ರಾಮಮಂದಿರ ಕಟ್ಟುವವರು ರಾಮಾಯಣ ಅರಿಯಲಿ


Team Udayavani, Sep 27, 2017, 1:01 PM IST

myss1.jpg

ಮೈಸೂರು: ರಾಮಾಯಣದಲ್ಲಿ ಎಲ್ಲಿಯೂ ವಾಲ್ಮೀಕಿ, ರಾಮನನ್ನು ದೇವರೆಂದು ಹೇಳಿಲ್ಲ. ರಾಮಮಂದಿರ ಕಟ್ಟಬೇಕು ಎಂದು ಹೊರಟಿರುವವರು ವಾಲ್ಮೀಕಿ ರಾಮಾಯಣ ಅರಿಯಬೇಕು ಎಂದು ವಿಚಾರವಾದಿ ಪೊ›.ಕೆ.ಎಸ್‌.ಭಗವಾನ್‌ ಹೇಳಿದರು. ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ದಸರಾ ಕವಿಗೋಷ್ಠಿ ಉಪ ಸಮಿತಿ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿರುವ ಕವಿಗೋಷ್ಠಿ ಅಂಗವಾಗಿ ನಡೆದ ವಿಶಿಷ್ಟ ಕವಿಗೋಷ್ಠಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲ್ಪನೆ: ರಾಮಾಯಣದಲ್ಲಿ ಎಲ್ಲಿಯೂ ವಾಲ್ಮೀಕಿ, ರಾಮನನ್ನು ದೇವರೆಂದು ಹೇಳಿಲ್ಲ. ತನ್ನ ಭಾವನೆ, ಕಲ್ಪನೆಗಳನ್ನು 25 ಸಾವಿರ ಶ್ಲೋಕಗಳಲ್ಲಿ ಹೇಳಿರುವ ವಾಲ್ಮೀಕಿ, ರಾಮನನ್ನು ಚಾರ್ತುವರ್ಣದ ರಕ್ಷಕ ಎಂದು ಕರೆದಿದ್ದಾನೆ. ಮನುಷ್ಯ ಜನ್ಮ ಇರುವುದೇ 100 ವರ್ಷ ಹೀಗಾಗಿ 11 ಸಾವಿರ ವರ್ಷ ರಾಮ ರಾಜ್ಯಭಾರ ಮಾಡಿದ ಎಂಬುದು ಸರಿಯಲ್ಲ. ಅದನ್ನು 11 ವರ್ಷಗಳ ಕಾಲ ಆಳಿದ ಎಂದು ಕೊಳ್ಳಬೇಕು ಎಂದರು.

ಗುಂಡಿಡಲಾಗದು: ಸಾಹಿತಿ ಕೆ.ನೀಲಾ ಮಾತನಾಡಿ, ಕಾವ್ಯಕ್ಕೆ ಸಾವಿಲ್ಲ. ಹಣೆಗೆ ಗುಂಡಿಡಬಹುದು, ಆದರೆ, ನುಡಿಗೆ ಗುಂಡಿಡಲಾಗದು ಎಂದರು. ರಾಜ-ಮಹಾರಾಜರ ಚರಿತ್ರೆಯನ್ನು ಓದಿದ್ದೇವೆ, ಆದರೆ ಮಹಲು ಕಟ್ಟಿದವನ, ರಸ್ತೆ ಮಾಡಿದವನ ಚರಿತ್ರೆ ಯಾರಿಗೂ ಗೊತ್ತಿಲ್ಲ. ಹೀಗಾಗಿ ಜನರಿಗೆ ಮನ್‌ ಕೀ ಬಾತ್‌ ಬೇಕಾಗಿಲ್ಲ. ಹೃದಯದ ಮಾತು ಬೇಕಾಗಿದೆ. ಜಯಮಾಲ ವರದಿಯ ಶಿಫಾರಸುಗಳನ್ನು ಸರ್ಕಾರ ಶೀಘ್ರ ಜಾರಿಮಾಡಲಿ ಎಂದು ಒತ್ತಾಯಿಸಿದರು.

ಅರಿವು: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಮಾತನಾಡಿ, ರಾಮನಿದ್ದಾಗ ರಾವಣನೂ ಇದ್ದ, ಕೌರವರಿದ್ದಾಗ ಪಾಂಡವರೂ ಇದ್ದರು, ಹಾಗೆಯೇ ಸರಿ-ತಪ್ಪು$, ಕಪ್ಪು$-ಬಿಳುಪು, ನ್ಯಾಯ-ಅನ್ಯಾಯ ಜತೆ ಜತೆಗೆ ಇದ್ದೇ ಇರುತ್ತವೆ ಅರಿತು ನಡೆಯಬೇಕು ಎಂದರು.

ಹೊಸ ಪದ್ಧತಿ: ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್‌ ಸದಸ್ಯೆ ಡಾ.ಜಯಮಾಲ ಮಾತನಾಡಿ, ಆಧುನೀಕರಣ, ನಗರೀಕರಣದ ಪರಿಣಾಮಗಳನ್ನು ಯಾರೂ ಊಹಿಸಲಾರದಂತಾಗಿದೆ. ಹಿಂದೆ ದೇವದಾಸಿ ಪದ್ಧತಿ ಇದ್ದರೂ ಅದಕ್ಕೊಂದು ಗೌರವ ಇತ್ತು. ನಗರೀಕರಣ ಹೊಸ ರೀತಿಯ ದೇವದಾಸಿ ಪದ್ಧತಿಯನ್ನು ಹುಟ್ಟುಹಾಕಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಯುಪಿಎಸ್‌ಸಿ ರ್‍ಯಾಂಕ್‌ ವಿಜೇತ ಕೆಂಪ ಹೊನ್ನಯ್ಯ ಕವಿಗೋಷ್ಠಿ ಉದ್ಘಾಟಿಸಿದರು. ದಸರಾ ವಿಶೇಷಾಧಿಕಾರಿ ಡಿ. ರಂದೀಪ್‌, ಉಪ ವಿಶೇಷಾಧಿಕಾರಿ ಡಾ.ಬಿ.ಕೆ.ಎಸ್‌.ವರ್ಧನ್‌, ಸಮಿತಿ ಉಪಾಧ್ಯಕ್ಷರಾದ ರತ್ನ ಅರಸ್‌, ಕಾರ್ಯಾಧ್ಯಕ್ಷೆ ಡಾ.ಎನ್‌.ಕೆ.ಲೋಲಾಕ್ಷಿ, ಕಾರ್ಯದರ್ಶಿ ಮಂಜುನಾಥ್‌ ಇತರರಿದ್ದರು.

ಕವನ ವಾಚನ: ಶಕ್ತಿಧಾನ, ಒಡನಾಡಿ, ಆಶೋದಯ, ಆರ್‌ಎಲ್‌ಎಚ್‌ಪಿಯ ವತಿಯಿಂದ ಬಂದಿದ್ದ ಪ್ರತಿನಿಧಿಗಳು ಕವನ ವಾಚನ ಮಾಡಿದರು. ಸರ್ಕಾರಿ ಅಂಧ ಮತ್ತು ಕಿವುಡರ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಯೇಸು, ಅಪ್ಪ-ಅಮ್ಮ ಕವನವನ್ನು ಮೂಕಾಭಿನಯದ ಮೂಲಕ ತೋರ್ಪಡಿಸಿದರೆ, ಅದೇ ಶಾಲೆಯ ಶರಶ್ಚಂದ್ರನ ಅನಂತ ನಗು ಕವನದ ಮೂಕಾಭಿನಯ ವಿಶೇಷವಾಗಿತ್ತು. ಶಕ್ತಿಧಾಮದ ವಯೋವೃದ್ಧೆ ಇಂದಿರಮ್ಮ ಅವರ ಅಮ್ಮ ಎನ್ನುವ ಶಬ್ದ ಎಷ್ಟು ಚೆನ್ನ ಕವನ ವಾಚನ ಗಮನಸೆಳೆಯಿತು.

ಟಾಪ್ ನ್ಯೂಸ್

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.