ಪಾಲಿಕೆಯ 65 ವಾರ್ಡ್‌ಗಳ ಪುನರ್ ವಿಂಗಡಣೆ
Team Udayavani, Jun 22, 2018, 12:44 PM IST
ಮೈಸೂರು: ಮೈಸೂರು ಮಹಾ ನಗರ ಪಾಲಿಕೆಯ 65 ವಾರ್ಡ್‌ಗಳನ್ನು ಪುನರ್ ವಿಂಗಡಿಸಿ ವಾರ್ಡ್‌ಗಳಿಗೆ ಸೇರುವ ಪ್ರದೇಶ ಹಾಗೂ ವಾರ್ಡ್‌ವಾರು ಕರಡು ಮೀಸಲಾತಿ ಅಧಿಸೂಚನೆಯನ್ನು ರಾಜ್ಯಸರ್ಕಾರದ ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದ್ದು, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಲಾಗಿದೆ.
ವಾರ್ಡ್ ಸಂಖ್ಯೆ-1 ಹೆಬ್ಟಾಳು-ಲಕ್ಷ್ಮೀಕಾಂತ ನಗರ( ಬಿಸಿಎಂ-ಎ,ಮಹಿಳೆ): ಉತ್ತರಕ್ಕೆ ಹೊರ ವರ್ತುಲ ರಸ್ತೆಯಲ್ಲಿ ಇನ್ಫೋಸಿಸ್ ರಸ್ತೆ ಮತ್ತು ಹೊರ ವರ್ತುಲ ರಸ್ತೆ ಸೇರುವ ಬಿಂದುವಿನಿಂದ ಪೂರ್ವಕ್ಕೆ ತಿರುಗಿ ಟಾಟಾ ಮೋಟಾರ್ಸ್ ಹತ್ತಿರ ಬಸವನಗುಡಿ ರಸ್ತೆಗೆ ಸೇರುವುದು.
ದಕ್ಷಿಣಕ್ಕೆ ಹೊರ ವರ್ತುಲ ರಸ್ತೆ ಮತ್ತು ಹೆಬ್ಟಾಳು 2ನೇ ಹಂತ ಹೈಟೆನ್ಷನ್ ಜೋಡಿ ರಸ್ತೆ ಸೇರುವ ಬಿಂದುವಿನಿಂದ ಪೂರ್ವಕ್ಕೆ ತಿರುಗಿ ಸಿಐಟಿಬಿ ಛತ್ರದ ಹತ್ತಿರ 80 ಅಡಿ ರಸ್ತೆಗೆ ಸೇರಿ ಶಿವಾನಂದ ಶಾಲೆ ಮುಂಭಾಗ ಕುವೆಂಪು ವೃತ್ತದ ಮುಖಾಂತರ ಬಸವನಗುಡಿ ವೃತ್ತಕ್ಕೆ ಸೇರುವುದು.
ಪೂರ್ವಕ್ಕೆ ಬಸವನಗುಡಿ ವೃತ್ತದಿಂದ ಉತ್ತರಕ್ಕೆ ರಿಂಗ್ ರಸ್ತೆ ತಲುಪುವುದು. ಪಶ್ಚಿಮಕ್ಕೆ ಹೆಬ್ಟಾಳು ಎರಡನೇ ಹಂತ ಜೋಡಿ ರಸ್ತೆ ಮತ್ತು ಹೊರ ವರ್ತುಲ ರಸ್ತೆ ಸೇರುವ ಬಿಂದುವಿನಿಂದ ಹೊರ ವರ್ತುಲ ರಸ್ತೆಯಲ್ಲಿ ಮುಂದುವರೆದು ಬೊಮ್ಮೇನಹಳ್ಳಿ ಕೆರೆಯ ಪಕ್ಕದಲ್ಲಿ ರಾಣೆ ಮಡ್ರಾಸ್ ರಸ್ತೆಯ ಮುಖಾಂತರ ಪುನಾ ಹೊರವರ್ತುಲ ರಸ್ತೆಯನ್ನು ತಲುಪಿ ಇನ್ಫೋಸಿಸ್ ಕಡೆಗೆ ಹೋಗುವ ರಸ್ತೆ ಮತ್ತು ಹೊರ ವರ್ತುಲ ರಸ್ತೆ ಸೇರುವ ಬಿಂದುವಿನವರೆಗೆ.
ವಾರ್ಡ್ ಸಂಖ್ಯೆ-2 ಮಂಚೇಗೌಡನ ಕೊಪ್ಪಲು(ಸಾಮಾನ್ಯ): ಉತ್ತರಕ್ಕೆ ಹೊರವರ್ತುಲ ರಸ್ತೆ ಮತ್ತು ಹೆಬ್ಟಾಳು 2ನೇ ಹಂತ ಹೈಟೆನ್ಷನ್ ಜೋಡಿ ರಸ್ತೆ ಸೇರುವ ಬಿಂದುವಿನಿಂದ ಪೂರ್ವಕ್ಕೆ ತಿರುಗಿ ಸಿಐಟಿಬಿ ಛತ್ರದ ಹತ್ತಿರ 80 ಅಡಿ ರಸ್ತೆಗೆ ಸೇರಿ ಶಿವಾನಂದ ಶಾಲೆ ಮುಂಭಾಗ ಕುವೆಂಪು ವೃತ್ತದ ಹತ್ತಿರ ಹೆಬ್ಟಾಳು ಮುಖ್ಯರಸ್ತೆ (ಎಸ್‌ಬಿಐ) ಸೇರುವುದು.
ದಕ್ಷಿಣಕ್ಕೆ ಸೂರ್ಯಬೇಕರಿ ವೃತ್ತದಿಂದ ಪಶ್ಚಿಮದ ಕಡೆಗೆ ಅಭಿಷೇಕ್ ವೃತ್ತ ತಲುಪುವುದು.ಅಭಿಷೇಕ್ ವೃತ್ತದಿಂದ ದಕ್ಷಿಣದ ಕಡೆಗೆ 80 ಅಡಿ ರಸ್ತೆಯಲ್ಲಿ ಮುಂದುವರೆದು ಮಹಾಜನ ಬಡಾವಣೆಯ 3ನೇ ಮುಖ್ಯ ರಸ್ತೆಯಿಂದ ಪಶ್ಚಿಮಕ್ಕೆ ಸಂಗಮ ವೃತ್ತ ಸೇರುವುದು. ಪೂರ್ವಕ್ಕೆ ಕುವೆಂಪು ವೃತ್ತದಿಂದ ದಕ್ಷಿಣದ ಕಡೆಗೆ ಸೂರ್ಯ ಬೇಕರಿ ವೃತ್ತ ತಲುಪುವುದು.
ಪಶ್ಚಿಮಕ್ಕೆ 80 ಅಡಿ ವಾಟರ್ ಟ್ಯಾಂಕ್ ರಸ್ತೆ ಮತ್ತು ಮಹಾಜನ ಬಡಾವಣೆ 3ನೇ ಮುಖ್ಯರಸ್ತೆಯಿಂದ ಪಶ್ಚಿಮಕ್ಕೆ ಸಂಗಮ ವೃತ್ತ-ಹಂಪಿ ವೃತ್ತದ ಮುಖಾಂತರ ಸೇರುವ ಬಿಂದುವಿನಿಂದ ಪಶ್ಚಿಮಕ್ಕೆ ಹೊರವರ್ತುಲ ರಸ್ತೆ ಮತ್ತು ಹೈಟೆನ್ಷನ್ ಜೋಡಿ ರಸ್ತೆಗೆ ಸೇರುವ ಬಿಂದುವಿನವರೆಗೆ.
ವಾರ್ಡ್ ಸಂಖ್ಯೆ 3 ಮಹದೇಶ್ವರ ಬಡಾವಣೆ(ಬಿಸಿಎಂ-ಬಿ ಮಹಿಳೆ):ಉತ್ತರಕ್ಕೆ ಎಸ್‌ಬಿಐ ಬ್ಯಾಂಕ್ ರಸ್ತೆ ಮತ್ತು ಕಾಳಿಕಾಂಭ ದೇವಸ್ಥಾನ ರಸ್ತೆ ಸೇರುವ ಬಿಂದುವಿನಿಂದ ಕಾಳಿಕಾಂಭ ದೇವಸ್ಥಾನದ ಮುಖಾಂತರ ಕುಂಬಾರಕೊಪ್ಪಲು 60 ಅಡಿ ರಸ್ತೆ ತಲುಪುವುದು.
ದಕ್ಷಿಣಕ್ಕೆ ಕಾಂಟೂರ್ ರಸ್ತೆ ಮತ್ತು ಸಿಎಫ್ಟಿಆರ್‌ಐ ಕಾಂಪೌಂಡ್ ಸೇರುವ ಬಿಂದುವಿನಿಂದ ವಿದ್ಯಾವರ್ಧಕ ಕಾಲೇಜು ಮುಖಾಂತರ ಕನ್ನಡ ಸಾಹಿತ್ಯ ಭವನ ರಸ್ತೆಯನ್ನು ಸೇರಿ, ಕನ್ನಡ ಸಾಃಇತ್ಯ ಭವನ ರಸ್ತೆಯಲ್ಲಿ ವಿಜಯ ನಗರ ಜೋಡಿ ರಸ್ತೆಯ ಮುಖಾಂತರ 80 ಅಡಿ ರಸ್ತೆ ಸೇರುವ ಬಿಂದುವಿನವರೆಗೆ.
ಪೂರ್ವಕ್ಕೆ ಸಿಎಫ್ಟಿಆರ್‌ಐ ಕಾಂಪೌಂಡ್ ಮತ್ತು ಕಾಂಟೂರ್ ರಸ್ತೆ ಸೇರುವ ಬಿಂದುವಿನಿಂದ ಉತ್ತರದ ಕಡೆಗೆ ಕುಂಬಾರ ಕೊಪ್ಪಲು ಸ್ಟೇಡಿಯಂ ತಲುಪುವುದು. ಅಲ್ಲಿಂದ ಸ್ಟೇಡಿಯಂ ಪಕ್ಕದ ರಸ್ತೆಯಲ್ಲಿ ಕಿಡಿಗಣ್ಣಮ್ಮನ ಬಡಾವಣೆ, ರಾಘವೇಂದ್ರ ಮಠದ ರಸ್ತೆ ಸೇರುವುದು. ರಾಘವೇಂದ್ರ ಮಠದ ರಸ್ತೆಯಲ್ಲಿ ಉತ್ತರದ ಕಡೆಗೆ ಕಾಳಿಕಾಂಭ ರಸ್ತೆಗೆ ತಲುಪುವುದು.
ಪಶ್ಚಿಮಕ್ಕೆ ವಿಜಯನಗರ ಜೋಡಿ ರಸ್ತೆ ಮತ್ತ 80 ಅಡಿ ವಾಟರ್ ಟ್ಯಾಂಕ್ ರಸ್ತೆ ಸೇರುವ ಬಿಂದುವಿನಿಂದ ಉತ್ತರದ ಕಡೆಗೆ ಅಭಿಷೇಕ್ ವೃತ್ತ ತಲುಪುವುದು. ಅಲ್ಲಿಂದ ಪೂರ್ವಕ್ಕೆ ಸೂರ್ಯ ಬೇಕರಿ ವೃತ್ತ ತಲುಪಿ ಪುನಾ ಉತ್ತರದ ಕಡೆಗೆ ತಿರುಗಿ ಕಾಳಿಕಾಂಭ ದೇವಸ್ಥಾನ ಮತ್ತು ಹೆಬ್ಟಾಳು ಮುಖ್ಯ ರಸ್ತೆ ಸೇರುವ ಬಿಂದುವಿನವರೆಗೆ.
ವಾರ್ಡ್ ಸಂಖ್ಯೆ 4 ಹೆಬ್ಟಾಳು-ಲೋಕನಾಯಕ ನಗರ (ಸಾಮಾನ್ಯ): ಉತ್ತರಕ್ಕೆ ಹೊರವರ್ತುಲ ರಸ್ತೆಯಲ್ಲಿ ಹೆಬ್ಟಾಳು ಬಸವನಗುಡಿ ರಸ್ತೆ ಸೇರುವ ಬಿಂದುವಿನಿಂದ ಪೂರ್ವದ ಕಡೆಗೆ ಹೊರವರ್ತುಲ ರಸ್ತೆಯಲ್ಲಿಯೇ ಮುಂದುವರಿದು ರಾಯಲ್ ಇನ್ ಹೋಟೆಲ್ ಹತ್ತಿರ ಕೆಆರ್‌ಎಸ್ ರಸ್ತೆಯನ್ನು ತಲುಪುವುದು.
ದಕ್ಷಿಣಕ್ಕೆ ಹೆಬ್ಟಾಳ್ ಮುಖ್ಯ ರಸ್ತೆ (ಎಸ್‌ಬಿಐ ಬ್ಯಾಂಕ್ ರಸ್ತೆ) ಮತ್ತು ಕಾಳಿಕಾಂಭ ದೇವಸ್ಥಾನ ರಸ್ತೆ ಸೇರುವ ಬಿಂದುವಿನಿಂದ ಕುಂಬಾರಕೊಪ್ಪಲು 60 ಅಡಿ ರಸ್ತೆಯನ್ನು ತಲುಪಿ ಮಳೆ ನೀರು ಚರಂಡಿಯ ಪಕ್ಕದಲ್ಲಿ ಕೆಆರ್‌ಎಸ್ ರಸ್ತೆಯನ್ನು ತಲುಪುವುದು.
ಪೂರ್ವಕ್ಕೆ ಕೆಆರ್‌ಎಸ್ ರಸ್ತೆಯಲ್ಲಿ ಕುಂಬಾರ ಕೊಪ್ಪಲು ಮಳೆ ನೀರು ಚರಂಡಿ ಸೇರುವ ಬಿಂದುವಿನಿಂದ ಉತ್ತರದ ಕಡೆಗೆ ಕುವೆಂಪು ವೃತ್ತವನ್ನು ತಲುಪಿ, ಪೂರ್ವಕ್ಕೆ ತಿರುಗಿ ಬಸವನಗುಡಿ ವೃತ್ತ ತಲುಪುವುದು. ಬಸವನಗುಡಿ ವೃತ್ತದಿಂದ ಉತ್ತರದ ಕಡೆಗೆ ಹೊರವರ್ತುಲ ರಸ್ತೆ ತಲುಪುವುದು.
ಪಶ್ಚಿಮಕ್ಕೆ ಕಾಳಿಕಾಂಭ ದೇವಸ್ಥಾ ರಸ್ತೆ ಮತ್ತು ಹೆಬ್ಟಾಳು ಮುಖ್ಯ ರಸ್ತೆ (ಎಸ್‌ಬಿಐ) ಸೇರುವ ಬಿಂದುವಿನಿಂದ ಉತ್ತರದ ಕಡೆಗೆ ಕುವೆಂಪು ವೃತ್ತವನ್ನು ತಲುಪಿ ಪೂರ್ವಕ್ಕೆ ತಿರುಗಿ ಬಸವನಗುಡಿ ವೃತ್ತ ತಲುಪುವುದು. ಬಸವನಗುಡಿ ವೃತ್ತದಿಂದ ಉತ್ತರದ ಕಡೆಗೆ ಹೊರ ವರ್ತುಲ ರಸ್ತೆಯನ್ನು ತಲುಪುವುದು.
ವಾರ್ಡ್ ಸಂಖ್ಯೆ 5 ಕುಂಬಾರ ಕೊಪ್ಪಲು (ಬಿಸಿಎಂ-ಎ): ಉತ್ತರಕ್ಕೆ ರಾಘವೇಂದ್ರ ಮಠದ ರಸ್ತೆ ಮತ್ತು ಕಾಳಿಕಾಂಭ ರಸ್ತೆ ಸೇರುವ ಬಿಂದುವಿನಿಂದ ಪೂರ್ವದ ಕಡೆಗೆ ಕುಂಬಾರ ಕೊಪ್ಪಲು 60 ಅಡಿ ರಸ್ತೆಯಲ್ಲಿ ಮಳೆ ನೀರು ಚರಂಡಿಯ ಹತ್ತಿರ ಕೆಆರ್‌ಎಸ್ ರಸ್ತೆಗೆ ತಲುಪುವುದು.
ದಕ್ಷಿಣಕ್ಕೆ ಕಿಡಿಗಣ್ಣಮ್ಮನ ಬಡಾವಣೆ, ರಾಘವೇಂದ್ರ ಸ್ವಾಮಿ ಮಠ ಮತ್ತು ಕುಂಬಾರ ಕೊಪ್ಪಲು ಸ್ಟೇಡಿಯಂ ಪಕ್ಕದ ರಸ್ತೆ ಸೇರುವ ಬಿಂದುವಿನಿಂದ ಪೂರ್ವಕ್ಕೆ ಕಾಂಟೂರ್ ರಸ್ತೆಯನ್ನು ತಲುಪಿ ಸ್ಯಾನಿಟೋರಿಯಂ ಆಸ್ಪತ್ರೆ ಕಾಂಪೌಂಡ್ ಮುಖಾಂತರ ಕೆಆರ್‌ಎಸ್ ರಸ್ತೆಗೆ ಸೇರುವುದು.
ಪೂರ್ವಕ್ಕೆ ಕೆಆರ್‌ಎಸ್ ರಸ್ತೆ ಮತ್ತು ಸ್ಯಾನಿಟೋರಿಯಂ ಆಸ್ಪತ್ರೆ ಕಾಂಪೌಂಡ್ ಸೇರುವ ಬಿಂದುವಿನಿಂಧ ಕೆಆರ್‌ಎಸ್ ರಸ್ತೆಯಲ್ಲಿ ಉತ್ತರದ ಕಡೆಗೆ ಕುಂಬಾರ ಕೊಪ್ಪಲು ಮಳೆ ನೀರು ಚರಂಡಿ ಸೇರುವ ಬಿಂದುವಿನವರೆಗೆ.
ಪಶ್ಚಿಮಕ್ಕೆ ಕುಂಬಾರ ಕೊಪ್ಪಲು ಸ್ಟೇಡಿಯಂ ಮತ್ತು ಕಿಡಿಗಣ್ಣಮ್ಮನ ಬಡಾವಣೆ ರಾಘವೇಂದ್ರ ಮಠದ ರಸ್ತೆಗೆ ಸೇರುವ ಬಿಂದುವಿನಿಂದ ಉತ್ತರದ ಕಡೆಗೆ ಸುಭಾಷ್ ನಗರದ ಮುಖಾಂತರ ಕಾಳಿಕಾಂಭ ದೇವಸ್ಥಾನ ರಸ್ತೆಗೆ ಸೇರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.