ಶಾಸಕ ಮಂಜುನಾಥ್ ವಿರುದ್ದ ಗಣೇಶ್‌ಕುಮಾರಸ್ವಾಮಿ ಅಭಿಮಾನಿಗಳಿಂದ ಪ್ರತಿಭಟನೆ
Team Udayavani, Mar 24, 2023, 10:29 PM IST
ಹುಣಸೂರು: ಇತ್ತೀಚೆಗೆ ನಗರೋತ್ಥಾನ ಯೋಜನೆಯ ಅನುಷ್ಟಾನದ ವೇಳೆ ಶಿಷ್ಟಾಚಾರ ಪ್ರಶ್ನಿಸಿದ ನಗರಸಭೆ ಸದಸ್ಯ, ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ ವಿರುದ್ದ ಶಾಸಕ ಮಂಜುನಾಥರು ನಿಂದಿಸಿದ್ದಾರೆಂದು ಆರೋಪಿಸಿ ಗಣೇಶ್‌ಕುಮಾರಸ್ವಾಮಿ ಅಭಿಮಾನಿಗಳು ಹಾಗೂ ಕೆಲ ಕುರುಬಸಮುದಾಯದ ಮುಖಂಡರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶುಕ್ರವಾರದಂದು ನಗರದ ಸಂವಿಧಾನ ಸರ್ಕಲ್‌ನಿಂದ ಹೊರಟ ಪ್ರತಿಭಟನಾಕಾರರು ಎಸ್.ಜೆ.ರಸ್ತೆ. ಜೆ.ಎಲ್.ಬಿ.ರಸ್ತೆ. ಬಜಾರ್ ರಸ್ತೆ ಮಾರ್ಗವಾಗಿ ಸಾಗಿ ಬಂದು ಕೆಲ ಹೊತ್ತು ಸರ್ಕಲ್‌ನಲ್ಲಿ ಧರಣಿ ನಡೆಸಿದರು. ಮೆರವಣಿಗೆಯುದ್ದಕ್ಕೂ ಶಾಸಕ ಮಂಜುನಾಥರ ವಿರುದ್ದ ಧಿಕ್ಕಾರ ಮೊಳಗಿಸಿದರು.
ಧರಣಿಯಲ್ಲಿ ಮಾತನಾಡಿದ ಗಣೇಶ್‌ಕುಮಾರಸ್ವಾಮಿ ಬಳಗದ ಅಧ್ಯಕ್ಷ ರವಿಕುಮಾರ್, ಪುರಸಭೆ ಮಾಜಿ ಸದಸ್ಯ ಆನಂದ್, ಮೂಕನಹಳ್ಳಿವಾಸು, ತಾ.ಪಂ.ಮಾಜಿ ಸದಸ್ಯ ಗಣಪತಿ, ಪ್ರಭಾಕರ್‌ಹೆಗ್ಗಡೆ ಮತ್ತಿತರರು ಮಾತನಾಡಿ ಜನಪ್ರತಿನಿಧಿಯಾಗಿರುವ ಶಾಸಕರು ಇತ್ತೀಚೆಗೆ ಕಲ್ಕುಣಿಕೆ ವೃತ್ತದಲ್ಲಿ ನಗರೋತ್ಥಾನ ಯೋಜನೆ ಕಾಮಗಾರಿಗೆ ಚಾಲನೆ ನೀಡುವ ವೇಳೆ ಶಿಷ್ಟಾಚಾರವನ್ನೂ ಪಾಲಿಸದ್ದನ್ನು ಪ್ರಶ್ನಿಸಲು ಹೋದ ಗಣೇಶ ಕುಮಾರಸ್ವಾಮಿ ಮತ್ತು ಬೆಂಬಲಿಗರ ವಿರುದ್ದ ತಮ್ಮ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರೂ ಕ್ಷಮೆಯಾಚಿಸಿಲ್ಲ. ಇನ್ನು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಗರಸಭೆ ಅಧಿಕಾರಿಗಳನ್ನು ಬೆದರಿಸಿ ಸರ್ವಾಧಿಕಾರಿಯಂತೆ ನಡೆದು ಕೊಂಡಿದ್ದಾರೆ. ಹೀಗಾಗಿ ಶಾಸಕರ ವಿರುದ್ದ ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಪಾರಸ್ಸು ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕುರುಬ ಸಮಾಜದ ಮಖಂಡರಾದ ಬಿಜೆಪಿ ಮುಖಂಡರಾದ ರವಿಕುಮಾರ್, ರಾಕೇಶ್, ನಗರಸಭೆ ನಾಮ ನಿರ್ದೇಶಿತ ಸದಸ್ಯ ರಮೇಶ್, ಮುಖಂಡರಾದ ನಾಗರಾಜಪ್ಪ, ಶ್ರೀನಿವಾಸ್, ಜವರೇಗೌಡ, ಚಂದ್ರೇಗೌಡ, ಸೋಮಣ್ಣ, ಮುದ್ದುರಾಮ್, ಹರಿ, ಗುಡ್ಡಪ್ಪ, ಸೂರೇಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು. ನಂತರ ತಾಲೂಕು ಕಚೇರಿಗೆ ತೆರಳಿ ಉಪ ತಹಶೀಲ್ದಾರ್ ಶಕಿಲಾಬಾನುರಿಗೆ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.