ಹುಣಸೂರು ತಾಲೂಕಾದ್ಯಂತ ಮಳೆ ಆರ್ಭಟ: ಬೆಳೆ ನಷ್ಟ


Team Udayavani, May 3, 2017, 12:37 PM IST

mys2.jpg

ಹುಣಸೂರು: ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಬಿಳಿಕೆರೆ ಹಾಗೂ ಕಸಬಾ ಹೋಬಳಿಯ ಗ್ರಾಮಗಳು ಮತ್ತು ಗುರುಪುರ ಭಾಗದಲ್ಲಿ ಸಾಕಷ್ಟು ನಷ್ಟ ಉಂಟುಮಾಡಿದ್ದು, ಗ್ರಾಮಸ್ಥರು ಸಂಕಷ್ಟಕ್ಕೊಳಗಾಗಿದ್ದಾರೆ. ಹಾನಿಗೀ ಡಾದ ಪ್ರದೇಶಗಳಿಗೆ ತಹಶೀಲ್ದಾರ್‌ ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದ ತಂಡ ಭೇಟಿಯಿತ್ತು ಪರಿಶೀಲನೆ ನಡೆಸಿದರು.

ಬಿಳಿಕೆರೆ ಹೋಬಳಿಯ ಕುಡಿನೀರು ಮುದ್ದನ ಹಳ್ಳಿ, ದಾಸನಪುರ, ಬ್ಯಾಡರಹಳ್ಳಿ ಕಾಲೋನಿ, ರತ್ನಪುರಿ, ಸೇರಿದಂತೆ ಕಸಬಾ ಹೋಬಳಿಯ ಚೌಡಿಕಟ್ಟೆ, ಕಲ್ಲುಮಂಟಿ, ಸಿದ್ದಲಿಂಗಪುರ, ಹನಗೋಡು ಹೋಬಳಿಯ ಮಾಜಿಗುರುಪುರ, ಕಾಳೇನಹಳ್ಳಿ, ಹೊಸೂರು ಕೊಡಗುಕಾಲೋನಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ನೂರಾರು ಮರ ಗಳು ಧರೆಗುರುಳಿವೆ. ಹಲವಾರು ಮನೆಗಳು ಜಖಂ ಗೊಂಡು, ಸಾಕಷ್ಟು ಬೆಳೆ ನಷ್ಟ ಉಂಟಾಗಿದೆ.

ಉಯಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಕುಡಿನೀರು ಮುದ್ದನಹಳ್ಳಿಯಲ್ಲಿ 27ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದರೆ, 4 ಮನೆಗಳಿಗೆ ಸಿಕ್ಕಾಪಟ್ಟೆ ಹಾನಿ ಸಂಭವಿಸಿದೆ. ಪುಟ್ಟಲಿಂಗಮ್ಮ, ತಿಮ್ಮಶೆಟ್ಟಿ, ಜಾಕೀರ್‌ ಹುಸೇನ್‌, ಅಬ್ಟಾಸ್‌, ಚಾಂದ್‌ಬಾಯ್‌ ಸೇರಿದಂತೆ ಹೆಚ್ಚು ಮನೆಗಳ ಚಾವಣಿ ಹಾರಿಹೋಗಿ ಮನೆಯೊಳಗಿದ್ದ ಆಹಾರ ಪದಾರ್ಥ ಸೇರಿದಂತೆ ಎಲ್ಲವೂ ನೀರು ಮಯ ವಾಗಿದೆ.

ಗ್ರಾಮದ ಕೆ.ಎಸ್‌ ನಾಗಣ್ಣಗೆ ಸೇರಿದ್ದ 3 ಎಕರೆ ಪಪ್ಪಾಯಿ, ಒಂದು ಎಕರೆ ನುಗ್ಗೆ ಬೆಳೆ ಸೇರಿದಂತೆ ಪಪ್ಪಾಯಿ ಬೆಳೆಯೊಳಗೆ ಅಳವಡಿಸಿದ್ದ ಆರು ಜೇನುಸಾಕಣೆ ಪೆಟ್ಟಿಗೆಯು ಹಾನಿಯಾಗಿದ್ದು, ಜೇನುಹುಳುಗಳು ಸಾವನ್ನಪ್ಪಿವೆ. ಚೆನ್ನಮ್ಮರಿಗೆ ಸೇರಿದ ಒಂದು ಎಕರೆ ಬೆಂಡೆ, ಒಂದು ಎಕರೆ ಗೆಣಸು, 15ಕ್ಕೂ ಹೆಚ್ಚು ಅಡಕೆ ಮರ ಉರುಳಿದರೆ, ಚೆಲುವರಾಜುಗೆ ಸೇರಿದ ಒಂದು ಎಕರೆ ಬಾಳೆ ಬಿರುಗಾಳಿಗೆ ನೆಲಕಚ್ಚಿವೆ.

ಅಲ್ಲದೆ ಹಲವರಿಗೆ ಸೇರಿದ 25ಕ್ಕೂ ಹೆಚ್ಚ ತೆಂಗಿನ ಮರಗಳು ಉರುಳಿ ಬಿದ್ದಿವೆ. ರಸ್ತೆ ಬದಿ, ಹೊಲಗಳಲ್ಲಿ ಮರಗಳು ನೆಲಕ್ಕೆ ಉರುಳಿವೆ. ತಂಬಾಕು ಸಸಿಮಡಿ ಕೊಚ್ಚಿ ಹೋಗಿವೆ. ಗ್ರಾಮದ ಐದಾರು ಕಡೆ ಮರಗಳು ವಿದ್ಯುತ್‌ ತಂತಿ ಮೇಲೆ ಬಿದ್ದು ವಿದ್ಯುತ್‌ಕಂಬ ತುಂಡಾಗಿವೆ.

ಕುಡಿನೀರು ಮುದ್ದನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಚರಂಡಿ ನೀರು ನುಗ್ಗಿದೆ. ಅಲ್ಲದೆ ಹೆಂಚುಗಳು ಹಾರಿಹೋಗಿದ್ದು, ದಾಸ್ತಾನು ಮಾಡಿದ್ದ ಆಹಾರ ಪದಾರ್ಥಗಳು, ಪುಸ್ತಕ ಸೇರಿದಂತೆ ಎಲ್ಲ ವಸ್ತುಗಳು ಹಾನಿಯಾಗಿದೆ. ಚೌಡಿಕಟ್ಟೆಯಲ್ಲಿ ರಾಮಶೆಟ್ಟಿಗೆ ಸೇರಿದ 3 ಎಕರೆ ಹಾಗೂ ವೇಣುಗೋಪಾಲ್‌ಶೆಟ್ಟಿಯವರ ಫ‌ಲಕ್ಕೆ ಬಂದಿದ್ದ ಬಾಳೆಬೆಳೆ ಮಳೆಗೆ ನೆಲಕ್ಕೆ ಉರುಳಿದರೆ, ಕಲ್ಪನ ಡ್ಯಾನಿಯವರ ಮನೆ ಚಾವಣಿ ಹಾರಿಹೋಗಿದೆ.

ಟಾಪ್ ನ್ಯೂಸ್

7-munirathna

Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು

6-bandipura

New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ

Bengaluru; Cab driver fell asleep: Passenger drove the vehicle!

Bengaluru; ನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video

ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

INDvAUS; For the first time in history…: Bumrah sets new record with 200 wickets

INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್‌ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ

5-aranthodu

Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ

4-road-mishap

Anandapura: ಬಸ್‌ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-snehamayi

Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

3-hunsur

Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7-munirathna

Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು

6-bandipura

New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ

Bengaluru; Cab driver fell asleep: Passenger drove the vehicle!

Bengaluru; ನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video

ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

Out of syllabus movie review

Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.