್ತೆ ಟ್ರೇಡರ್ಸ್ ಅಸೋಸಿಯೇಷನ್ ವೀರಭದ್ರಪ್ಪ, ಕಲ್ಯಾಣ ಮಂಟಪ ಮಾಲೀಕರ ಸಂಘದ ಕೆ. ಶರತ್. ಸತ್ಯನಾರಾಯಣ,ಮೈಸೂರು ಮಹಾನಗರ ಪಾಲಿಕೆ ಮಂಡಿ ಮಾರುಕಟ್ಟೆ ಬಾಡಿಗೆದಾರರ ಸಂಘದ ಮಹದೇವು ಇದ್ದರು.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.