ಇಂದಿನಿಂದ ರಾಮಂಜನೇಯಸ್ವಾಮಿ ಜಾತ್ರೆ
Team Udayavani, Jan 16, 2019, 6:58 AM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿರುವ ತಾಲೂಕಿನ ದೊಡ್ಡಹೆಜ್ಜೂರಿನ ಇತಿಹಾಸ ಪ್ರಸಿದ್ಧ ರಾಮಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಬುಧವಾರದಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ. 4 ದಿನಗಳ ಕಾಲ ವಿವಿಧ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಚುಂಚನಕಟ್ಟೆಯ ಶ್ರೀ ರಾಮ ದೇವರ ರಥೋತ್ಸವದಂದೇ ಇಲ್ಲೂ ರಥೋತ್ಸವ ನಡೆಯುವುದು ವಿಶೇಷವಾಗಿದೆ.
ಕಳೆದ 55 ವರ್ಷಗಳಿಂದಲೂ ಅದ್ಧೂರಿಯಾಗಿ ರಥೋತ್ಸವ ನಡೆಸಲಾಗುತ್ತಿದೆ. ಈ ದೇವಾಲಯ ಸುತ್ತಮುತ್ತಲಿನ 16 ಹಳ್ಳಿಗೆ ಸೇರಿದ್ದು, ಜಾತ್ರೆ ನಡೆಸಲು ಭರತವಾಡಿ, ವೀರತಯ್ಯನ ಕೊಪ್ಪಲಿನವರು ದೇವಾಲಯಕ್ಕೆ ಸುಣ್ಣ ಬಣ್ಣ ಬಳಿದರೆ, ಮುದಗನೂರಿನವರು ರಥ ನಿಯಂತ್ರಣಕ್ಕೆ ಮರದ ಗೊದ್ದ ತಯಾರಿಸುತ್ತಾರೆ, ಹಿಂಡಗೂಡ್ಲಿನವರು ರಥ ಎಳೆಯುವ ಹಗ್ಗ ತಂದರೆ, ದಾಸನಪುರದವರು ಹೂವಿನ ಚಪ್ಪರ ಹಾಕುತ್ತಾರೆ.
ದೊಡ್ಡಹೆಜ್ಜೂರಿನವರು ಇತರೆ ಜವಾಬ್ದಾರಿಯನ್ನು ಹೊರುತ್ತಾರೆ. ಹನಗೋಡು, ಕಿರಂಗೂರು, ಹರಳಹಳ್ಳಿ, ಚಿಕ್ಕಹೆಜ್ಜೂರು, ಅಬ್ಬೂರು, ನೇಗತ್ತೂರು, ಕೋಣನ ಹೊಸಹಳ್ಳಿ ಸೇರಿದಂತೆ ಹತ್ತಾರು ಗ್ರಾಮದವರು ಜಾತ್ರೆಗೆ ಸಹಕಾರ ನೀಡುತ್ತಾರೆ. ಈಗಾಗಲೇ ಜಾತ್ರೆ ಮಾಳದಲ್ಲಿ ಸಿಹಿತಿಂಡಿ ಅಂಗಡಿಗಳ ಮಾಲಿಕರು ತಿಂಡಿ ತಯಾರಿಸುಲ್ಲಿ ನಿರತರಾಗಿದ್ದಾರೆ.
ಜಾತ್ರೆ ಮಾಳದಲ್ಲಿ ತಾತ್ಕಲಿಕ ಆರೋಗ್ಯ ಕೇಂದ್ರ ತೆರೆಯಲಾಗುವುದು. ಜಾತ್ರೆಗೆ ಬರುವ ಭಕ್ತರು ಅಶುದ್ಧ ನೀರು ಸೇವಿಸಬಾರದೆಂದು ಗ್ರಾಮ ಪಂಚಾಯ್ತಿ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ದೊಡ್ಡಹೆಜ್ಜೂರು ಗ್ರಾಪಂ ಅಧ್ಯಕ್ಷೆ ಮಹದೇವಿ ತಿಳಿಸಿದ್ದಾರೆ.
ಜಾತ್ರಾ ವಿವರ: ಬುಧವಾರ ಬೆಳಗ್ಗೆ ವಿಶೇಷ ಪೂಜೆ ಹಾಗೂ 11.30 ರಿಂದ 12.30 ಗಂಟೆಯೊಳಗೆೆ ರಥೋತ್ಸವ, ಜ.17ರ ಗುರುವಾರ ವಿಶೇಷ ಪೂಜೆ, ಸಂಜೆ 7.30 ಗಂಟೆಗೆ ಗರುಡೋತ್ಸವ ಮತ್ತು ಪಂಜಿನ ಮೆರವಣಿಗೆ, ಪಾರುಪಟೆ ಉತ್ಸವ, ಶುಕ್ರವಾರ ವಿಶೇಷ ಪೂಜೆ ಹಾಗೂ ಸಂಜೆ 7.30 ಗಂಟೆಗೆ ಲಕ್ಷ್ಮಣ ತೀರ್ಥ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ಆಂಜನೇಯ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಮೆಡಿಕಲ್ ಧರಣೇಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.