ಬೊಪ್ಪನಹಳ್ಳಿ ಬಿಕ್ಕಟ್ಟು ಶಮನ, ಹಬ್ಬ ಸುಗಮ
Team Udayavani, Mar 15, 2020, 3:00 AM IST
ಎಚ್.ಡಿ.ಕೋಟೆ: ತಾಲೂಕಿನ ಬೊಪ್ಪನಹಳ್ಳಿಯ ಗುಂಡುತೋಪು ಜಾಗ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾಮದ ಎರಡು ಸಮುದಾಯಗಳ ನಡುವೆ ಸೃಷ್ಟಿಯಾಗಿದ್ದ ಬಿಕ್ಕಟ್ಟನ್ನು ಶಾಸಕ ಅನಿಲ್ ಚಿಕ್ಕಮಾದು ಶಾಂತಿ ಸಭೆ ನಡೆಸಿ ಶಮನಗೊಳಿಸಿದರು. ಗ್ರಾಮದೇವತೆ ಹಬ್ಬ ಆಚರಿಸಲು ಗ್ರಾಮಸ್ಥರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.
ಬೊಪ್ಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಶಾಂತಿಸಭೆಯಲ್ಲಿ ತಾಲೂಕಿನ ಮುಖಂಡರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಮಾತನಾಡಿದ ಶಾಸಕರು, ಈ ಹಿಂದೆ ಜಾತಿಪದ್ಧತಿ ರೂಢಿಯಲ್ಲಿತ್ತು. ಆದರೆ, ಈಗ ಕಾಲ ಬದಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯತೆ ಆಚರಿಸುವುದು ಕಾನೂನು ಬಾಹಿರ. ಅಸ್ಪೃಶ್ಯತೆ ಆಚರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಗಳು ಇವೆ ಎಂದು ಎಚ್ಚರಿಕೆ ನೀಡಿದರು.
ಮನವಿ: ಗ್ರಾಮದಲ್ಲಿರುವ 2.30 ಎಕರೆ ಗುಂಡುತೋಪು ಜಾಗದ ವಿಚಾರ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಡೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮ ದೇವತೆ ಮಾರಮ್ಮ ಹಬ್ಬ ಕೂಡ ಸ್ಥಗಿತಗೊಂಡಿದೆ. ಅಲ್ಲದೇ ಸಣ್ಣಪುಟ್ಟ ವಿಚಾರವಾಗಿ ಗ್ರಾಮದಲ್ಲಿ ಸಮುದಾಯಗಳ ನಡುವೆ ಜಗಳ ಮಾಡಿಕೊಂಡು ಪರಸ್ಪರ ದೂರುಗಳ ದಾಖಲಾಗಿವೆ. ಇದು ಹೀಗೆ ಮುಂದುವರಿದರೆ ಗ್ರಾಮದಲ್ಲಿ ಅಶಾಂತಿ ನೆಲೆಸಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಗ್ರಾಮಸ್ಥರು ಒಂದಾಗಿ ಗುಂಡುತೋಪು ಜಾಗದಲ್ಲಿ ಹಂಚಿಕೆ ಮಾಡಿಕೊಂಡು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಪರಸ್ಪರ ಸಹಮತ ನೀಡಬೇಕು ಎಂದು ಮನವಿ ಮಾಡಿದರು.
ಅಸ್ಪೃಶ್ಯತೆ ಬೇಡ: ಹಿಂದಿನಂತೆ ಜಾತಿ ಪದ್ಧತಿ ಆಚರಣೆ ಬೇಡ. ಎಲ್ಲರನ್ನೂ ಮನುಷ್ಯರಂತೆ ಕಾಣುವ ಮಾನವೀಯತೆ ಬೆಳೆಸಿಕೊಳ್ಳೋಣ. ಅಸ್ಪೃಶ್ಯತೆ ನಮ್ಮಿಂದಲೇ ಕೊನೆಗಾಣಬೇಕು. ಮುಂದಿನ ಪೀಳಿಗೆ ಹಿತಾದೃಷ್ಟಿಯಿಂದ ಸರ್ವರೂ ಶಾಂತಿ ಸೌಹಾದìತೆಯಿಂದ ಜೀವನ ನಡೆಸೋಣ ಎಂದು ಗ್ರಾಮಸ್ಥರಲ್ಲಿ ಕೋರಿಕೊಂಡರು.
ಒಗ್ಗೂಡಿ ಹಬ್ಬ ಆಚರಿಸಿ: ಮಾಜಿ ಶಾಸಕ ಚಿಕ್ಕಣ್ಣ ಮಾತನಾಡಿ, ಗ್ರಾಮಗಳ ಅಶಾಂತಿಗೆ ರಾಜಕೀಯ ಪಕ್ಷಗಳ ನಾಯಕರೇ ಪರೋಕ್ಷವಾಗಿ ಕಾರಣವಾಗಿದ್ದು, ಚುನಾವಣೆ ಮುಗಿದ ಬಳಿಕ ಗ್ರಾಮಸ್ಥರು ಜಾತಿ ತೊರೆದು ಪಕ್ಷಭೇದ ಮರೆತು ಸಹಬಾಳ್ವೆಯಿಂದ ಜೀವನ ನಡೆಸುವ ಮಾರ್ಗ ಕಾಣಬೇಕು. ಕ್ಷುಲ್ಲಕ ಕಾರಣಗಳಿಗೆ ಗ್ರಾಮಗಳಲ್ಲಿ ವೈಷಮ್ಯ ಸೃಷ್ಟಿಸಿಕೊಳ್ಳಬೇಡಿ, ಸರ್ವರೂ ಸಮಾನ ಜಾತಿ ಅನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಗ್ರಾಮಸ್ಥರು ಒಗ್ಗೂಡಿ ಗ್ರಾಮದೇವತೆ ಮಾರಮ್ಮ ಹಬ್ಬ ಆಚರಿಸಿ ಎಂದು ಸಲಹೆ ನೀಡಿದರು.
ವಿವಾದ ಪರಿಹರಿಸಿಕೊಳ್ಳಲು ಸಮ್ಮತಿ: ಶಾಸಕರು, ಮುಖಂಡರು ಮತ್ತು ಅಧಿಕಾರಿಗಳ ಸಲಹೆ ಮೇರೆಗೆ ಗ್ರಾಮಸ್ಥರು, ಪರಸ್ಪರ ಒಮ್ಮತದಿಂದ ಮಾರಮ್ಮ ಹಬ್ಬ ಆಚರಿಸುವುವುದಾಗಿ ತಿಳಿಸಿದರು. ಜೊತೆಗೆ ಗುಂಡುತೋಪು ಜಾಗ ಹಂಚಿಕೆ ಮಾಡಿಕೊಂಡು ಗ್ರಾಮದಲ್ಲಿ ಸ್ಥಗಿತಗೊಂಡಿದ್ದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬದ್ಧªರಾಗುವುದಾಗಿ ಸಮ್ಮತಿ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಆರ್.ಮಂಜುನಾಥ್, ತಾಲೂಕು ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸೋಗಳ್ಳಿ ಶಿವಣ್ಣ, ತಾಲೂಕು ಒಕ್ಕಲಿಗ ಸಂಘದ ನರಸಿಂಹೇಗೌಡ, ಜಿಲ್ಲಾ ಪಂಚಾಯಿತಿ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟಸ್ವಾಮಿ, ರಾಜೇಂದ್ರ, ಚಿಕ್ಕವೀರನಾಯ್ಕ, ಸೋಮೇಶ, ಸಬ್‌ಇನ್ಸ್‌ಪೆಕ್ಟರ್ ಎಂ.ನಾಯಕ್ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಶಾಂತಿ ಸಭೆ ನಡೆಸಿ, ಸೌಹಾರ್ದತೆ ಮೂಡಿಸಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಶಾಂತಿ, ವೈಷಮ್ಯ ಭುಗಿಲೆದಿದ್ದರೂ ತಾಲೂಕು ಆಡಳಿತ ಗ್ರಾಮಗಳಲ್ಲಿ ಶಾಂತಿಸಭೆ ನಡೆಸಿ ಶಾಂತಿ ನೆಲೆಸುವಂತೆ ಮಾಡಲು ವಿಪಲವಾಗಿದೆ ಎಂದು ಅಧಿಕಾರಿಗಳನ್ನು ಮಾಜಿ ಶಾಸಕ ಚಿಕ್ಕಣ್ಣ ತರಾಟಗೆ ತೆಗೆದುಕೊಂಡರು. ತಾಲೂಕಿನ ಸಾಗರೆ, ಹೆಬ್ಬಲಗುಪ್ಪೆ, ಕಟ್ಟೆಮನುಗನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ.
ಹಬ್ಬ, ಜಾತ್ರೆ ಮತ್ತಿತರ ವಿಚಾರವಾಗಿ ಸಮುದಾಯಗಳ ನಡುವೆ ದ್ವೇಷ ಭಾವನೆ ಬೆಳೆಯುತ್ತಿದೆ. ಕೂಲಿ ಕೆಲಸಗಳಿಗೆ ಕಾರ್ಮಿಕರ ಬಾರದಂತಾಗಿದೆ. ಪರಸ್ಪರ ಸಹಕಾರ ಮನೋಭಾವನೆ ಇಲ್ಲದಂತಾಗಿದೆ. ಗ್ರಾಮಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಇದನ್ನು ಉಲ್ಲಂ ಸಿದವರಿಗೆ ಮೌಖೀಕವಾಗಿ ದಂಡ ವಿಧಿಸುವಂತೆ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಆದರೂ ತಾಲೂಕು ಆಡಳಿತ ಗ್ರಾಮಗಳಲ್ಲಿ ಶಾಂತಿ ಸಭೆ ನಡೆಸಿಲ್ಲ. ಅಧಿಕಾರಿಗಳು ಬೇಜವಾಬ್ದಾರಿ ಧೋರಣೆ ತೋರುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.