ಬೋಸ್ ಚರಿತ್ರೆಯನ್ನೇ ನೆಹರು ಮಬ್ಬು ಮಾಡಿದರು
ಸುಭಾಷ್ ಚಂದ್ರಬೋಸ್ ದೇಶದ ಮೊದಲ ಪ್ರಧಾನಿಯಾಗಬೇಕಿತ್ತು: ಕಾರ್ಯಪ್ಪ
Team Udayavani, Feb 8, 2021, 3:58 PM IST
ಮೈಸೂರು: ಸುಭಾಷ್ ಚಂದ್ರಬೋಸ್ ದೇಶದ ಮೊದಲ ಪ್ರಧಾನಿಯಾಗಬೇಕಿತ್ತು. ಅವರನ್ನು ಪ್ರಧಾನಿ ಎಂದು ದೇಶವೇ ಒಪ್ಪಿತ್ತು. ಆದರೆ, ನೆಹರು ಜಾಣತನದಿಂದ ಅಧಿಕಾರ ಹಿಡಿದು ಬೋಸ್ ಅವರ ಚರಿತ್ರೆಯನ್ನೇ ಮಬ್ಬು ಮಾಡಿದರು ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.
ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ, ಶ್ರೀ ತಲಕಾವೇರಿ ಮಹಿಳಾ ಶಿಕ್ಷಣ ಟ್ರÓr…, ಅಖೀಲ ಕರ್ನಾಟಕ ಶಿವಶರಣ ಮಾದಾರ ಚನ್ನಯ್ಯ ವಿಚಾರ ವೇದಿಕೆ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸ್ಯಾಂಡಲ್‌ವುಡ್ ಸೆಲಬ್ರಿಟೀಸ್ ಮತ್ತು ಭೂಮಿಕಾ ಭಾವೈಕ್ಯ ಬಳಗದ ಸಹಯೋಗದಲ್ಲಿ ಭಾನುವಾರ ಸಂಜೆ ಚಾಮುಂಡಿಪುರಂನ ಆರಾಧ್ಯ ಭವನದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಫಿಲ್ಡ ಮಾರ್ಷಲ್ ಕಾರ್ಯಪ್ಪ ಅವರ ಸ್ಮರಣೆ, ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ನೆಹರು ಮತ್ತು ಗಾಂಧೀಜಿಗೆ ಸೈನ್ಯದ ಬಗ್ಗೆ ಒಲವು ಇರಲಿಲ್ಲ. ಗಾಂಧೀಜಿ ಅವರು ಅಹಿಂಸಾ ತತ್ವದಲ್ಲಿ ನಂಬಿಕೆವುಳ್ಳವರಾಗಿದ್ದ ಕಾರಣ ಅವರಿಗೆ ಸೈನ್ಯದ ಬಗ್ಗೆ ಆಸಕ್ತಿ ಇರಲಿಲ್ಲ. ದೇಶ ವಿಭಜನೆಯಾಗಲು ಕಾರಣವೇ ನೆಹರು ಮತ್ತು ಜಿನ್ನಾ. ಇವರು ತಮ್ಮ ಅಧಿಕಾರದ ಆಸೆಗಾಗಿ ದೇಶ ವಿಭಜನೆಗೆ ಮುಂದಾದರು.
ಈ ಸಂದರ್ಭದಲ್ಲಿ ಎಲ್ಲಾ ಧರ್ಮ, ಜಾತಿಯ ಸೇನಾನಿಗಳು ಇರುವ ಸೈನ್ಯವನ್ನು ವಿಭಜಿಸಬೇಕಾದ ಕೆಲಸ ಫಿಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪಾಲಿಗೆ ಬಂತು. ಈ ವೇಳೆ ಅವರು ತುಂಬಾ ನೊಂದುಕೊಂಡರು ಎಂದು ತಿಳಿಸಿದರು.
ಸ್ವಾತಂತ್ರ್ಯ ನಂತರವೂ ಭಾರತೀಯ ಸೈನ್ಯದ ಕಮಾಂಡರ್ ಇನ್ ಚೀಫ್ ಬ್ರಿಟಿಷ್ ವ್ಯಕ್ತಿಯೇ ಆಗಿದ್ದರು. 1949ರಲ್ಲಿ ಈ ಹುದ್ದೆಯನ್ನು ಕಾರ್ಯಪ್ಪ ಅವರಿಗೆ ನೀಡಬೇಕು ಎಂಬ ಬೇಡಿಕೆ ಬಂದಾಗ ನೆಹರು ಅವರು, ಬೇಡ ಸೈನ್ಯವನ್ನು ನಿರ್ವಹಣೆ ಮಾಡುವ ತಾಕತ್ತು ಇನ್ನೂ ನಮ್ಮ ಮಿಲಿಟರಿಯಲ್ಲಿ ಇರುವವರಿಗೆ ಬಂದಿಲ್ಲ. ಹಾಗಾಗಿ, ಈಗ ಇರುವವರೇ ಇನ್ನೆರಡು ವರ್ಷ ಮುಂದುವರಿಯಲಿ ಎನ್ನುತ್ತಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಕಾರ್ಯಪ್ಪ, ನಮ್ಮ ದೇಶವನ್ನು ಆಳುವಷ್ಟು ತಾಕತ್ತು ನಮ್ಮ ದೇಶದ ನಾಯಕರಿಗೆ ಇನ್ನು ಬಂದಿಲ್ಲ. ಹಾಗಾಗಿ, ಇನ್ನೂ ಎರಡು ವರ್ಷ ಬ್ರಿಟಿಷರೇ ಆಳಲಿ ಎಂದರಂತೆ ಎಂದು ತಿಳಿಸಿದರು.
ಕಾರ್ಯಪ್ಪ ಅವರು ತಮ್ಮ ಬೆಳವಣಿಗೆಯ ಪ್ರತಿ ಹಂತದಲ್ಲೂ ಸಮಯ ಪ್ರಜ್ಞೆ, ಶಿಸ್ತನ್ನು ಬಿಡಲಿಲ್ಲ. ರಾಜಕಾರಣಿಗಳು ಸೈನ್ಯವನ್ನು ಅಲಕ್ಷ್ಯ ಮಾಡಿದ ಸಂದರ್ಭದಲ್ಲಿ, ಸೈನ್ಯ ಎಂಬುದು ಕೇವಲ ಗಡಿ ವಿಷಯಕ್ಕೆ ಮಾತ್ರ ಸೀಮಿತವಲ್ಲ. ದೇಶದಲ್ಲಿ ಸಂಭವಿಸುವ ದುರಂತ ಮತ್ತು ಅನಾಹುತಗಳಿಗೂ ನೆರವಾಗುವುದು. ಅಹಿಂಸಾ ತತ್ವದಿಂದ ದೇಶ ಮತ್ತು ಜನರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದವರು ಎಂದು ಕಾರ್ಯಪ್ಪರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಪಡೆ ಯೋಧ ನಾಯಕ್ ಅಜ್ಜಮಾಡ ತಿಮ್ಮಯ್ಯ, ನಿವೃತ್ತ ನಾಯಕ್ ಸುಬೇದಾರ್ ಎಚ್.ಎಸ್.ಶಿವಕುಮಾರ್, ಪ್ರಾಧ್ಯಾಪಕ ಶಿವರುದ್ರಯ್ಯ, ಪರಿಸರ ಮತ್ತು ಪ್ರಾಣಿ ತಜ್ಞ ಡಾ.ಜಿ.ಕೆ.ಅಜಯಕುಮಾರ್ ಜೈನ್, ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಸ್.ಜಯಕುಮಾರ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಅಪ್ಪನೆರವಂಡ ಡಾ.ಎ.ಸೋನಿಯ ಮಂದಪ್ಪ, ಡಾ.ರತ್ನಮ್ಮ ಅವರಿಗೆ ನಾಗರಿಕ ಸೇವಾ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ :ಹುಣಸಘಟ್ಟ ಗ್ರಾಪಂನಲ್ಲಿ ಬಿಜೆಪಿ ಅಧಿಕಾರಕ್ಕೆ : ರೇಣು
ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ ಮತ್ತು ಭೂಮಿಕಾ ಭಾವೈಕ್ಯ ಬಳಗದ ನೂತನ ಪದಾಧಿಕಾರಿ ಗಳ ಅಧಿಕಾರ ಪದಗ್ರಹಣ ನೆರವೇರಿತು. ದೀಪಿಕಾ ಕಿಶೋರ್ ಮತ್ತು ಸಂಜನಾರಾವ್ ಅವರ ತಂಡ ಭರತನಾಟ್ಯ ಹಾಗೂ ರಜನಿಸುಬ್ಬಯ್ಯ ಅವರ ತಂಡ ಕೊಡವ ನೃತ್ಯ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಬಸವಜ್ಞಾನ ಮಂದಿರ ಶ್ರೀ ಡಾ. ಮಾತೆ ಬಸವಾಂಜಲಿ, ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದಜಿ ಮಹಾರಾಜ್,ನಾಗಭೂಷಣಾರಾಧ್ಯ,ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್, ಡಾ. ಎಸ್.ಈ.ಮಹದೇವಪ್ಪ,ಲಯನ್ ಡಾ.ಎಸ್. ವೆಂಕಟೇಶ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.