ನ್ಯಾಯಾಧೀಶರನ್ನು ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ
Team Udayavani, Feb 7, 2022, 7:39 PM IST
ಪಿರಿಯಾಪಟ್ಟಣ : ಪಟ್ಟಣದಲ್ಲಿ ವಿವಿಧ ದಲಿತ ಸಂಘಟನೆಗಳು ನ್ಯಾಯಾದೀಶ ಮಲ್ಲಿಕಾರ್ಜುನಗೌಡರನ್ನು ತಕ್ಷಣೆವೆ ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮರೆವಣಿಗೆ ನಡೆಸಿದರು.
ಪಟ್ಟಣದ ಪೊಲೀಸ್‌ಠಾಣೆಯ ಮುಂಬಾಗದಿAದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ದಲಿತ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಬಿ.ಎಂ.ರಸ್ತೆಯಲ್ಲಿ ಮೆರವಣಿಗೆ ನಡೆಸಿ ಕಾಲ್ನಡಿಗೆಯ ಮೂಲಕ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡು ಮಾನವ ಸರಪಳಿ ನಿರ್ಮಾಣಮಾಡಿ ರಸ್ತೆ ತಡೆ ನಡೆಸಿದರು.
ಪ್ರತಿಕೃತಿ ದಹನ :
ಮಾನವಸರಳಪಿಯೊಂದಿಗೆ ರಸ್ತೆ ತಡೆ ನಡೆಸಿದ ಸಂದರ್ಭದಲ್ಲಿ ನ್ಯಾಯಾದೀಶ ಮಲ್ಲಿಕಾರ್ಜುನಗೌಡರ ಪ್ರತಿಕೃತಿ ದಹಿಸಿ ಆಕ್ರೋಷ ವ್ಯಕ್ತಪಡಿಸಿದ ದಲಿತ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಅಂಬೇಡ್ಕರ್‌ಗೆ ಅವಮಾನ ಮಾಡಿರುವುದನ್ನು ಖಂಡಿಸಿದರು.
ಪ್ರತಿಭಟನೆ :
ನಂತರ ಕಾಲ್ನಡಿಗೆಯ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಕಚೇರಿಯ ಎದುರು ಧರಣಿ ನಡೆಸಿದ ಸಂಘಟನೆಗಳು ತಕ್ಷಣದಲ್ಲಿಯೇ ಮಲ್ಲಿಕಾರ್ಜುನಗೌಡರನ್ನು ಬಂಧಿಸಿಸಬೇಕು ಮತ್ತು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸಂವಿಧಾನಕ್ಕೆ ಅವಮಾನ :
ಮಾಜಿ ತಾ.ಪಂ.ಅಧ್ಯಕ್ಷ ರಾಮುಐಲಾಪುರ ಮಾತನಾಡಿ ದೇಶದ ಸಂವಿಧಾನವನ್ನು ರಚನೆ ಮಾಡಿದ ನೀಡಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್‌ಗೆ ಅವರ ಭಾವಚಿತ್ರವನ್ನು ಧ್ವಜಾರೋಹಣಸ್ಥಳದಿಂದ ತೆಗೆಸಿ ಅವಮಾನ ಮಾಡಿರುವ ನ್ಯಾಯಾಧೀಶರ ಕ್ರಮ ಖಂಡನೀಯ, ಅಂಬೇಡ್ಕರ್ ಬರೆದ ಸಂವಿಧಾನದಡಿಯಲ್ಲಿ ಕೆಲಸಪಡೆದು ಅವರಿಗೆ ಅವಮಾನ ಮಾಡಿರುವುದು ಇಡೀ ವ್ಯವಸ್ಥೆ ತಲೆತಗ್ಗಿಸುವ ವಿಚಾರವಾಗಿದೆ ಅದ್ದರಿಂದ ಶೀಘ್ರದಲ್ಲದೆ ನ್ಯಾಮೂರ್ತಿ ಮಲ್ಲಿಕಾರ್ಜುನಗೌಡರನ್ನು ಸೇವೆಯಿಂದ ವಜಾಮಾಡಬೇಕು ಮತ್ತು ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಕ್ಕೆ ಅವರಿಗೆ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡಣ್ಣ, ರಾಜು, ತಮ್ಮಣ್ಣಯ್ಯ, ಸಿ.ಎಸ್.ಜಗದೀಶ್, ಗೋಪಾಲ್, ಧನರಾಜ್, ಭೀಮ್‌ಆರ್ಮಿ ಸಂಘಟನೆಯ ಅಧ್ಯಕ್ಷ ವಾಲೆಗಿರೀಶ್, ಹಾಡಿ ಮುಖಂಡ ಬಸಪ್ಪ, ಗೋಪಾಲ್, ಶಫೀಮಹಮ್ಮದ್, ನಜ್ಮನಜೀರ್, ಸೇರಿದಂತೆ ನೂರಾರು ಮಂದಿ ಪ್ರತಿಭಟನಾಕಾರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.