ರಾಜಗೋಪುರ ಕುಂಭಾಭಿಷೇಕ ಮಹೋತ್ಸವ ಸಿದ್ಧತೆ
Team Udayavani, Feb 20, 2018, 12:15 PM IST
ಬನ್ನೂರು: ಇತಿಹಾಸ ಪ್ರಸಿದ್ಧ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದ ರಾಜಗೋಪುರ ಕುಂಭಾಭಿಷೇಕ ಮಹೋತ್ಸವಕ್ಕೆ ಬರದಿಂದ ಸಿದ್ಧತೆ ನಡೆದಿದೆ. ಬುಧವಾರದಿಂದ ಪ್ರಾರಂಭವಾಗಿ 25ನೇ ಭಾನುವಾರದ ವರೆಗೂ ನಡೆಯುವಂತ ದೇವತಾ ಕಾರ್ಯದಲ್ಲಿ,
ಪ್ರತಿನಿತ್ಯ ದೇವತಾ ಪ್ರಾರ್ಥನೆ ಜೊತೆಗೆ ಪ್ರತಿ ದಿನವು ಸೂರ್ಯ ನಮಸ್ಕಾರ, ನವಗ್ರಹ ಜಪ, ವೇದಪಾರಾಯಣ, ದಿವ್ಯಪ್ರಬಂಧ ಪಾರಾಯಣಗಳು ಹೋಮಹವನಗಳು ನಡೆಯಲಿದ್ದು,ಕೋದಂಡರಾಮಸ್ವಾಮಿ ಸಮೇತ ನೂತನ ರಾಜಗೋಪುರ ಮಹಾಗಣಪತಿ ಮಹಾ ಸಂಪ್ರೋಕ್ಷಣೆ, ಅಷ್ಟಬಂಧನ, ಕುಂಭಾಭಿಷೇಕ ನಡೆಯಲಿದೆ.
24ನೇ ಶನಿವಾರ ಬೆಳಗ್ಗೆ 10ಗಂಟೆಗೆ ಶ್ರೀ ಯದುಗಿರಿ ಯತಿರಾಜ ಜೀ ಅವರಿಂದ ರಾಜಗೋಪುರದ ಕುಂಭಾಭಿಷೇಕ ಮತ್ತು ದೇವಸ್ಥಾನದ ಆವರಣದಲ್ಲಿ ಶ್ರೀ ರಾಮಾನುಜ ಚಾರ್ಯರ ಸಭಾ ಮಂದಿರದ ಉದ್ಘಾಟನೆ ನಡೆಯಲಿದೆ ಎಂದು ಮೇಲ್ವಿಚಾರಕ ಪ್ರಧಾನ ಅರ್ಚಕರಾದ ಕೃಷ್ಣಸ್ವಾಮಿ ತಿಳಿಸಿದ್ದಾರೆ.
25ನೇ ಭಾನುವಾರದಂದು ಮಂಗಳವಾದ್ಯ, ಯಾಗಶಾಲ ಪ್ರವೇಶ, ದೇವತಾ ಪ್ರಾರ್ಥನೆ, ಗೋಪುರ ಪುಷ್ಪವೃಷ್ಠಿ, ಆಶೀರ್ವಾದ, ಫಲಮಂತ್ರಾಕ್ಷತೆ ನಡೆಯಲಿದ್ದು, ಸಂಜೆ 6ಗಂಟೆಗೆ ಶಾಂತಿ ಕಲ್ಯಾಣೋತ್ಸವ ನಡೆಯಲಿದೆ ಎಂದು ತಿಳಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಕೋದಂಡರಾಮಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.