ಆಧಾರ್‌ ನೋಂದಣಿಗೆ ಬೆಳಗ್ಗೆಯಿಂದಲೇ ಕ್ಯೂ


Team Udayavani, Jun 15, 2019, 3:00 AM IST

aaddhar

ತಿ.ನರಸೀಪುರ: ಸರ್ಕಾರಿ ಸೌಲಭ್ಯ ಸೇರಿದಂತೆ ಪ್ರತಿಯೊಂದಕ್ಕೂ ಆಧಾರ್‌ ಕಾರ್ಡ್‌ ಕಡ್ಡಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ ಕೆಲವು ಆಧಾರ್‌ ನೋಂದಣಿ ಕೇಂದ್ರಗಳಲ್ಲಿ ನೋಂದಣಿ ಮತ್ತು ತಿದ್ದುಪಡಿಗಾಗಿ ಜನದಟ್ಟಣೆ ಹೆಚ್ಚಾಗುತ್ತಿದ್ದು, ತಾಲೂಕಿನ ಬನ್ನೂರು ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಆಧಾರ್‌ಗಾಗಿ ಜನರು ದಿನಗಟ್ಟಲೆ ಸಾಲುಗಟ್ಟಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆಧಾರ್‌ ನೋಂದಣಿಗೆ ಪಟ್ಟಣದ ತಾಲೂಕು ಕಚೇರಿ, ಮಹೀಂದ್ರಾ ಕೋಟಕ್‌ ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಬನ್ನೂರು ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲೂ ಒಂದು ಕೇಂದ್ರವನ್ನು ಆಧಾರ್‌ ನೋಂದಣಿಗೆ ಆರಂಭಿಸಲಾಗಿದೆ.

ತಾಂತ್ರಿಕ ನೆಪದಲ್ಲಿ ತಿ.ನರಸೀಪುರ ಅಂಚೆ ಕಚೇರಿಯಲ್ಲಿ ಆಧಾರ್‌ ಸ್ಥಗಿತಗೊಂಡಿದೆ. ಸಿಗ್ನಲ್‌ ಹಾಗೂ ಸರ್ವರ್‌ ಸಮಸ್ಯೆ ಆಗಾಗ ಕಾಡುವುದರಿಂದ ತಾಲೂಕು ಕಚೇರಿ ನೋಂದಣಿ ವಿಳಂಬವಾದರೆ, ಮಹಿಂದ್ರಾ ಕೋಟಕ್‌ ಬ್ಯಾಂಕ್‌ನಲ್ಲಿ ತಾಂತ್ರಿಕ ಸಮಸ್ಯೆ ಎಂಬುದಾಗಿ ನಾಮಫ‌ಲಕ ತೂಗಿ ಹಾಕಲಾಗುತ್ತಿದೆ.

ಹಳೇ ಉಪಕರಣ: ತಾಲೂಕು ಕಚೇರಿಯಲ್ಲಿನ ಕಂಪ್ಯೂಟರ್‌ ಹಾಗೂ ಆಧಾರ್‌ ಉಪಕರಣಗಳೆಲ್ಲವೂ ಹಳೆಯದಾಗಿದ್ದು, ನೋಂದಣಿ ಕಾರ್ಯವೇಳೆ ಕೈ ಕೊಡುತ್ತದೆ. ಬನ್ನೂರು ಬ್ಯಾಂಕ್‌ನಲ್ಲಿನ ಆಧಾರ್‌ ಕೇಂದ್ರದಲ್ಲಿ ನೋಂದಣಿ ಸಲೀಸು ಎನ್ನುವ ಅಭಿಪ್ರಾಯ ಕೇಳಿ ಬರುವುದರಿಂದ ಹೋಬಳಿ ಕೇಂದ್ರದಲ್ಲಿರುವ ಒಂದೇ ಒಂದು ಆಧಾರ್‌ ಕೇಂದ್ರದ ಮೇಲೆ ತಾಲೂಕಿನ ಜನರಲ್ಲದೇ, ನೆರೆ ಹೊರೆಯ ಜನರೂ ಕೂಡ ಮುಗಿಬೀಳುತ್ತಿದ್ದಾರೆ. ಹೀಗಾಗಿ ಹಣಕಾಸಿ ವಹಿವಾಟು ನಡೆಯುವ ಬನ್ನೂರು ಎಸ್‌ಬಿಐ ಬ್ಯಾಂಕ್‌ ಈಗ ಆಧಾರ್‌ ನೋಂದಣಿಗೆ ಜನರಿಂದ ತುಂಬಿ ಹೋಗುತ್ತಿದೆ.

ಬೆರಳೆಣಿಕೆ ಕೇಂದ್ರ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲದಕ್ಕೂ ಆಧಾರ್‌ ಅನ್ನು ಅನಿವಾರ್ಯ ಮಾಡಿದ್ದರಿಂದ ತಾಲೂಕಿನಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿರುವ ಕೇಂದ್ರಗಳ ಮೇಲೆ ಜನರು ಮುಗಿ ಬೀಳುತ್ತಿದ್ದಾರೆ. ಅಲ್ಲದೇ ಬೆಳಗಾಗುತ್ತಿದ್ದಂತೆ ನಿತ್ಯದ ಕೆಲಸವನ್ನು ಬಿಟ್ಟು ಮಹಿಳೆಯರು ಮತ್ತು ಮಕ್ಕಳೆಲ್ಲರೂ ಆಧಾರ್‌ ಕೇಂದ್ರಗಳ ಮುಂದೆ ಅಲೆಮಾರಿಗಳಂತೆ ಸಾಲುಗಟ್ಟಿ ನಿಂತಿರುತ್ತಾರೆ. ಊಟ ನೀರು ಇಲ್ಲದೆಯೇ ಕುಳಿತಿರುತ್ತಾರೆ.

ಕೇಂದ್ರ ಆರಂಭಿಸಿ: ಆಧಾರ್‌ ನೋಂದಣಿ ಹಾಗೂ ತಿದ್ದುಪಡಿಗೆ ಇಷ್ಟೊಂದು ಸಮಸ್ಯೆಗಳಿದ್ದರೂ ತಾಲೂಕು ಆಡಳಿತ ಗಮನ ಹರಿಸುತ್ತಿಲ್ಲ. ಹೆಚ್ಚುವರಿ ಆಧಾರ್‌ ಕೇಂದ್ರಗಳನ್ನು ತೆರೆಯುವ ಬಗ್ಗೆ ಕನಿಷ್ಠ ಕಾಳಜಿಯನ್ನೂ ತೋರುತ್ತಿಲ್ಲ. ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಮೊದಲು ತಾಲೂಕು ಆಡಳಿತ ಎತ್ತೆಚ್ಚುಕೊಳ್ಳಬೇಕಿದೆ.

ಬನ್ನೂರು ಬ್ಯಾಂಕ್‌ಗೆ ಭದ್ರತೆ ಕಲ್ಪಿಸಿ: ಬನ್ನೂರು ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿನ ಆಧಾರ್‌ ನೋಂದಣಿ ಕೇಂದ್ರದಲ್ಲಿ ನೋಂದಣಿಗೆ ಜನದಟ್ಟಣೆ ಹೆಚ್ಚುತ್ತಿರುವುದರಿಂದ ನಿತ್ಯವೂ ಹಣಕಾಸಿನ ವಹಿವಾಟು ನಡೆಸುವ ಬ್ಯಾಂಕ್‌ಗೆ ಭದ್ರತೆಯ ಆತಂಕ ಎದುರಾಗಿದೆ.

ಪ್ರತಿದಿನ ಬ್ಯಾಂಕ್‌ಗೆ ಹಣಕಟ್ಟಲು ಹಾಗೂ ಸ್ವೀಕರಿಸಲು ಜನರು ಬರುತ್ತಾರೆ. ವ್ಯವಹಾರ ಸಮಯದಲ್ಲೇ ಆಧಾರ್‌ ನೊಂದಣಿಗೆ ಜನರು ಸೇರುವುದರಿಂದ ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಪೊಲೀಸ್‌ ಇಲಾಖೆ ಆಧಾರ್‌ ನೋಂದಣಿ ವೇಳೆಯಾದರೂ ಎಸ್‌ಬಿಐ ಬ್ಯಾಂಕ್‌ಗೆ ಬಿಗ್ರಿಭದ್ರತೆ ಒದಗಿಸುವಂತೆ ಬ್ಯಾಂಕಿನ ಗ್ರಾಹಕರು ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-snehamayi

Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

3-hunsur

Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

2

Kasaragod: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Untitled-1

Kasaragod Crime News: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.