ಖಾಸಗೀಕರಣ ವಿರೋಧಿಸಿ ಬ್ಯಾಂಕ್‌ ನೌಕರರ ಮುಷ್ಕರ


Team Udayavani, Dec 17, 2021, 12:19 PM IST

ಪ್ರತಿಭಟನೆ

ಮೈಸೂರು: ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿಧೇಯಕ ವಿರೋಧಿಸಿ ಆಲ್‌ ಇಂಡಿಯಾ ಆಫಿಸರ್ ಕಾನೆ#ಡರೇಶನ್‌ ಕರೆ ನೀಡಿರುವ ಮುಷ್ಕರಕ್ಕೆ ಯುನೈಟೆಡ್‌ ಫೋರಂ ಬ್ಯಾಂಕ್‌ ಯೂನಿಯನ್‌ ನೇತೃತ್ವದಲ್ಲಿ ಸಾರ್ವ ಜನಿಕ ವಲಯದ ಬ್ಯಾಂಕ್‌ ನೌಕರರು ಮೈಸೂರಿ ನಲ್ಲಿಕೆಲಸ ಬಹಿಷ್ಕರಿಸಿ ಮುಷ್ಕರ ನಡೆಸಿದರು. ಮೈಸೂರಿನ ಟಿ.ಕೆ.ಬಡಾವಣೆಯ ಎಸ್‌ಬಿಐ ಬಳಿ ನೂರಾರು ಬ್ಯಾಂಕ್‌ ನೌಕರರು ಬ್ಯಾಂಕ್‌ ಖಾಸಗೀಕರಣ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕವಲಯದಬ್ಯಾಂಕುಗಳನ್ನು (ಪಿಎಸ್‌ಬಿ)ಖಾಸಗೀಕರಣಗೊಳಿಸಲುಸರ್ಕಾರ ಸಂಸತ್‌ ಅಧಿವೇಶನದಲ್ಲಿ ಬ್ಯಾಂಕಿಂಗ್‌ ಕಾನೂನುಗಳು (ತಿದ್ದುಪಡಿ) ಮಸೂದೆ-2021 ಅನ್ನು ಮಂಡಿಸಲು ಮುಂದಾಗಿರುವುದು ಖಂಡನೀಯ. ಸಾರ್ವಜನಿಕ ಬ್ಯಾಂಕ್‌ಗಳು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ವೇಗವರ್ಧಕ ಗಳಾಗಿವೆ.

ವಿಶೇಷವಾಗಿ ಸಮಾಜಲ್ಲಿ ಹಿಂದುಳಿದ ವರ್ಗಗಳಿಗೆ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಕೃಷಿ, ಸಣ್ಣ, ವ್ಯಾಪಾರ, ಶಿಕ್ಷಣ, ಸಾರಿಗೆ ಸೇರಿದಂತೆ ಸಮಾಜ ದುರ್ಬಲ ವರ್ಗಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು.

ಪ್ರಗತಿಗೆ ಬ್ಯಾಂಕ್‌ಗಳಲ್ಲಿ ಸಾಲ: ದುರ್ಬಲ, ಹಿಂದುಳಿದ ವರ್ಗಗಳ ಏಳಿಗೆಗೆ ನಮ್ಮ ಬ್ಯಾಂಕ್‌ ಗಳು ಸಾಲ ನೀಡುತ್ತಿವೆ. ಇವು ಜನ ಸಾಮಾನ್ಯರ ಬ್ಯಾಂಕ್‌. ಇವು ಖಾಸಗೀಕರಣಗೊಂಡರೆ ಸಾಮಾನ್ಯರು ಮತ್ತು ಸಮಾಜದ ಕಟ್ಟೆ ಕಡೆಯ ವ್ಯಕ್ತಿಗಳಿಗೆ ಬ್ಯಾಂಕಿಂಗ್‌ ಸೇವೆ ದುಬಾರಿಯಾ ಗಲಿದೆ. ಸಾರ್ವಜನಿಕ ವಲಯ ಬ್ಯಾಂಕ್‌ಗಳು ಕಳೆದೆರಡು ದಶಕಗಳಿಂದ ಸಂವೃದ್ಧವಾಗಿವೆ. ಯಾವುದೇ ನಷ್ಟವಿಲ್ಲದೆ ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಿದೆ.

ನಷ್ಟದ ಸುಳಿಯಲ್ಲಿ ಸಿಲುಕಿ ಮುಳುಗುತ್ತಿದ್ದ ಎಷ್ಟು ಖಾಸಗಿ ಬ್ಯಾಂಕ್‌ಗಳು ಪಿಎಸ್‌ಬಿಗಳು ರಕ್ಷಿಸಿವೆ. ಒಂದು ವೇಳೆ ಪಿಎಸ್‌ಬಿಗಳು ಖಾಸಗೀಕರಣ ಗೊಳಿಸಿದರೆ, ಅವು ನಷ್ಟದ ಸುಳಿಯಲ್ಲಿ ಸಿಲುಕಿ ದರೆ ಬ್ಯಾಂಕ್‌ ಹಾಗೂ ಅದರ ಗ್ರಾಹಕರ ರಕ್ಷಣೆಗೆ ಯಾರು ಮುಂದೆ ಬರುತ್ತಾರೆ ಎಂದು ಪ್ರಶ್ನಿಸಿದರು. ಕಾರ್ಪೋರೆಟ್‌ ಮತ್ತು ದೊಡ್ಡ ವ್ಯಾಪಾರ ಸಂಸ್ಥೆಗಳುಪಿಎಸ್‌ಬಿಗಳನ್ನುಬಿಕ್ಕಟ್ಟಿಗೆಸಿಲುಕಿಸಿವೆ. ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ ಅಡಿಯಲ್ಲಿ ಕೆಟ್ಟ ಸಾಲ ಹಾಗೂ ದೊಡ್ಡ ಕಾರ್ಪೋರೆಟ್‌ ಬ್ಯಾಡ್‌ ಲೋನ್‌ಗಳನ್ನು ಪರಿಹರಿಸಲಾಗಿದೆ. ಇದು ಬ್ಯಾಂಕ್‌ ಗಳಿಗೆ ನಷ್ಟ ಉಂಟು ಮಾಡಿದೆ ಎಂದು ತಿಳಿಸಿದರು.

ಖಾಸಗೀಕರಣ ಕಾಯ್ದೆ ಹಿಂಪಡೆಯಿರಿ: ವಿವಿಧ ಸಾಮಾಜಿಕ ವಲಯದ ಸಾಲಗಳು, ಪಿಂಚಣಿ ಮತ್ತು ವಿಮಾ ಯೋಜನೆಗಳಾದ ಜನ್‌ಧನ್‌, ನಿರುದ್ಯೋಗಿ ಯುವಕರಿಗೆ ಮುದ್ರಾ, ಬೀದಿ ಬದಿ ವ್ಯಾಪಾರಿಗಳಿಗೆ ಸ್ಪಧನ್‌, ಪ್ರಧಾನ್‌ ಮಂತ್ರಿ ಆವಾಸ್‌ ಯೋಜನೆ, ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ, ಯೋಜನೆ, ಪ್ರಧಾನ ಮಂತ್ರಿ ಜೀವನ್‌ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆ, ಪ್ರಧಾನ ಮಂತ್ರಿ ಕಿಸಾನ್‌ ಕಲ್ಯಾಣ ಯೋಜನೆ, ಅಟಾಲ್‌ ಪಿಂಚಣಿ ಸೇರಿದಂತೆ ಸರಕಾರ ಹಲವು ಜನಪರ ಕಾರ್ಯಕ್ರಮಕ್ಕೆ ಪಿಎಸ್‌ಬಿಗಳು ಒತ್ತಾಸೆಯಾಗಿವೆ.

ಆದ್ದರಿಂದ ಪಿಎಸ್‌ಬಿಗಳನ್ನು ಖಾಸಗೀಕರಣಗೊಳಿಸುವ ಮಸೂದೆಯನ್ನು ಹಿಂಪಡೆಯಬೇಕು ಎಎಂದು ಒಕ್ಕೂಟದ ಸಂಚಾಲಕ ಎಚ್‌.ಬಾಲಕೃಷ್ಣ ಆಗ್ರಹಿಸಿದರು. ಸಮಿತಿಯ ಶ್ರೀರಾಮ್‌, ಬೊಪ್ಪಣ್ಣ, ಮಹೇಶ್‌, ಅಂಜನಕುಮಾರ್‌, ಸ್ನೇಹ, ಕಲ್ಯಾಣ ಕುಮಾರಿ ಸೇರಿದಂತೆ ಮುಂತಾದವರು ಇದ್ದರು.

ಜಿಲ್ಲೆಯಲ್ಲಿ ಬ್ಯಾಂಕ್‌ ಸೇವೆ ಸ್ಥಗಿತಗೊಳಿಸಿ ಮುಷ್ಕರ

ಚಾಮರಾಜನಗರ: ಸರ್ಕಾರದ ಬ್ಯಾಂಕ್‌ ಖಾಸಗೀಕರಣ ಮಸೂದೆಯನ್ನು ವಿರೋಧಿಸಿ ಅಖೀಲ ಭಾರತ ಬ್ಯಾಂಕ್‌ ನೌಕರರ ಸಂಘಟನೆ ಕರೆ ನೀಡಿರುವ ಎರಡು ದಿನಗಳ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಕರ್ನಾಟಕ ಬ್ಯಾಂಕ್‌ ನೌಕರರು ಬ್ಯಾಂಕ್‌ ಸೇವೆಗಳನ್ನು ಸ್ಥಗಿತಗೊಳಿಸಿ ಗುರುವಾರ ಮುಷ್ಕರ ನಡೆಸಿದರು.

ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ, ಹನೂರು ತಾಲೂಕು ವ್ಯಾಪ್ತಿಯಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಸಗಿ ವಲಯದ ಕರ್ನಾಟಕ ಬ್ಯಾಂಕ್‌ ಸಹ ಮುಷ್ಕರದಲ್ಲಿ ಭಾಗಿಯಾಗಿದ್ದವು. ಹೀಗಾಗಿ ಈ ಬ್ಯಾಂಕ್‌ಗಳು ಮುಚ್ಚಿದ್ದವು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವು ಬ್ಯಾಂಕಿಂಗ್‌ ಕಾನೂನುಗಳ(ತಿದ್ದುಪಡಿ) ಮಸೂದೆ 2021 ಅನ್ನು ಪರಿಚಯಿಸುತ್ತಿದೆ.

ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ ಗಳನ್ನು ಖಾಸಗೀಕರಣಗೊಳಿಸುವುದು, ಬ್ಯಾಂಕಿಂಗ್‌ ಕಂಪನಿಗಳ ಕಾಯ್ದೆಗಳಲ್ಲಿ ತಿದ್ದುಪಡಿ ಮಾಡುವುದು, 1970 ಮತ್ತು 1980ರ ಮತ್ತು ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ,1949ರಲ್ಲಿ ಪ್ರಾಸಂಗಿಕ ತಿದ್ದುಪಡಿ ಮಾಡುವುದು ಈ ಮಸೂದೆಯ ಉದ್ದೇಶವಾಗಿದೆ. ಇದರ ವಿರುದ್ಧ ಗುರುವಾರ ಮತ್ತು ಶುಕ್ರವಾರ ಬ್ಯಾಂಕ್‌ ನೌಕರರು ತಮ್ಮ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ.

ಪರದಾಡಿದ ಗ್ರಾಹಕರು: ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ 2 ದಿನಗಳ ಕಾಲ ಬ್ಯಾಂಕ್‌ ನೌಕರರು ನಡೆಸುತ್ತಿರುವ ಮುಷ್ಕರದ ಬಿಸಿ ಗ್ರಾಹಕರಿಗೆ ತಟ್ಟಿತು. ಜಿಲ್ಲಾದ್ಯಂತ ರಾಷ್ಟ್ರೀಕೃತ ಬ್ಯಾಂಕ್‌ಗಳು ತಮ್ಮ ಸೇವೆ ಸ್ಥಗಿತಗೊಳಿಸಿದ್ದವು. ಇದರ ಅರಿವು ಇಲ್ಲದ ಗ್ರಾಹಕರು ಬ್ಯಾಂಕ್‌ ಗಳಿಗೆ ಆಗಮಿಸಿದಾಗ ಬ್ಯಾಂಕ್‌ ಮುಷ್ಕರದ ವಿಷಯ ತಿಳಿದು ಪರದಾಡಿದರು. ಹಣ ಕಟ್ಟುವುದು, ಹಣ ತೆಗೆದುಕೊಳ್ಳುವುದು, ಸಾಲ ಸೌಲಭ್ಯ ಸೇರಿದಂತೆ ಇತರೆ ಕೆಲಸಗಳಿಗಾಗಿ ಬ್ಯಾಂಕ್‌ಗಳಿಗೆ ಆಗಮಿಸಿದ ಗ್ರಾಹಕರಿಗೆ ಬ್ಯಾಂಕ್‌ ಮುಷ್ಕರದಿಂದ ತೊಂದರೆಯಾಯಿತು. ಕೆಲವರಿಗೆ ಬ್ಯಾಂಕ್‌ ಮುಷ್ಕರದ ವಿಷಯ ತಿಳಿದಿದ್ದರೆ ಇನ್ನೂ ಹಲವರಿಗೆ ಮುಷ್ಕರದ ಮಾಹಿತಿ ಇಲ್ಲದ ಕಾರಣ ದೂರದ ಊರುಗಳಿಂದ ಆಗಮಿಸಿದ್ದ ಜನರು ಬಂದ ದಾರಿಗೆ ಸುಂಕವಿಲ್ಲದಂತೆ ತಮ್ಮಊರುಗಳಿಗೆ ವಾಪಸ್ಸು ತೆರಳಿದರು.

ಎಟಿಎಂಗೆ ಮುಗಿಬಿದ್ದ ಜನತೆ:ಬ್ಯಾಂಕ್‌ ಮುಷ್ಕರ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ತೆರಳಿ ಹಣ ಡ್ರಾ ಮಾಡುವ ಯೋಜನೆಯಲ್ಲಿದ್ದ ಜನತೆ ಎಟಿಎಂಗಳಿಗೆ ತೆರಳಿ ಹಣ ಡ್ರಾ ಮಾಡುತ್ತಿದ್ದ ದೃಶ್ಯ ಕಂಡುಬಂತು. ಈ2ದಿನಗಳಲ್ಲದೇ ಮುಂದಿನ ದಿನಗಳಲ್ಲೂ ಮುಷ್ಕರ ಆಗುತ್ತದೆ ಎಂಬ ಭಯದಿಂದ ಎಟಿಎಂಗಳಿಗೆ ತೆರಳಿ ಹಣಡ್ರಾ ಮಾಡಿಕೊಂಡರು. ಇದರಿಂದ ಬಹುತೇಕ ಎಟಿಎಂಗಳ ಮುಂದೆ ಹೆಚ್ಚಿನ ಜನರು ಕಂಡುಬಂದರು. ಬ್ಯಾಂಕ್‌ ಮುಷ್ಕರ ಮುಂದುವರಿಯುವುದರಿಂದ ಮುಂಚಿತವಾಗಿ ಜನತೆ ಎಟಿಎಂ ಮೂಲಕ ಹಣ ಡ್ರಾ ಮಾಡಿಕೊಳ್ಳಲು ಯತ್ನಿಸಿದರು.

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Hunsur: ಶಬರಿಮಲೈ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.