ವಿಮಾನ ನಿಲ್ದಾಣದಲ್ಲಿ ರನ್ ವೇ ವಿಸ್ತರಣೆ ಕಾರ್ಯ ಚುರುಕು
Team Udayavani, Feb 9, 2022, 2:37 PM IST
ಮೈಸೂರು: ನಗರದ ಮಂಡಕಳ್ಳಿ ವಿಮಾನ ನಿಲ್ದಾಣದ ಸಾಮರ್ಥ್ಯ ಹೆಚ್ಚಿಸಿ, ದೊಡ್ಡ ವಿಮಾನಗಳು ಸಂಚಾರ ನಡೆಸಲು ಅನುವಾಗುವಂತೆ ಮಾಡುವ ಸಲುವಾಗಿ ವಿಮಾನ ನಿಲ್ದಾಣದರನ್-ವೇ ಅಕ್ಕ-ಪಕ್ಕದ ಮೈದಾನವನ್ನು ಸಮತಟ್ಟು ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ದೊಡ್ಡ ವಿಮಾನಗಳು ಕಾರ್ಯಾಚರಣೆ ನಡೆಸಲು ಅಗತ್ಯ ರನ್ ವೇ ಇಲ್ಲ. ಹೀಗಾಗಿರನ್ ವೇ ವಿಸ್ತರಣೆ ನಡೆಯುತ್ತಿದ್ದು, ವಿಮಾನ ನಿಲ್ದಾಣದ ರನ್‌ವೇ ಅಕ್ಕ-ಪಕ್ಕದ ಮೈದಾನವನ್ನು ರನ್-ವೇಗಾಗಿ ಸಮತಟ್ಟುಗೊಳಿಸಲಾಗುತ್ತಿದೆ. ವಿಮಾನ ನಿಲ್ದಾಣ ನಿಯಂತ್ರಣ ಪ್ರಾಧಿಕಾರದ ಮಾರ್ಗಸೂಚಿಯಲ್ಲಿ ರನ್‌ವೇ ಎರಡೂ ಬದಿಯಲ್ಲಿ 140 ಮೀಟರ್‌ವರೆಗೂ ಯಾವುದೇ ಗುಂಡಿ ಇರಬಾರದು. ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವಂತೆ ಇರಬೇಕು ಎಂದಿದೆ. ಏಕೆಂದರೆ ವಿಮಾನಗಳು ಇಳಿಯುವ ಸಂದರ್ಭದಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾಗಿ ಆ ಕಡೆ-ಈ ಕಡೆ ಇಳಿದು, ಜಾರಬಾರದು ಎನ್ನುವ ಸುರಕ್ಷತೆದೃಷ್ಟಿಯಿಂದ ಸಮತಟ್ಟು ಮಾಡುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಸದ್ಯ 3 ಪಾರ್ಕಿಂಗ್ ಬೇಸ್‌ಗಳು ರನ್‌ವೇ ವಿಸ್ತರಿಸಲಾಗುತ್ತಿದೆ.
ಮಂಡಕಳ್ಳಿ ವಿಮಾನ ನಿಲ್ದಾಣದ 140 ಮೀಟರ್ ಅಳತೆಯಲ್ಲೇ ಜಾಗ ಸಮತಟ್ಟು ಮಾಡಬೇಕು ಎನ್ನುವಯೋಜನೆಯೊಂದಿಗೆ ಕಾರ್ಯ ಆರಂಭಿಸಲಾಯತು. ಆದರೆ ರನ್-ವೇ ವಿಸ್ತರಣೆಯ ಮಾತುಕತೆಗಳು ಗರಿಗೆದರಿರುವ ಹಿನ್ನೆಲೆಯಲ್ಲಿ ಪೂರ್ಣ ರನ್-ವೇ ಮೈದಾನವನೆಲ್ಲ ಸಮತಟ್ಟು ಮಾಡಲು ಪ್ರಾರಂಭಿಸಲಾಗಿದೆ. ರನ್ ವೇ ವಿಸ್ತರಣೆಗೆ ಹಸಿರುನಿಶಾನೆ ದೊರೆತ ಮೇಲೆ ಆ ಕಾಮಗಾರಿಯೂ ಶುರುವಾಗಿ,ಅದರೊಂದಿಗೆ ಈಗಿರುವ ರನ್ ವೇ ಮೈದಾನವನ್ನು ಸಮತಟ್ಟು ಮಾಡುವ ಕೆಲಸಕ್ಕಿಂತ ಈಗಲೇ ಸಮಯಾವಕಾಶವಿರುವಾಗ ಮಾಡಿಕೊಳ್ಳು ವುದು ಒಳಿತು ಎನ್ನುವ ದೃಷ್ಟಿಯಿಂದ ಕಾಮಗಾರಿ ನಡೆಸಲಾಗುತ್ತಿದೆ.
ಮಂಡಕಳ್ಳಿ ವಿಮಾನ ನಿಲ್ದಾಣದ ರನ್‌ವೇ ಪ್ರದೇಶ ಸುಮಾರು 2-3 ಕಿಲೋ ಮೀಟರ್ ಉದ್ದವಿದೆ. ಹಾಗೇ ರನ್ ವೇ ಪ್ರದೇಶದ ಸುತ್ತಲಿನ ರಸ್ತೆ 8 ಕಿ.ಮೀ.ಗಿಂತಲೂ ಹೆಚ್ಚುಉದ್ದವಿದ್ದು, ಅಷ್ಟೂ ಪ್ರದೇಶವನ್ನು ಸಮತಟ್ಟುಮಾಡಲಾಗುತ್ತಿದೆ. ಮೈಸೂರು- ನಂಜನಗೂಡು ಹೆದ್ದಾರಿಕಡೆಯ ರನ್ ವೇ ಪ್ರದೇಶದಲ್ಲಿ ಸ್ವಲ್ಪ ಇಳಿಜಾರು ಇತ್ತು.ಇದಲ್ಲದೆ ಗಿಡ-ಗಂಟಿಗಳಿಂದ ಆವೃತವಾಗಿತ್ತು. ಪ್ರಸ್ತುತಇವುಗಳನ್ನೆಲ್ಲ ತೆರವುಗೊಳಿಸಿ ಸಮತಟ್ಟು ಮಾಡಲಾಗಿದೆ. ಹಳೇವಿಮಾನ ನಿಲ್ದಾಣ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕಟ್ಟಲಾಗಿದ್ದಕಟ್ಟಡವನ್ನು ನೆಲಸಮ ಮಾಡಲಾಗುತ್ತಿದೆ. ರನ್ ವೇಪ್ರದೇಶದಲ್ಲಿ ಬೆಳೆದು ನಿಂತಿದ್ದ ಗಿಡ-ಗಂಟಿಗಳನ್ನುತೆರವುಗೊಳಿಸಿದ ಬಳಿಕ ವಿಮಾನ ನಿಲ್ದಾಣ ಸುಂದರವಾಗಿ ಕಾಣುತ್ತಿದೆ. ಪರಿಪೂರ್ಣವಾಗಿ ಕಾಮಗಾರಿ ಮುಗಿದರೆ ಸೌಂದರ್ಯ ಮತ್ತಷ್ಟು ಹೆಚ್ಚಾಗಲಿದೆ.
ವಿಮಾನ ನಿಲ್ದಾಣದ ಸಾಮರ್ಥ್ಯ ಹೆಚ್ಚಿಸುವಸಂಬಂಧ ರನ್ ವೇ ಅಕ್ಕಪಕ್ಕದ ಜಾಗವನ್ನುಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದೆ.ಕೆಐಎಡಿಬಿ ಮೂಲಕ ಭೂ ಮಾಲಿಕರಿಗೆ ಎಕರೆಗೆ 1.5ಕೋಟಿ ನೀಡುತ್ತಿದ್ದು, ಭೂ ಸ್ವಾಧೀನಕ್ಕೆ 400 ಕೋಟಿರೂ. ಅಗತ್ಯವಿದೆ. ದೆಹಲಿಯಲ್ಲಿ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಮನವಿಮಾಡಿದ್ದೇನೆ. ಕ್ಯಾಬಿನೆಟ್‌ನಲ್ಲಿ ಅನುಮೋದನೆ ಸಿಗುವ ಭರವಸೆ ಇದೆ. -ಪ್ರತಾಪಸಿಂಹ, ಸಂಸದ
ಭಾರತೀಯ ವಿಮಾನ ನಿಲ್ದಾಣ ನಿಯಂತ್ರಣ ಪ್ರಾಧಿಕಾರಿದ ಮಾರ್ಗಸೂಚಿಯಲ್ಲಿರುವನಿಯಮಗಳ ಅನ್ವಯ ರನ್ ವೇ ಅಕ್ಕಪಕ್ಕ ಸಮತಟ್ಟುಮಾಡುವ ಕೆಲಸ ನಡೆಯುತ್ತಿದೆ. ಇದರೊಂದಿಗೆ ಭವಿಷ್ಯದ ದೃಷ್ಟಿಕೋನ ಇಟ್ಟುಕೊಂಡು ಇಡೀ ರನ್ ವೇ ಪ್ರದೇಶವನ್ನು ಸಮತಟ್ಟು ಮಾಡಲಾಗುತ್ತಿದೆ.ಮುಂದೆ ರನ್ ವೇ ವಿಸ್ತರಣೆಯಾದರೆ ಆಕಾಮಗಾರಿಯನ್ನೂ ಬೇಗನೆ ಮುಗಿಸಿಕೊಳ್ಳಬಹುದು. -ಮಂಜುನಾಥ್, ವಿಮಾನ ನಿಲ್ದಾಣದ ಉಪ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.