ಪ್ರಪಂಚ ಅರ್ಥ ಮಾಡಿಕೊಳ್ಳಲು ಪುಸ್ತಕ ಓದಿ
Team Udayavani, Nov 13, 2017, 1:19 PM IST
ಮೈಸೂರು: ಭಾಷೆಯ ಬೆಳವಣಿಗೆ ಜತೆಗೆ ಸಮಾಜ ಮತ್ತು ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಪುಸ್ತಕ ಓದುವಿಕೆ ಮುಖ್ಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ಹೇಳಿದರು.
ಅರಸು ಜಾಗೃತಿ ಅಕಾಡೆಮಿ ಅರಸು ಪತ್ರಿಕೆಯ ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್.ಜಯರಾಮರಾಜೇ ಅರಸ್ ಅವರ ಅನುವಾದಿತ ಕೃತಿ “ಪ್ರಪಾತ’ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಟಿವಿ, ಅಂರ್ತಜಾಲ ಸೇರಿದಂತೆ ಎಷ್ಟೇ ಬೇರೆ ಮಾಧ್ಯಮಗಳು ಬಂದಿದ್ದರೂ ಪುಸ್ತಕ ಮಾಧ್ಯಮವನ್ನು ಮುಚ್ಚಿಡಲು ಆಗಲ್ಲ. ಪುಸ್ತಕ ಓದುವ ಅಭಿರುಚಿಯೇ ಬೇರೆ ಎಂದರು. ವಿದ್ಯಾರ್ಥಿಗಳು ಪರೀಕ್ಷೆಗಷ್ಟೇ ತಮ್ಮ ಜಾnನವನ್ನು ಸೀಮಿತಗೊಳಿಸಿಕೊಳ್ಳದೆ, ಪಠ್ಯಪುಸ್ತಕಗಳ ಜತೆಗೆ ಇತರೆ ಪುಸ್ತಕಗಳನ್ನೂ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಅಂಕಗಳಿಸಿದವರಷ್ಟೇ ಬುದ್ಧಿವಂತರು ಎಂಬುದು ಸರಿಯಲ್ಲ, ಪರೀಕ್ಷೆಗಳಲ್ಲಿ ಸರಿಯಾದ ಅಂಕಗಳಿಸದವರು ಓದಿನಲ್ಲಿ ಮುಂದಿದ್ದ ಉದಾಹರಣೆಗಳು ಸಾಕಷ್ಟಿವೆ ಎಂದು ಹೇಳಿದರು. ತರ್ಜುಮೆಯಿಂದ ಅನೇಕ ಲೇಖಕರು ಹಾಗೂ ಅನೇಕ ಸಮಾಜದ ಪರಿಚಯವಾಗುತ್ತದೆ. ಜಯರಾಮರಾಜೇ ಅರಸು ಅವರು ಅರುಣ್ ಜೋಶಿಯವರ ಕಣ್ಣಮುಂದಿನ ಚಿತ್ರಣವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದರು.
ಕೃತಿಕಾರ ಜಯರಾಮರಾಜೇ ಅರಸ್, ನಿವೃತ್ತಿ ನಂತರ ಕಳೆದ 9-10 ವರ್ಷಗಳಿಂದ ಭಾಷಾಂತರ ಮಾಡುತ್ತಿದ್ದೇನೆ. ಈವರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಗೆ ನನ್ನ ಪುಸ್ತಕ ತಲುಪಿಸಲಾಗಿಲ್ಲ. ಅಕಾಡೆಮಿ ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿದ್ದರೂ ಅದೊಂದು ರೀತಿ ದುರ್ಗದ ಕೋಟೆ ಇದ್ದಂತೆ ಹೊಸಬರು ಒಳ ಹೋಗಲಾಗಲ್ಲ, ಅಲ್ಲಿ ಒಳ ಹೊಕ್ಕವರೇ ಹಲವರು ಹೊಸಬರಿಗೆ ಅವಕಾಶ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಸಮಾಜಶಾಸ್ತ್ರ ವಿಭಾಗದ ಪೊ›.ವೈ.ಎಸ್.ಸಿದ್ದೇಗೌಡ ಕೃತಿ ಲೋಕಾರ್ಪಣೆ ಮಾಡಿದರು. ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಸತೀಶ್, ಸಂಧ್ಯಾ ಸುರûಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ನಟರಾಜ ಜೋಯಿಸ್, ದಾಸ್ತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ, ಅರಸು ಜಾಗೃತಿ ಅಕಾಡೆಮಿ ಗೌರವಾಧ್ಯಕ್ಷ ಡಾ.ಎಂ.ಜಿ.ಆರ್.ಅರಸ್ ಮತ್ತಿತರರಿದ್ದರು.
ಪ್ರಶಸ್ತಿ ಪ್ರದಾನ: ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಆರು ಮಂದಿ ಸಾಧಕರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಾನೇನೂ ಬರಹಗಾರನಲ್ಲ: ನಾನೇನೂ ಬರಹಗಾರನಲ್ಲ. ಕಾಲೇಜು ದಿನಗಳಲ್ಲಿ ಕಾದಂಬರಿಗಳನ್ನು ಸ್ಪರ್ಧೆಗೆ ಬಿದ್ದು ಓದುತ್ತಿದ್ದೆ. ಆದರೆ, ನಂತರದ ದಿನಗಳಲ್ಲಿ ಕೆಲಸದ ಒತ್ತಡದಿಂದ ಆಸಕ್ತಿ ಕಡಿಮೆಯಾಗಿ ಕಾದಂಬರಿಗಳನ್ನು ಓದುವುದನ್ನೇ ಬಿಟ್ಟುಬಿಟ್ಟಿದ್ದೆ.
ಜಯರಾಮರಾಜೇ ಅರಸ್ ಅವರ ಒತ್ತಡಕ್ಕೆ ಮಣಿದು ಅವರ “ಪ್ರಪಾತ’ ಕೃತಿ ಓದಿದ್ದೇನೆ, ಅರುಣ್‌ಜೋಶಿಯಂತಹ ಇಂಗ್ಲಿಷ್‌ನ ಮೂಲ ಕೃತಿಕಾರರಿಗೆ ಅನ್ಯಾಯ ಮಾಡದಂತೆ, ಅರ್ಥ ಕೆಡದಂತೆ ಅನುವಾದ ಮಾಡಿದ್ದಾರೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.