ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
Team Udayavani, Feb 16, 2018, 1:11 PM IST
ತಿ.ನರಸೀಪುರ: ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಡಳಿತ ಅವ್ಯವಸ್ಥೆ, ಅಕ್ರಮ ಹಾಗೂ ವೈದ್ಯರ ನಿರ್ಲಕ್ಷ್ಯತೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಕಾರ್ಯಕರ್ತರು ಹಾಗೂ ಮುಖಂಡರು ಆಸ್ಪತ್ರೆ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆರಣದಲ್ಲಿ ಜಮಾವಣೆಗೊಂಡ ಸಮಿತಿಯ ಕಾರ್ಯಕರ್ತರು ಹಾಗೂ ಮುಖಂಡರು ತಾಲೂಕು ಕೇಂದ್ರದಲ್ಲಿ 100 ಹಾಸಿಗೆಯುಳ್ಳ ದೊಡ್ಡಾಸ್ಪತ್ರೆಯಾಗಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈಫಲ್ಯತೆಯಿಂದ ಅಕ್ರಮ ಹಾಗೂ ಅವ್ಯವಹಾರ ನಡೆಯುತ್ತಿರುವುದರಿಂದ ಸರ್ಕಾರಿ ವೈದ್ಯಕೀಯ ಚಿಕಿತ್ಸೆ ಜನರಿಗೆ ಮರಿಚೀಕೆಯಾಗಿದೆ ಎಂದು ದೂರಿದರು.
ಸಕಾಲಕ್ಕೆ ಚಿಕಿತ್ಸೆ ಕೊರತೆ: ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ್‌ಮೂರ್ತಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದಲ್ಲಿ ಪ್ರಭಾವಿ ಸಚಿವ ಡಾ.ಹೆಚ್.ಸಿ.ಮಹದೇವಪಪ್ಪ ಅವರು ಶಾಸಕರಾಗಿ ಪ್ರತಿನಿಧಿಸುವ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯಾಪಕ ಭ್ರಷ್ಟಚಾರ ತಾಂಡವವಾಡುತ್ತಿದೆ.
ಆಡಳಿತ ವ್ಯವಸ್ಥೆ ಹಿಡಿತವನ್ನು ಕಳೆದುಕೊಂಡಿದೆ. ವೈದ್ಯರು ಮತ್ತು ಸಿಬ್ಬದಿಂಗಳ ಕೊರತೆಯಿಂದಾಗಿ ರೋಗಿಗಳಿಗೆ ಸಕಾಲದಲ್ಲಿ ಸರಿಯಾದ ಚಿಕಿತ್ಸೆ ಇಲ್ಲದೆ ಪರದಾಡುವಂತಾಗಿದೆ. ಕರ್ತವ್ಯನಿರತ ವೈದ್ಯರಾಗಲಿ, ಆಡಳಿತ ವೈದ್ಯಾಧಿಕಾರಿಗಳು ಕೂಡ ಸಾರ್ವಜನಿಕ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ದೂರಿದರು.
ಗರ್ಭಿಣಿಯರಿಂಲೂ ವಸೂಲು: ಹೈಟೆಕ್ ಲ್ಯಾಬ್‌ಗಳ ವ್ಯವಸ್ಥೆ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲ ವೈದ್ಯರು ತಪಾಸಣೆ ವೇಳೆ ಖಾಸಗಿ ಲ್ಯಾಬ್‌ಗಳಿಗೆ ಹೋಗುವಂತೆ ರೋಗಿಗಳಿಗೆ ಸಲಹೆ ನೀಡಿ, ಕಮಿಷನ್ ಪಡೆಯುತ್ತಿದ್ದಾರೆ. ಇದಲ್ಲದೆ ಹೆರಿಗೆ ಕೊಠಡಿಗಳಲ್ಲಿ ವೈದ್ಯಕೀಯ ಸಿಬ್ಬಂದಿ ವರ್ಗದವರು ಗರ್ಭಿಣಿಯರನ್ನು ಹೆದರಿಸಿ ಹಣ ವಸೂಲು ಮಾಡುವುದು ಚಾಳಿಯಾಗಿದೆ.
ಹಣ ಕೊಡದೇ ಹೋದರೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಕಳಿಸುತ್ತೆವೆಂದು ಬೆದರಿಸುತ್ತಾರೆ ಎಂದು ದೂರಿದರು. ಪರಿಸ್ಥಿತಿ ಕುರಿತು ಆಡಳಿತ ವೈದ್ಯಾಧಿಕಾರಿಗಳಿಗೆ ದೂರು ನೀಡಿದರೆ ಹಾರಿಕೆ ಉತ್ತರ ನೀಡಿ ಅಸಹಾಯಕತೆ ತೋರುತ್ತಾರೆ ಎಂದು ರಾಜಶೇಖರಮೂರ್ತಿ ಆರೋಪಿಸಿದರು.
ವೈದ್ಯರ ಗೈರು: ತಾಲೂಕು ಸಂಚಾಲಕ ಬನ್ನಹಳ್ಳಿ ಸೋಮಣ್ಣ ಮಾತನಾಡಿ, ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯಾಧಿಕಾರಿಗಳಿಗೆ ವಸತಿ ಗೃಹ ವ್ಯವಸ್ಥೆ ಮಾಡಿದ್ದರೂ ಸಹ ನಿಯಮಗಳನ್ನು ಗಾಳಿಗೆ ತೂರಿ ಯಾವೊಬ್ಬ ವೈದ್ಯರೂ ವಾಸ್ತವ್ಯವಿಲ್ಲ. ಇದರಿಂದಾಗಿ ರಾತ್ರಿ ವೇಳೆ ತುರ್ತು ಸಂದರ್ಭಗಳಲ್ಲಿ ಬರುವಂತಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಇಲ್ಲದೆ ಸಾವನಪ್ಪುವಂತಹ ಪರಿಸ್ಥಿತಿ ಬಂದೊದಗಿದೆ.
ನಿಗದಿತ ಸಮಯಕ್ಕೆ ವೈದ್ಯರು ಹಾಜರಾಗದಿರುವುದೇ ಘಟನೆಗೆ ಕಾರಣ ಎಂದು ದೂರಿದರು. ಜನೌಷಧ ಕೇಂದ್ರವಿದ್ದರೂ ರೋಗಿಗಳು ಖಾಸಗಿ ಅಂಗಡಿಗಳಿಗೆ ಚೀಟಿ ಹಿಡಿದು ಅಲೆಯುವುದು ತಪ್ಪಿಲ್ಲ. ಹೆರಿಗೆ ಕೊಠಡಿ ಸೇರಿದಂತೆ ಮಹಿಳೆ ಮತ್ತು ಪುರುಷರ ವಾರ್ಡುಗಳ ಕೊಠಡಿಗಳು ಹಾಗೂ ಶೌಚಾಲಯಗಳಿಗೆ ನೀರಿನ ಸೌಲಭ್ಯವಿಲ್ಲದೆ ಅಶುಚಿತ್ವದ ತಾಣವಾಗಿವೆ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ರಾಜು ಹಾಗೂ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗೋವಿಂದರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಾಲೂಕು ಸಂಚಾಲಕ ಕೆಬ್ಬೆಹುಂಡಿ ನಿಂಗರಾಜು, ಸಂಘಟನಾ ಸಂಚಾಲಕರಾದ ಬನ್ನಹಳ್ಳಿ ಬಸವರಾಜು, ಮಾವಿನಹಳ್ಳಿ ರವಿ, ಮಾದಿಗಹಳ್ಳಿ ಮುದ್ದುರಾಜು,
ಕರೋಹಟ್ಟಿ ಮಹೇಂದ್ರ, ಹೆಳವರಹುಂಡಿ ರವಿ, ಹೊಸಕೋಟೆ ಕುಮಾರ್, ಮುಖಂಡರಾದ ಮಹದೇವಪ್ರಸಾದ್, ಕೃಷ್ಣ, ದೊಳ್ಳಯ್ಯ, ಚನ್ನಮಲ್ಲಯ್ಯ, ಮಹದೇವ, ಲೋಕೇಶ್, ಸೋಸಲೆ ಗಂಗಾಧರ್, ಚಂದ್ರು, ತೇಜು, ಮಹದೇವಸ್ವಾಮಿ, ದೀನೇಶ, ಸುಮಂತ್, ವಿಶ್ವ, ನಿಂಗರಾಜು, ಮದನ್, ಸುರೇಶ್ ಇನ್ನಿತರು ಪ್ರತಿಭಟನೆಯಲ್ಲಿ ಭಾಗವಹಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.