ದಾಖಲಾತಿ ಇಲ್ಲದ ಕೆರೆ ಅಭಿವೃದ್ಧಿಗೆ ಸ್ಪಂದನೆ
Team Udayavani, Dec 3, 2019, 3:57 PM IST
ಎಚ್.ಡಿ.ಕೋಟೆ: ತಾಲೂಕಿನ ಟೈಗರ್ ಬ್ಲಾಕ್ ನಲ್ಲಿರುವ ಚನ್ನಯ್ಯನಕಟ್ಟೆ ಕೆರೆ ಜಾಗಕ್ಕೆ ತಹಶೀಲ್ದಾರ್ ಆರ್.ಮಂಜುನಾಥ್ ಮತ್ತು ಜಿಲ್ಲಾ ಪಂಚಾಯ್ತಿ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟಸ್ವಾಮಿ ಮತ್ತಿತರರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತ್ವರಿತವಾಗಿ ಸರ್ವೆ ನಡೆಸಿ, ಕೆರೆ ಸಂರಕ್ಷಣೆಗೆಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದರು.
“ಉದಯವಾಣಿ‘ಯಲ್ಲಿ ಡಿ.1ರಂದು “ಎಂದಿಗೂಬತ್ತದ ಕೆರೆಗೆ ದಾಖಲಾತಿಯೇ ಇಲ್ಲ!’ ಎಂಬ ಶೀರ್ಷಿಕೆಯಡಿ ಕೆರೆ ಅವ್ಯವಸ್ಥೆ ಕುರಿತು ವರದಿ ಪ್ರಕಟವಾಗಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಕೆರೆಗೆ ಭೇಟಿ ನೀಡಿದರು.
ಕೆರೆಯ ತುಂಬಾ ತಾವರೆ ಹೂವುಗಳು ಬಿಟ್ಟಿರುವುದು, ಕೆರೆ ಕೋಡಿ ಬಿದ್ದಿರುವುದು ಹಾಗೂ ಕೆರೆಯ ತಡದಲ್ಲಿ ಕಾಡುಕಲ್ಲುಗಳಿಂದ ಕೆರೆ ಏರಿ ನಿರ್ಮಾಣ ಮಾಡಿರುವುದನ್ನು ತಹಶೀಲ್ದಾರ್ ಆರ್.ಮಂಜುನಾಥ್ ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು, ಕೆರೆಗೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿ ಉಪವಿಭಾಗಾಧಿಕಾರಿಗಳ ಗಮನಕ್ಕೆ ತರಲಾಗುವುದು. ಅಗತ್ಯ ಇದ್ದರೆ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿ ಅತೀ ಶೀಘ್ರದಲ್ಲಿ ಕೆರೆ ಜಾಗವನ್ನು ಪಹಣಿ ಪತ್ರ (ಆರ್‌ಟಿಸಿ)ದಲ್ಲಿ ನಮೂದಿಸಲಾಗುವುದು. ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಕಾರ್ಯಾಚರಣೆ ಕೈಗೊಳ್ಳಲಾಗುವುದು.
ನಾಲ್ಕೈದು ಗ್ರಾಮಗಳ ಜೀವನಾಡಿಯಾಗಿರುವ ಈ ಚನ್ನಯ್ಯನಕಟ್ಟೆ ಕೆರೆ ಅಭಿವೃದ್ಧಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ, ಗ್ರಾಮಸ್ಥರೇ ಈ ಕೆರೆ ಅಭಿವೃದ್ಧಿಗೆ ಮುಂದಾಗಿರುವುದಕ್ಕೆ ತಹಶೀಲ್ದಾರ್ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ಆರ್. ಪಳನಿಸ್ವಾಮಿ, ಯದುನಂದನ, ಲೋಕ್‌ಸೇನಾ, ಸೌಭಾಗ್ಯ, ಮೊದಲಾದವರು ಹಾಜರಿದ್ದರು.
ಮೈಸೂರು ಒಡೆಯರ್ ಕಾಲದಲ್ಲಿ ರಾಜವಂಶಸ್ಥರು ವನ್ಯಜೀಗಳ ನೀರಿನ ದಾಹ ತೀರಿಸುವ ಸಲುವಾಗಿ ತಾಲೂಕಿನ ಟೈಗರ್‌ಬ್ಲಾಕ್‌ನಲ್ಲಿ ಚನ್ನಯ್ಯನಕಟ್ಟೆ ಕೆರೆ ನಿರ್ಮಿಸಿದ್ದರು. ಕೆರೆ ವ್ಯಾಪ್ತಿಯ 8.10 ಎಕರೆ ಜಾಗ ಇಂದಿಗೂ ಕಂದಾಯ ಇಲಾಖೆಯ ಆರ್‌ಟಿಸಿಯಲ್ಲಿ ದಾಖಲಾಗಿಲ್ಲ. 1969ನೇ ಸಾಲಿನಿಂದಲೂ ಈ ಜಾಗ ಕೆರೆ ಎಂಬುದಾಗಿ ಕಂದಾಯ ಇಲಾಖೆಯ ದಾಖಲಾತಿಯಲ್ಲಿವೆಯಾದರೂ ಪಹಣಿಯಲ್ಲಿ ಸೇರಿಸಿಲ್ಲ.ಹೀಗಾಗಿ ಕೆರೆ ಒತ್ತುವರಿಯಾಗಿ ವಿವಿಧೆಡೆ ಭತ್ತ ಬೆಳೆಯಲಾಗಿದೆ. ಸಂಘ ಸಂಸ್ಥೆಗಳ ನೆರವಿನೊಂದಿಗೆ ಗ್ರಾಮಸ್ಥರೇ ಕೆರೆ ಸಂರಕ್ಷಣೆಗೆ ಮುಂದಾಗಿದ್ದರೂ ಪಹಣಿ ಪತ್ರದಲ್ಲಿ ದಾಖಲೆ ಇಲ್ಲದಿದ್ದರಿಂದ ಈ ಕಾರ್ಯಕ್ಕೆ ಹಿನ್ನಡೆಯಾಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.