ಮೃಗಾಲಯಕ್ಕೆ ದಾಖಲೆ ಆದಾಯ
Team Udayavani, Oct 27, 2018, 11:34 AM IST
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ಮೈಸೂರು ಮೃಗಾಲಯಕ್ಕೆ ಬರೋಬ್ಬರಿ 1.53 ಲಕ್ಷ ಜನರು ಭೇಟಿ ನೀಡಿದ್ದು, ಇದರಿಂದ ಮೃಗಾಲಯಕ್ಕೆ ದಾಖಲೆಯ 1.5 ಕೋಟಿ ಆದಾಯ ಬಂದಿದೆ.
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಸರಾಸರಿ 35ಲಕ್ಷ ರೂ. ಹೆಚ್ಚು ಆದಾಯ ಬಂದಿದೆ. ಆಯುಧಪೂಜೆ ದಿನ 17.74 ಲಕ್ಷ ರೂ., ವಿಜಯ ದಶಮಿ ದಿನ 32,301ಜನ ಭೇಟಿ ನೀಡಿದ್ದು 25.40 ಲಕ್ಷ ರೂ. ಆದಾಯ ಬಂದಿದೆ. ಒಟ್ಟಾರೆ ದಸರೆಯ ಹತ್ತು ದಿನಗಳಲ್ಲಿ ದಾಖಲೆಯ 1.5,64 ಕೋಟಿ ಆದಾಯ ಬಂದಿದೆ.
2015ರಲ್ಲಿ ದಸರಾ ಮಹೋತ್ಸವದ ಹತ್ತು ದಿನಗಳಲ್ಲಿ 1.25 ಲಕ್ಷ ಜನರು ಭೇಟಿ ನೀಡಿ,69.11 ಲಕ್ಷ ರೂ.ಆದಾಯ ಬಂದಿತ್ತು. ಅದರಲ್ಲೂ ಆಯುಧಪೂಜೆ ದಿನ 22,926 ಜನರು ಭೇಟಿ ನೀಡಿ 13.23 ಲಕ್ಷ ರೂ. ಆದಾಯ ಬಂದಿದ್ದರೆ, ವಿಜಯದಶಮಿ ದಿನ 28,587ಜನರು ಭೇಟಿ ನೀಡಿ 16.55 ಲಕ್ಷ ರೂ.ಆದಾಯ ಬಂದಿತ್ತು.
2016ರಲ್ಲಿ ದಸರಾ ಮಹೋತ್ಸವದ ಹತ್ತು ದಿನಗಳಲ್ಲಿ 1.24 ಲಕ್ಷ ಜನರು ಭೇಟಿ ನೀಡಿ 70.53 ಲಕ್ಷ ರೂ.ಆದಾಯ ಬಂದಿತ್ತು. ಅದರಲ್ಲೂ ಆಯುಧ ಪೂಜೆ ದಿನ 26,191 ಜನರು ಭೇಟಿ ನೀಡಿ 15.26 ಲಕ್ಷ ರೂ. ಆದಾಯ ಬಂದಿದ್ದರೆ, ವಿಜಯದಶಮಿ ದಿನ 25,504 ಜನರು ಭೇಟಿ ನೀಡಿ 15.08ಲಕ್ಷ ರೂ.ಆದಾಯ ಬಂದಿತ್ತು.
2017ರಲ್ಲಿ ದಸರಾ ಮಹೋತ್ಸವದ ಹತ್ತು ದಿನಗಳಲ್ಲಿ 1.23 ಲಕ್ಷ ಜನರು ಭೇಟಿ ನೀಡಿ 69.17 ಲಕ್ಷ ರೂ.ಆದಾಯ ಬಂದಿತ್ತು. ಅದರಲ್ಲೂ ಆಯುಧಪೂಜೆ ದಿನ 15,449 ಜನರು ಭೇಟಿ ನೀಡಿ 9.61 ಲಕ್ಷ ರೂ. ಆದಾಯ ಬಂದಿದ್ದರೆ, ವಿಜಯದಶಮಿ ದಿನ 31,722 ಜನರು ಭೇಟಿ ನೀಡಿ 25.40 ಲಕ್ಷ ರೂ.ಆದಾಯ ಬಂದಿತ್ತು ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
UV Fusion: ಪ್ರತೀ ಕ್ಷಣವೂ ಜೀವಿಸುವುದನ್ನು ಕಲಿ
ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್ ಗೆ ಬಿಸಿಸಿಐ ವಿಶೇಷ ಸಂದೇಶ
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
Venkatesaya Namaha: ವೆಂಕಟೇಶನ ನಂಬಿ ಬಂದವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.