ಟಿಪ್ಪು ಪ್ರಭಾವಿತ ಕ್ರೂರಿ, ಕನ್ನಡ ವಿರೋಧಿ: ಸಾಹಿತಿ ಎಸ್.ಎಲ್. ಬೈರಪ್ಪ
ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎನ್ನುವವರು ಟಿಪ್ಪುವಿನ ಸಾಧನೆ ಬಗ್ಗೆ ಓದಿ ತಿಳಿದುಕೊಳ್ಳಲಿ
Team Udayavani, Nov 14, 2022, 6:25 AM IST
ಮೈಸೂರು: ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎನ್ನುವವರು ಟಿಪ್ಪುವಿನ ಕೊಡುಗೆ ಮತ್ತು ಸಾಧನೆ ಏನೆಂಬುದನ್ನು ಓದಿ ತಿಳಿದುಕೊಳ್ಳಲಿ ಎಂದು ಹಿರಿಯ ಸಾಹಿತಿ ಎಸ್.ಎಲ್. ಬೈರಪ್ಪ ಚಾಟಿ ಬೀಸಿದರು.
ಅಯೋಧ್ಯಾ ಪ್ರಕಾಶನದ ಸಹಯೋಗದಲ್ಲಿ ರವಿವಾರ ರಂಗಾಯಣದ ಭೂಮಿಗೀತದಲ್ಲಿ ಆಯೋಜಿಸಲಾಗಿದ್ದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರ “ಟಿಪ್ಪು ನಿಜ ಕನಸುಗಳು’ ನಾಟಕ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಟಿಪ್ಪು ಆಳ್ವಿಕೆ ಮೊದಲು ಮೈಸೂರು ಅರಸರು ಕನ್ನಡದಲ್ಲೇ ಆಡಳಿತ ನಡೆಸುತ್ತಿದ್ದರು. ಟಿಪ್ಪು ಆಡಳಿತ ಆರಂಭವಾದಾಗ ಪರ್ಶಿಯನ್ ಭಾಷೆ ಬಳಕೆಗೆ ಬಂತು. ಆತ ಹಲವು ಊರುಗಳಿಗೆ, ಕಂದಾಯ ಆಡಳಿತ ಪದಗಳಿಗೆ ಪರ್ಯಾಯವಾಗಿ ಪರ್ಶಿಯನ್ ಹೆಸರುಗಳನ್ನು ಇಟ್ಟಿದ್ದು, ಅವು ಇಂದಿಗೂ ಚಾಲ್ತಿಯಲ್ಲಿವೆ ಎಂದು ಹೇಳಿದರು.
ಯಾವುದೇ ಒಂದು ಊರಿನ ಹೆಸರು ಆ ಭಾಗದ ಐತಿಹಾಸಿಕ, ಪರಂಪರೆ ಮತ್ತು ಸಂಸ್ಕೃತಿಯ ಹಿನ್ನೆಲೆ ಹೊಂದಿರುತ್ತವೆ. ಇಂತಹ ಊರಿನ ಹೆಸರುಗಳನ್ನೇ ಬದಲಿಸಿದರೆ ಆ ಭಾಗದ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ನಾಶ ಮಾಡಿದಂತೆ. ಇದೇ ಕೆಲಸವನ್ನು ಟಿಪ್ಪು ಮಾಡಿದ್ದು ಎಂದು ವಿವರಿಸಿದರು.
ಕೀಟಲೆ ಮಾಡುವ ಉದ್ದೇಶದಿಂದಲೇ ಕೆಲವರು ಟಿಪ್ಪು ಜಯಂತಿ ಆಚರಣೆ ಆರಂಭಿಸಿದರು. ಈಗ ಕೆಲವರು 100 ಅಡಿ ಎತ್ತರದ ಟಿಪ್ಪು ಪ್ರತಿಮೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಈ ರೀತಿ ಮಾತನಾಡುವವರು ಅವನ ಕೊಡುಗೆ ಮತ್ತು ಸಾಧನೆ ಬಗ್ಗೆ ತಿಳಿದುಕೊಳ್ಳಬೇಕು. ಮೊನ್ನೆ ಬೆಂಗಳೂರಿನಲ್ಲಿ ಕೆಂಪೇಗೌಡ ಅವರ ಪ್ರತಿಮೆ ಅನಾವರಣ ನೋಡಿ ಈ ರೀತಿ ಹೇಳುತ್ತಿದ್ದಾರೆ.
ಆದರೆ ಕೆಂಪೇಗೌಡರು ಬೃಹತ್ ಬೆಂಗಳೂರು ನಿರ್ಮಾತೃ. ಕುಡಿಯುವ ನೀರಿಗಾಗಿ ನೂರಾರು ಕೆರೆ ಕಟ್ಟಿಸಿ, ವ್ಯವಸ್ಥಿತವಾದ ನಗರ ನಿರ್ಮಾಣ ಮಾಡಿದರು. ಆ ಉದ್ದೇಶಕ್ಕಾಗಿ ಅವರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಆದರೆ ಕ್ರೂರಿ, ಮತಾಂಧ, ಕನ್ನಡ ವಿರೋಧಿಯಾದ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮರಸ್ಯ ವೇದಿಕೆಯ ವಾದಿರಾಜ್ ಮಾತನಾಡಿ, ಐ.ಎಂ. ಮುತ್ತಣ್ಣ, ಡಾ| ಎಸ್.ಎಲ್. ಬೈರಪ್ಪ, ಪ್ರತಾಪ ಸಿಂಹ, ಚಿಮೂ, ಪ್ರಧಾನ ಗುರುದತ್ ಮೊದಲಾದವರು ಟಿಪ್ಪು ನಿಜಸ್ವರೂಪವನ್ನು ಬಯಲಿಗೆ ತರಲು ಶ್ರಮಿಸಿದ್ದಾರೆ. ನಾವು ಬರೆದಿರುವುದು ಕಾಲ್ಪನಿಕ ಅಲ್ಲ, ಆಧಾರ ಯುಕ್ತವಾಗಿದೆ. ಆದರೆ ಸಂಜಯ್ ಖಾನ್ ಕಾಲ್ಪನಿಕ ಎಂದು ಒಪ್ಪಿದರೆ, ಗಿರೀಶ್ ಕಾರ್ನಾಡ್ ಲಾವಣಿ ಕೇಳಿ ಬರೆದೆ ಎಂದು ಜಾರಿಕೊಂಡಿದ್ದರು ಎಂದು ಹೇಳಿದರು.
ಅದ್ಭುತ ರಂಗಕೃತಿ: ರೋಹಿತ್ ಚಕ್ರತೀರ್ಥ
ಚಿಂತಕ ರೋಹಿತ್ ಚಕ್ರತೀರ್ಥ ಮಾತನಾಡಿ, ಇದೊಂದು ಅದ್ಭುತ ರಂಗಕೃತಿ. ಟಿಪ್ಪು ಕುರಿತು ಅನೇಕ ಕೃತಿಗಳು ಹೊರಬಂದಿವೆ. ಆದರೆ ಮೊದಲ ಬಾರಿಗೆ ಬೈರಪ್ಪ ಅವರ ಆವರಣ ಕೃತಿಯನ್ನು ಓದಿದ ಅನೇಕರು ಟಿಪ್ಪುವಿನ ಬಗೆಗಿನ ನಿಲುವನ್ನು ಬದಲಿಸಿಕೊಂಡರು. ಆದರೆ ಕೃತಿ ವಿರುದ್ಧವಾಗಿ ಹೇಳಿಕೆ ನೀಡುವವರ್ಯಾರೂ ಈ ಕೃತಿಯನ್ನು ಓದಿಲ್ಲ. ಇದು ಎಡಪಂಥದ ನಿಲುವು ಎಂದು ಟೀಕಿಸಿದರು.
ಲೇಖಕ ಅಡ್ಡಂಡ ಸಿ. ಕಾರ್ಯಪ್ಪ, ಅಯೋಧ್ಯಾ ಪ್ರಕಾಶನದ ಶಶಾಂಕ್ ಭಟ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.