ಪುಟ್ಟಣ್ಣಯ್ಯ ಅಗಲಿಕೆ ಪ್ರಗತಿಪರ ಚಳವಳಿಗೆ ನಷ್ಟ
Team Udayavani, Feb 28, 2018, 12:28 PM IST
ತಿ.ನರಸೀಪುರ: ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಅಗಲಿಕೆಯಿಂದ ಪ್ರಗತಿಪರ ಚಳವಳಿ ಸಮರ್ಥ ಹೋರಾಟಗಾರನೋರ್ವನನ್ನು ಕಳೆದುಕೊಂಡಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಹೇಳಿದರು.
ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ರೈತ ನಾಯಕ ಹಾಗೂ ಪಾಂಡವಪುರ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಹೋರಾಟದ ಬದುಕಿನುದ್ದಕ್ಕೂ ಕೋಮುವಾದ ಹಾಗೂ ಮನುವಾದದ ವಿರುದ್ಧ ಹೋರಾಟವನ್ನು ಮಾಡುವ ಮೂಲಕ ದುರ್ಬಲ ತಳ ಸಮುದಾಯ ಪರ ಧ್ವನಿಯಾಗಿದ್ದ ಪುಟ್ಟಣ್ಣಯ್ಯ ಅವರು ಜಾತ್ಯತೀತ ಮತ್ತು ಪ್ರಗತಿಪರರ ನಡುವಿನ ಕೊಂಡಿಯಾಗಿದ್ದರು ಎಂದರು.
ಹೋರಾಟದ ಆದರ್ಶ: ರಾಜ್ಯದಲ್ಲಿ ರೈತ ಚಳವಳಿ ಮತ್ತು ದಲಿತ ಚಳುವಳಿ ಆರಂಭದ ದೆಸೆಯಿಂದಲೂ ಹೋರಾಟದ ಬದುಕನ್ನು ಆರಂಭಿಸಿದ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಹತ್ತಿರದಿಂದ ನೋಡಿ ಅವರ ಹೋರಾಟದ ಆದರ್ಶಗಳನ್ನು ಕಲಿತಿದ್ದೇವೆ.
ಹೋರಾಟಗಳ ಸಂದರ್ಭ ಅವರೊಟ್ಟಿಗೆ ರೈಲಿನಲ್ಲಿ ಪ್ರಯಾಣಿಸಿದ ಅನುಭವ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಹೋರಾಟ ಮಜಲುಗಳ ನಡುವೆಯೂ ಶಾಸನಸಭೆಗೆ ಆಯ್ಕೆಗೊಂಡು ರೈತರ ಅನ್ಯಾಯವನ್ನು ವಿಧಾನಸೌದದ ಅಧಿವೇಶನದಲ್ಲೂ ಮಾರ್ಧನಿಸುವಂತೆ ಮಾಡಿದ್ದರು ಎಂದು ಶ್ರದ್ಧಾಂಜಲಿ ನುಡಿಗಳನ್ನಾಡಿದರು.
ರೈತ ಪರ ಹೋರಾಟ ಜೀವಂತ: ರೈತ ಸಂಘದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ರೈತಪರ ಮತ್ತು ಬಡವರ ಪರವಾದ ಹೋರಾಟಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರು, ಹೋರಾಟಗಾರರಿಗೆ ಮಾರ್ಗದರ್ಶಕರಂತಿದ್ದರು. ಅವರು ನಮ್ಮನ್ನು ಅಗಲಿದ್ದರೂ ಅವರಲ್ಲಿದ್ದ ರೈತಪರ ಹೋರಾಟದ ಚೈತನ್ಯ ಈಗಲೂ ನಮ್ಮೊಂದಿಗೆ ಜೀವಂತವಾಗಿದೆ ಎಂದು ತಿಳಿಸಿದರು.
ದಸಂಸ ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವನಂಜ, ಗ್ರಾ.ಪಂ ಮಾಜಿ ಅಧ್ಯಕ್ಷ ತುರುಗನೂರು ಲಕ್ಷ್ಮಣ್, ಮುಖಂಡರಾದ ಹಿರಿಯೂರು ಸೋಮಣ್ಣ, ಕಿರಗಸೂರು ರಜನಿ, ಬಸವರಾಜು, ನಾಗೇಶ, ನಿಂಗರಾಜು, ಸಿದ್ದರಾಜು, ಹೆಮ್ಮಿಗೆ ಕುಮಾರ, ರಾಜು, ಕೃಷ್ಣಪ್ಪ, ಆನಂದ್, ಮಹದೇವಸ್ವಾಮಿ, ಪುಟ್ಟಮಾದು, ಶಿವರಾಮು ಹಾಗೂ ಇನ್ನಿತರರು ಹಾಜರಿದ್ದರು.
ರೈತ ಸಂಘ, ದಸಂಸ ಬಣಗಳು ಒಗ್ಗೂಡಬೇಕು
ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನಕ್ಕೆ ಅರ್ಥಪೂರ್ಣವಾಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಬೇಕಾದರೆ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಯ ಬಣಗಳು ಒಗ್ಗೂಡಬೇಕು. ಪುಟ್ಟಣ್ಣಯ್ಯರಂತೆ ರೈತ ಸಂಘ ಮತ್ತು ದಸಂಸ ಸಂಘಟನೆಗಳನ್ನು ಬೇರು ಮಟ್ಟದಲ್ಲಿ ಸಂಘಟನೆ ಮಾಡಿದಂತಹ ಅನೇಕ ತ್ಯಾಗಮಯಿ ನಾಯಕರು ನಮ್ಮನ್ನು ಬಿಟ್ಟು ಅಗಲಿರುವುದರಿಂದ ನಾವುಗಳು ವೈಯುಕ್ತಿ ಪ್ರತಿಷ್ಠೆಯನ್ನು ಕೈ ಬಿಟ್ಟು ಒಗ್ಗೂಡವತ್ತ ಚಿಂತನೆ ಮಾಡಬೇಕಿದೆ.
-ಆಲಗೂಡು ಶಿವಕುಮಾರ್, ದಸಂಸ ಜಿಲ್ಲಾ ಸಂಚಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.