ಶೋಭನಾ ನೃತ್ಯಕ್ಕೆ 7 ಲಕ್ಷ, ಲಕ್ವಿಂದರ್ ಸಂಗೀತಕ್ಕೆ 4.5 ಲಕ್ಷ ಸಂಭಾವನ
Team Udayavani, Sep 19, 2017, 12:45 PM IST
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅರಮನೆ ಮುಂಭಾಗದ ಮುಖ್ಯವೇದಿಕೆ ಸೇರಿದಂತೆ ನಗರದ 6 ಕಡೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜ್ಯ-ಹೊರ ರಾಜ್ಯಗಳ ಖ್ಯಾತ ಕಲಾವಿದರು ಸಂಗೀತ ರಸದೌತಣ ಉಣಬಡಿಸಲಿದ್ದಾರೆ. ಸೆ.21 ರಿಂದ 28ರವರೆಗೆ ನಡೆಯುವ ಕಾರ್ಯಕ್ರಮಗಳಿಗೆ ಆಗಮಿಸುವ ಕಲಾವಿದರಿಗೆ ಅಂದಾಜು 1 ಕೋಟಿ ರೂ. ಸಂಭಾವನೆ ನೀಡಲಾಗುತ್ತಿದೆ.
ಅಂದಾಜು ಪಟ್ಟಿ: ಅರಮನೆ ಮುಂಭಾಗದ ಮುಖ್ಯ ವೇದಿಕೆಯಲ್ಲಿ ಸೆ.21ರಂದು ಸಿಎಂ ಸಿದ್ದರಾಮಯ್ಯ ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ಮುನ್ನ ಸಂಜೆ 6 ರಿಂದ 6.45ರವರೆಗೆ ನಾದಸ್ವರ ನುಡಿಸುವ ಮೈಸೂರಿನ ನಾದಸ್ವರ ಕಲಾವಿದರಾದ ವಿದ್ವಾನ್ ಯದುಕುಮಾರ್ ಮತ್ತು ತಂಡದವರಿಗೆ 30 ಸಾವಿರ ರೂ., ಉದ್ಘಾಟನಾ ಸಮಾರಂಭದ ನಂತರ ರಾತ್ರಿ 8ರಿಂದ 8.45ರವರೆಗೆ ದಸರಾ ವಿಕಾಸ ವೈಭವ ನೃತ್ಯರೂಪಕ ನೀಡುವ ಬೆಂಗಳೂರಿನ ಪ್ರಭಾತ್ ಕಲಾವಿದರ ತಂಡಕ್ಕೆ 1.5 ಲಕ್ಷ ರೂ.,
ರಾತ್ರಿ 8.45ರಿಂದ 10 ಗಂಟೆವರೆಗೆ ನೃತ್ಯರೂಪಕ ನಡೆಸಿಕೊಡುವ ಚಿತ್ರತಾರೆ ಹಾಗೂ ನೃತ್ಯ ಕಲಾವಿದೆ ವಿದ್ವಾನ್ ಸುಧಾಚಂದ್ರನ್ ಅವರಿಗೆ 4.5 ಲಕ್ಷ ರೂ.,
ಸೆ.22ರ ಸಂಜೆ 6 ರಿಂದ 7ಗಂಟೆವರೆಗೆ ಸಿತಾರ್ ಸಾರಂಗಿ ಸಿತಾರ್ ಜುಗಲ್ ಬಂದಿ ನೀಡುವ ಪಂ.ಅಂಕುಶ್‌ನಾಯಕ್, ಉ.ಫಯಾಜ್ ಖಾನ್, ಉ.ರಫಿಕ್ ಖಾನ್‌ರಿಗೆ 2.6 ಲಕ್ಷ ರೂ., ಹಿಂದೂಸ್ತಾನಿ ಸಂಗೀತ ಗಾಯನ ನೀಡುವ ಧಾರವಾಡದ ಖ್ಯಾತ ಹಿಂದೂಸ್ತಾನಿ ಗಾಯಕ ಪದ್ಮಶ್ರೀ ಪಂ.ಎಂ.ವೆಂಕಟೇಶಕುಮಾರ್‌ರಿಗೆ 1.8 ಲಕ್ಷ ರೂ.,
ನೃತ್ಯವೈಭವ ನೀಡುವ ಚೆನ್ನೈನ ನೃತ್ಯ ಕಲಾವಿದೆ ಹಾಗೂ ಖ್ಯಾತ ಚಲನಚಿತ್ರ ತಾರೆ ವಿ.ಶೋಭನಾ ಅವರಿಗೆ 7ಲಕ್ಷ ರೂ., 23ರ ಸಂಜೆ 6 ರಿಂದ 6.45ರವರೆಗೆ ಸಿದ್ದಿ ನೃತ್ಯಯೋಗ ಸಂಗಮ ನೀಡುವ ಬೆಂಗಳೂರಿನ ಖ್ಯಾತ ಭರತನಾಟ್ಯ ಕಲಾವಿದೆ ವಿದ್ವಾನ್ ಯಾಮಿನಿ ಮುತ್ತಣ್ಣ ಅವರಿಗೆ 1.25 ಲಕ್ಷ ರೂ., ಬುದ್ಧಶರಣಂ ನೃತ್ಯ ರೂಪಕ ನಡೆಸಿಕೊಡುವ ಮೈಸೂರಿನ ಗಾನಭಾರತಿ ಸಂಗೀತ ನೃತ್ಯ ಶಾಲೆ ಕಲಾವಿದರಿಗೆ 1 ಲಕ್ಷ ರೂ.,
ಹಿಂದೂಸ್ತಾನಿ ಗಾಯನ ನೀಡುವ ನವ ದೆಹಲಿ ಅಂತಾರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಗಾಯನ ವಿದ್ವಾನ್ ಶುಭಾ ಮುದ್ಗಲ್‌ರಿಗೆ 4.5 ಲಕ್ಷ ರೂ., 24ರ ಸಂಜೆ 6 ರಿಂದ 7ಗಂಟೆವರೆಗೆ ಒಡಿಸ್ಸಿ ನೃತ್ಯ ಪ್ರಸ್ತುತಪಡಿಸುವ ಮುಂಬೈನ ಖ್ಯಾತ ಒಡಿಸ್ಸಿ ನೃತ್ಯ ಕಲಾವಿದ ವಿದ್ವಾನ್ ರುವಿಂದರ್ ಖುರಾನರಿಗೆ 1.5 ಲಕ್ಷ ರೂ., ಸರೋದ್ ವಾದನ ನೀಡುವ ಮೈಸೂರಿನ ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್‌ರಿಗೆ 4 ಲಕ್ಷ ರೂ., ಸೂಫಿ ಸಂಗೀತ ಕಾರ್ಯಕ್ರಮ ನೀಡುವ ಅಮೃತಸರದ ಉ.ಲಕ್ವಿಂದರ್ ವಡಾಲಿಗೆ 4.5ಲಕ್ಷ ರೂ.,
ಸೆ.25ರ ಸಂಜೆ 6 ರಿಂದ 8ಗಂಟೆವರೆಗೆ ಪೊಲೀಸ್ ಬ್ಯಾಂಡ್, ಫ್ಯೂಜನ್ ಸಂಗೀತ ನೀಡುವ ಬೆಂಗಳೂರಿನ ಪಂ.ಪ್ರಕಾಶ್ ಸೊಂಟಕ್ಕಿ ಮತ್ತು ವೃಂದದವರಿಗೆ 2 ಲಕ್ಷ ರೂ. ಸೆ.26ರ ಸಂಜೆ 6 ರಿಂದ 7ಗಂಟೆವರೆಗೆ ಕನ್ನಡ ಡಿಂಡಿಮ ಸುಗಮ ಸಂಗೀತ ನೀಡುವ ಬೆಂಗಳೂರಿನ ಧ್ವನಿ ಸುಗಮ ಸಂಗೀತ ಸಂಸ್ಥೆ ಕಲಾವಿದರಿಗೆ 3 ಲಕ್ಷ ರೂ., ಭರತನಾಟ್ಯ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನೀಡುವ ದೇವಯಾನಿ ಅವರಿಗೆ 2 ಲಕ್ಷ ರೂ.,
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನೀಡುವ ಚೆನ್ನೈನ ಖ್ಯಾತ ಸಂಗೀತಗಾರ ವಿ.ಟಿ.ಎಂ.ಕೃಷ್ಣ ಅವರಿಗೆ 4ಲಕ್ಷ ರೂ., ಸೆ.27ರಂದು ಸಂಜೆ 6 ರಿಂದ 6.45ರವರೆಗೆ ತಾಳವಾದ್ಯ ಕಚೇರಿ ನಡೆಸಿಕೊಡುವ ಬೆಂಗಳೂರಿನ ಅನೂರು ಅನಂತಕೃಷ್ಣ ಅವರಿಗೆ 2 ಲಕ್ಷ ರೂ., ವಿದ್ಯುನ್ಮದನಿಕಾ ನೃತ್ಯರೂಪಕ ನೀಡುವ ಮೈಸೂರಿನ ನಾಟ್ಯಗುರು ವಿ.ವಸುಂಧರಾ ದೊರೆಸ್ವಾಮಿ ಅವರಿಗೆ 1.25 ಲಕ್ಷ ರೂ., ಮುಂಬೈನ ಖ್ಯಾತ ಘಜಲ್ ಗಾಯಕ ಉ.ತಲತ್ ಅಜೀಜ್ ಅವರಿಗೆ 6 ಲಕ್ಷ ರೂ.
ಅರ್ಜುನ್ ಜನ್ಯ ರೆಕಾರ್ಡಿಂಗ್ ಸ್ಟುಡಿಯೋ ಕಾರ್ಯಕ್ರಮಕ್ಕೆ 15.34 ಲಕ್ಷ ಸಂಭಾವನೆ
ಸೆ.28ರಂದು ಸಂಗೀತಗಾಯನ ನೀಡುವ ಪುಣೆಯ ಖ್ಯಾತ ಸಂಗೀತಗಾರ ವಿ.ನಂದಿನಿ ಗುಜಾರ್ ಅವರಿಗೆ 1.25 ಲಕ್ಷ ರೂ., ಹಿಂದೂಸ್ತಾನಿ ಗಾಯನ- ಕೊಳಲು ವಾದನ ಜುಗಲ್ ಬಂದಿ ನೀಡುವ ಬೆಂಗಳೂರಿನ ಪಂ.ಜಯತೀರ್ಥ ಮೇವುಂಡಿ ಹಾಗೂ ಪಂ.ಪ್ರವೀಣ್ ಗೋಡಿಂಡಿ ಅವರಿಗೆ 2.5ಲಕ್ಷ ರೂ., ಕಥಕ್ ನೃತ್ಯ ಕಾರ್ಯಕ್ರಮ ನೀಡುವ ಬೆಂಗಳೂರಿನ ಖ್ಯಾತ ಕಥಕ್ ಕಲಾವಿದ ವಿ.ಮಧು ನಟರಾಜ್‌ರಿಗೆ 1.5 ಲಕ್ಷ ರೂ.,
ಜನಪದ ಸಂಗೀತ ನೀಡುವ ಪಿಚ್ಚಳ್ಳಿ ಶ್ರೀನಿವಾಸ, ಮಳವಳ್ಳಿ ಮಹದೇವಸ್ವಾಮಿ ಸೇರಿದಂತೆ 8ಜನ ಕಲಾವಿದರಿಗೆ 2.25 ಲಕ್ಷ ರೂ. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಯುವ ದಸರಾದಲ್ಲಿ ಸಂಗೀತ ಸಂಜೆ ಕಾರ್ಯಕ್ರ ನೀಡುವ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಓಂ ಶಕ್ತಿ ರೆಕಾರ್ಡಿಂಗ್ ಸ್ಟುಡಿಯೋ ಕಾರ್ಯಕ್ರಮಕ್ಕೆ 15.34 ಲಕ್ಷ ರೂ. ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
MUST WATCH
ಹೊಸ ಸೇರ್ಪಡೆ
Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.