
ಮಾದಹಳ್ಳಿಕಲ್ಲೂರಪ್ಪನ ಬೆಟ್ಟದ ತಪ್ಪಲಿನ ಸರ್ಕಾರಿ ಕೆರೆ ಒತ್ತುವರಿ ಬಿಡಿಸಿ
Team Udayavani, Jul 11, 2021, 3:41 PM IST

ಹುಣಸೂರು: ಪ್ರಭಾವಿಗಳು ನಾಗರಹೊಳೆ ಉದ್ಯಾನದಂಚಿನಲ್ಲಿರುವ ಇತಿಹಾಸ ಪ್ರಸಿದ್ದವಾದ ಮಾದಳ್ಳಿ ಕಲ್ಲೂರಪ್ಪನ ಬೆಟ್ಟದ ಸಮೀಪದ ಸರ್ಕಾರಿ ಕೆರೆಯನ್ನೆ ಒತ್ತುವರಿ ಮಾಡಿಕೊಂಡಿದ್ದಾರೆ.
ಉದ್ಯಾನವನದಂಚಿನಲ್ಲಿರುವ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಮಾದಳ್ಳಿ ಕಲ್ಲೂರಪ್ಪನ ಬೆಟ್ಟದ ತಪ್ಪಲಿನ ಗಿರಿಜನ ಹಾಡಿಯ ಸಮೀಪವಿರುವ ಮಾದಳ್ಳಿ ಸರ್ವೆ ನಂ.2 ಮತ್ತು 3 ರಲ್ಲಿ 4.10 ಎಕರೆ ವಿಸ್ತಿರ್ಣದ ಸರ್ಕಾರಿ ಕೆರೆಯನ್ನು ಕಳೆದ ಹತ್ತು ವರ್ಷಗಳ ಹಿಂದೆ ಕೃಷಿ ಇಲಾಖೆಯ ಜಲಾನಯನ ಅಭಿವೃದ್ದಿ ಯೋಜನೆಯಡಿ ಅಭಿವೃದ್ದಿ ಪಡಿಸಲಾಗಿತ್ತು.
ಇತ್ತೀಚೆಗೆ ಪ್ರಭಾವಿ ವ್ಯಕ್ತಿಯೋಬ್ಬರು ಕೆರೆ ಅಂಗಳವನ್ನೇ ಜೆಸಿಬಿಯಿಂದ ನೆಲಸಮ ಮಾಡಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಕೆರೆಯಿಂದ ಸುತ್ತ-ಮುತ್ತಲಿನ ಮಾದಳ್ಳಿ, ಹರಳಳ್ಳಿ ಹಾಗೂ ಶಂಕರಪುರ ಆದಿವಾಸಿ ಹಾಡಿ ಮಂದಿಯ ಜಮೀನಿನ ಬೋರ್‌ವೆಲ್‌ಗಳ ಅಂತರ್ಜಲವೃದ್ದಿ ಹಾಗೂ ಜಾನುವಾರುಗಳಿಗೆ ಅನುಕೂಲವಾಗಿತ್ತು. ಒತ್ತುವರಿಯಿಂದಾಗಿ ಅಂತರ್ಜಲ ಕುಸಿಯುವುದರೊಂದಿಗೆ ಜಾನುವಾರುಗಳೂ ಪರಿತಪಿಸುವಂತಾಗಲಿದ್ದು, ತಕ್ಷಣವೇ ಕೆರೆ ಸರ್ವೆನಡೆಸಿ ಒತ್ತುವರಿ ಬಿಡಿಸುವಂತೆ ಸುತ್ತಮುತ್ತಲ ಗ್ರಾಮಸ್ಥರ ಆಗ್ರಹವಾಗಿದೆ.
ಇದನ್ನೂ ಓದಿ: ಗೋಪಾಲ ಸ್ವಾಮಿ ಬೆಟ್ಟದಲ್ಲಿ ಹಳ್ಳಕ್ಕೆ ಜಾರಿದ ಬಸ್: ಅಪಾಯದಿಂದ ಪಾರಾದ ಪ್ರಯಾಣಿಕರು
ಒತ್ತುವರಿ ತೆರವಿಗೆ ಕ್ರಮವಾಗಲಿ: ತಾಲೂಕು ಆಡಳಿತ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಕೆರೆ ಒತ್ತುವರಿ ಬಿಡಿಸಿ ಜನ- ಜಾನುವಾರುಗಳಿಗೆ ಅನೂಕೂಲ ಕಲ್ಪಿಸಿ ಸರ್ಕಾರಿ ಆಸ್ತಿ ಉಳಿಸುವತ್ತ ಗಮನಹರಿಸಬೇಕು.-ಕಿರಂಗೂರುಗ್ರಾ.ಪಂ.ಸದಸ್ಯ ಹಿಂಡಗುಡ್ಲು ರಾಮೇಗೌಡ.
-ಸಂಪತ್ ಕುಮಾರ್
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ

Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ

Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.