ಜೆಡಿಎಸ್ ಬಿಜೆಪಿ ಪಕ್ಷದ ಬಿ ಟೀಮ್
Team Udayavani, Feb 22, 2023, 3:06 PM IST
ಮೈಸೂರು: ಜೆಡಿಎಸ್‌ನ ಮುಖವಾಡ ಕಳಚಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಮುಖ ಕಾಣ ಲಿದೆ. ಹಾಗಾಗಿ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಮ್ ಆಗಿದೆ. ಇದನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ 200 ಯುನಿಟ್ ವಿದ್ಯುತ್ ಉಚಿತ ಹಾಗೂ ಪ್ರತಿ ಮನೆಯ ಮಹಿಳೆಗೆ 2 ಸಾವಿರ ರೂ. ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ಧಾಳಿ ನಡೆಸಿದರು.
ದೇಶದಲ್ಲಿ ಇಂದು ಕರ್ನಾಟಕ ರಾಜ್ಯ ಶೇ.40ರಷ್ಟು ಕಮಿಷನ್‌ಗೆ ಹೆಸರುವಾಸಿಯಾಗಿದೆ. ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಬೇರೆ ರಾಜ್ಯಗಳಿಗೆ ತೆರಳಿದರೆ ಅಲ್ಲಿ ಶೇ.40ರಷ್ಟು ಕಮಿಷನ್ ಸರ್ಕಾರ ಎಂದು ಸ್ವಾಗತಿಸಲಾಗುತ್ತಿದೆ. ಜತೆಗೆ ಪೇ ಸಿಎಂ ಎಂದು ಹೇಳಲಾಗುತ್ತಿದೆ. ಹೀಗಿದ್ದರೂ ರಾಜ್ಯಕ್ಕೆ 8 ಬಾರಿ ಪ್ರಧಾನಿ ಮೋದಿ ಆಗಮಿಸಿದಾಗ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತ ನಾಡಿಲ್ಲ. ನಾನು ತಿನ್ನುವುದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ ಎಂದು ಹೇಳುವ ಮೊದಿಯವರು, ಕರ್ನಾಟಕದಲ್ಲಿ ಅವರದ್ದೇ ಸರ್ಕಾರ ಭ್ರಷ್ಟಾಚಾರ ನಡೆಸು ತ್ತಿದ್ದರೂ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಜೆಡಿಎಸ್ ಬಿಜೆಪಿಯ ಬಿ ಟೀಂ: ರಾಜ್ಯದಲ್ಲಿ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಪ್ರಬಲ ಹೋರಾಟ ಮಾಡಿತು. ಆದರೆ ಜೆಡಿಸ್ ಸ್ವಲ್ಪವೂ ವಿರೋಧ ಮಾಡಲಿಲ್ಲ. ಈ ಮೂಲಕ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಜೆಡಿಎಸ್ ಮಾಡಿದೆ. ಮತಾಂತರ ನಿಷೇಧ ಕಾಯಿದೆ ಜಾರಿ ವೇಳೆ ಸದನದಲ್ಲಿ ಧ್ವನಿ ಎತ್ತಲಿಲ್ಲ. ಮೈಸೂರಿನ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್‌ನ ಪರೋಕ್ಷ ಹೊಂದಾಣಿಕೆಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಷ್ಟ್ರಪತಿ ಚುನಾವಣೆ ವೇಳೆ ಬಿಜೆಪಿಯೇ ಒಂದಾದರೆ ಉಳಿದೆಲ್ಲ ಪಕ್ಷಗಳು ಒಂದಾಗಿದ್ದವರು. ಆದರೆ ಜೆಡಿಎಸ್ ಬಿಜೆಪಿಗೆ ಸಹಕಾರ ನೀಡಿತು. ಉಪ ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಮಾರ್ಗರೇಟ್ ಆಳ್ವಾರವರ ವಿರುದ್ಧ ವಾಗಿ ಜೆಡಿಎಸ್ ನವರು ಮತ ಚಲಾಯಿಸುವ ಮೂಲಕ ತಾನು ಅಲ್ಪ ಸಂಖ್ಯಾತರ ವಿರೋಧಿ ಎಂಬುದನ್ನು ಸಬೀತು ಪಡಿಸಿದೆ ಎಂದು ಜೆಡಿಎಸ್ ವಿರುದ್ಧ ಕಿಡಿಕಾರಿದರು.
ಮೋದಿ ಮುಖವಾಡವನ್ನು ಜೆಡಿಎಸ್ ಹೊಂದಿದೆ. ಚುನಾವಣೆ ಸಂದರ್ಭ ಅಲ್ಪಸಂಖ್ಯಾತರು, ಎಸ್ಸಿ, ಎಸ್ಟಿ, ಒಬಿಸಿ ಬಗ್ಗೆ ಮಾತನಾಡಿ, ಚುನಾವಣೆ ಬಳಿಕ ಮೋದಿ ಬೇಕು ಎಂದು ಹೇಳುತ್ತಾರೆ. ಜೆಡಿಎಸ್‌ನ ಇಬ್ಬಂದಿ ನಿಲುವನ್ನು ಮತದಾರರು ಅರ್ಥ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಜೊತೆ ನಿಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕ ತನ್ವೀರ್ ಸೇಠ್, ಶಾಸಕ ಯತೀಂದ್ರ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿ ರೋಸಿ ಜಾನ್, ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹಮದ್, ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಶಾಸಕ ವಾಸು, ಮುಖಂಡರಾದ ಸೂರಜ್ ಹೆಗಡೆ, ಸುಜೀಂದ್ರ , ಚಂದ್ರಮೌಳಿ, ಲಕ್ಷ್ಮಣ್, ರಾಮಪ್ಪ, ಮಂಜುಳಾ ರಾಜ್, ರವಿಶಂಕರ್, ಮರಿಗೌಡ, ಎಚ್.ಎ. ವೆಂಕಟೇಶ್ ಸೇರಿದಂತೆ ಅನೇಕರು ಇದ್ದರು.
ಅಶ್ವತ್ಥನಾರಾಯಣ್ ಹೇಳಿರುವುದು ಮೋದಿ, ಶಾ ಮಾತು : ಸಚಿವ ಅಶ್ವತ್ಥ ನಾರಾಯಣ್ ಮಂಡ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಹೊಡೆದುಹಾಕಬೇಕು ಎಂದು ಮಾತನಾಡಿದ್ದಾರೆ. ಇದು ಅಶ್ವತ್ಥ ನಾರಾಯಣ್ ಹೇಳುತ್ತಿರುವುದಲ್ಲ, ಇದು ಮೋದಿ, ಅಮಿತ್ ಷಾ, ಬೊಮ್ಮಾಯಿ ಅವರ ಮಾತುಗಳು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ರಾಜ್ಯದ ಬಡಜನರ ಅಭಿವೃದ್ಧಿಗೆ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್‌ಗಳನ್ನು ಸಿದ್ದರಾಮಯ್ಯ, ಮತ್ತು ಡಿಕೆಶಿ ಅವರ ಸಹಿಯೊಂದಿಗೆ ನೀಡಲಾಗುತ್ತಿದೆ. ಇದು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಈ ಗ್ಯಾರೆಂಟಿ ಕಾರ್ಡನ್ನು ರಾಜ್ಯದ ಪ್ರತಿಯೊಂದು ಮನೆಗೂ ಕಾಂಗ್ರೆಸ್ ಪಕ್ಷ ತಲುಪಿಸಲಿದೆ ಎಂದರು.
ಉಚಿತ ವಿದ್ಯುತ್, ಪ್ರತಿ ಮನೆಯ ಮಹಿಳೆಗೆ 2 ಸಾವಿರ ಕೋಡುವ ಕಾಂಗ್ರೆಸ್ ಹಣವನ್ನು ಎಲ್ಲಿಂದ ತರಲಿದೆ ಎಂದು ಬಿಜೆಪಿ ಕೇಳುತ್ತಿದೆ. ಈಗಿನ ಸರ್ಕಾರ ಶೇ.40ರಷ್ಟು ಕಮಿಷನ್ ಪಡೆದು ಜನರ ಹಣ ಲೂಟಿ ಮಾಡು ತ್ತಿದೆ. ನಮ್ಮ ಸರ್ಕಾರ ಬಂದಾಗ ಕಮಿಷನ್ ಪಡೆಯುವುದಿಲ್ಲ. ಆ ಹಣವನ್ನು ಈ ಯೋಜನೆಗೆ ವಿನಿಯೋಗಿಸಲಿದೆ. – ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.