ಮಾಹಿತಿ ನೀಡದ ನಗರಸಭೆ ಕಂದಾಯ ಅಧಿಕಾರಿಗೆ 10 ಸಾವಿರ ದಂಡ
Team Udayavani, May 14, 2022, 8:52 PM IST
ಹುಣಸೂರು : ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ನಿಗದಿತ ಸಮಯದಲ್ಲಿ ಮಾಹಿತಿ ನೀಡದ ಹುಣಸೂರು ನಗರಸಭೆ ಆರ್.ಐ.ಗೆ 10 ಸಾವಿರ ರೂ ದಂಡ ವಿಧಿಸಿದೆ.
ಹುಣಸೂರು ನಗರಸಭೆಯ ಕಂದಾಯಾಧಿಕಾರಿ ಸಿದ್ದರಾಜು ದಂಡ ಶಿಕ್ಷೆಗೊಳಗಾದವರು. ಮಾಹಿತಿ ಹಕ್ಕು ಅಧಿಕಾರಿಯೂ ಆದ ನಗರಸಭೆ ಕಂದಾಯಾಧಿಕಾರಿ ಸಿದ್ದರಾಜು ಅವರ ಮೇ ಮತ್ತು ಜೂನ್ ತಿಂಗಳ ವೇತನದಲ್ಲಿ ತಲಾ 5 ಸಾವಿರ ರೂ. ನಂತೆ ಕಡಿತಗೊಳಿಸಿ, ಆ ಮೊಬಲಗನ್ನು ಸರಕಾರದ ಲೆಕ್ಕ ಶಿರ್ಷಿಕೆ ಖಾತೆಗೆ ಜಮೆ ಮಾಡಿ ರಸೀದಿಯೊಂದಿಗೆ ಅದರ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ರಾಜ್ಯ ಮಾಹಿತಿ ಆಯುಕ್ತ ಡಾ.ಕೆ.ಇ.ಕಮಾರಸ್ವಾಮಿ ನಗರಸಭೆಗೆ ಆದೇಶಿಸಿದ್ದಾರೆ.
ಆಗಿರೋದಿಷ್ಟು:
2021ರ ಜುಲೈ ತಿಂಗಳಿನಲ್ಲಿ ನಗರದ ಮುಸ್ಲಿಂ ಬಡಾವಣೆ ನಿವಾಸಿ ಓಬೇದುಲ್ಲಾ ನರಸಿಂಹಸ್ವಾಮಿ ಬಡಾವಣಿಯ ಸರ್ವೇ ನಂ. 268/14 ಖಾತೆ ಕುರಿತು ಕೆಲವು ಮಾಹಿತಿಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಕಾಲಮಿತಿಯೊಳಗೆ ಮಾಹಿತಿ ಸಿಗದಿದ್ದಾಗ 2021ರ ಆಗಸ್ಟ್ ನಲ್ಲಿ ಪ್ರಥಮ ಮೇಲ್ಮನವಿ ಪ್ರಾಧಿಕಾರಿ ಹಾಗೂ ಪೌರಾಯುಕ್ತರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅಗಲೂ ಉತ್ತರ ಬಾರದ ಕಾರಣ 2021ರ ಡಿಸೆಂಬರ್‌ನಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆಯೋಗವು ಅರ್ಜಿದಾರ ಒಬೇದುಲ್ಲಾ ಹಾಗೂ ಹುಣಸೂರು ನಗರಸಭೆ ಮಾಹಿತಿ ಹಕ್ಕು ಅಧಿಕಾರಿಯೂ ಆದ ಆರ್.ಐ.ಗೆ 2022 ರ ಏಪ್ರಿಲ್‌ನಲ್ಲಿ ನೋಟಿಸ್ ಜಾರಿಗೊಳಿಸಿ ಏ.19ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಆದರೆ ವಿಚಾರಣೆ ದಿನ ಮಾಹಿತಿ ಅಧಿಕಾರಿ ಅಗತ್ಯ ಮಾಹಿತಿ ಒದಗಿಸದ ಕಾರಣ ಆಯೋಗವು ನಗರಸಭೆ ಅಧಿಕಾರಿಗೆ 10 ಸಾವಿರ ರೂ. ದಂಡ ವಿಧಿಸಿದೆ.
ಇದನ್ನೂ ಓದಿ :ಒಬಿಸಿಗೆ ಮೀಸಲಾತಿ ತಪ್ಪಲು ಕಾಂಗ್ರೆಸ್ ಕಾರಣ : ಸಿ.ಟಿ. ರವಿ
ಮೇಲ್ಮನವಿ ಸಲ್ಲಿಸಿದ್ದೇನೆ : ತಮ್ಮ ಅವಧಿಯಲ್ಲಾಗದ ಘಟನೆಯ ಬಗ್ಗೆ ತಮಗೆ ದಂಡ ಹಾಕಲಾಗಿದ್ದು, ಈ ಬಗ್ಗೆ ಮೇಲ್ಮನವಿ ಸಲ್ಲಿಸಿರುವುದಾಗಿ ಆರ್.ಐ.ಸಿದ್ದರಾಜು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.