ತಿ.ನರಸೀಪುರ ಎಪಿಎಂಸಿ ಜೆಡಿಎಸ್‌ ಪಾಲು

Team Udayavani, Feb 22, 2017, 12:20 PM IST

mys1.jpg

ತಿ.ನರಸೀಪುರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ. ಮಂಗಳವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಜೆಡಿಎಸ್‌ ಬೆಂಬಲಿತ ಬಸವನಹಳ್ಳಿ ವೆಂಕಟೇಶ, ಉಪಾಧ್ಯಕ್ಷರಾಗಿ ಮಾಜಿ ಛೇರನ್‌ ಮಹದೇವಯ್ಯ ಆಯ್ಕೆಗೊಂಡರು.

ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಅಧ್ಯಕ್ಷ ಸ್ಥಾನಕ್ಕೆ ಸೋಮನಾಥಪುರ ಕ್ಷೇತ್ರದ ಜೆಡಿಎಸ್‌ ಸದಸ್ಯ ಬಸವನಹಳ್ಳಿ ವೆಂಕಟೇಶ್‌ ಹಾಗೂ ಕಲಿಯೂರು ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ಎಂ.ಕೆ. ಶಂಕರ ನಾಯಕ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಸಲೆ ಕ್ಷೇತ್ರದ ಜೆಡಿಎಸ್‌ ಸದಸ್ಯ ಮಹದೇವಯ್ಯ ಹಾಗೂ ತಲಕಾಡು ಕ್ಷೇತ್ರದ ಕೈ ಸದಸ್ಯೆ ಕೆ.ಎಸ್‌.ಗೌರಮ್ಮ ನಾಮಪತ್ರ ಸಲ್ಲಿಸಿದರು.

ನಂತರ ನಡೆದ ಗುಪ್ತ ಮತದಾನದಲ್ಲಿ 10 ಸದಸ್ಯರ ಮತಗಳನ್ನು ಪಡೆದುಕೊಂಡ ಬಸವನಹಳ್ಳಿ ವೆಂಕಟೇಶ್‌ ಅಧ್ಯಕ್ಷರಾಗಿ ಚುನಾಯಿತರಾದರೆ, 6 ಮತಗಳನ್ನು ಪಡೆದುಕೊಂಡ ಎಂ.ಕೆ. ಶಂಕರನಾಯಕ ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನ ಸ್ಪರ್ಧಿಗಳಾಗಿದ್ದ ಮಹದೇವಯ್ಯ ಮತ್ತು ಕೆ.ಎಸ್‌.ಗೌರಮ್ಮ ಅವರಿಬ್ಬರೂ ತಲಾ ಎಂಟೆಂಟು ಮತ ಗಳನ್ನು ಪಡೆದುಕೊಂಡಿದ್ದರಿಂದ ಆಯ್ಕೆಗೆ ಲಾಟರಿ ಎತ್ತಲಾಯಿತು.

ಲಾಟರಿಯಲ್ಲಿ ಮಹದೇವಯ್ಯ ಅವರಿಗೆ ಅದೃಷ್ಟ ಒಲಿದ್ದರಿಂದ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯಲ್ಲಿ ಎಪಿಎಂಸಿಯ 16 ಮಂದಿ ಸದಸ್ಯರೆಲ್ಲರೂ ಭಾಗವಹಿಸಿದ್ದರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್‌ ಬಿ. ಶಂಕರಯ್ಯ, ಸಹಾಯಕ ಚುನಾವಣಾಧಿಕಾರಿಯಾಗಿ ಪ್ರಭುರಾಜ್‌, ಪ್ರಭಾರ ಕಾರ್ಯದರ್ಶಿ ಎಂ.ಎನ್‌. ಶಿವಕುಮಾರ್‌ ಕಾರ್ಯನಿರ್ವಹಿಸಿದರು. ಫ‌ಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಜೆಡಿಎಸ್‌ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. 

ಸೋಮನಾಥಪುರ ಜಿಪಂ ಕ್ಷೇತ್ರದ ಸದಸ್ಯ ಎಂ.ಅಶ್ವಿ‌ನ್‌ಕುಮಾರ್‌, ಮಾಜಿ ಅಧ್ಯಕ್ಷ ಎಸ್‌.ಎನ್‌.ಸಿದ್ಧಾರ್ಥ, ಜೆಡಿಎಸ್‌ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಕಾರ್ಯಾಧ್ಯಕ್ಷ, ಎಚ್‌ಡಿಕೆ ಅಭಿಮಾನಿ ಬಳಗ ರಾಜಾಧ್ಯಕ್ಷ ಬಿ.ಆರ್‌. ಮಂಜುನಾಥ್‌, ಜಿಲ್ಲಾ ಉಪಾಧ್ಯಕ್ಷ ಕಾರ್ಗಳ್ಳಿ ಶಿವಸ್ವಾಮಿ, ಸಾಮ್ರಾಟ್‌ ಸುಂದರೇಶನ್‌, ಎಪಿಎಂಸಿ ಸದಸ್ಯರಾದ ಜಗದಾಂಬ,

ಹೊಂಬಾಳಯ್ಯ, ಎನ್‌.ಆರ್‌.ರಾಜೇಶ್‌, ಕೃಷ್ಣೇಗೌಡ, ಪುರಸಭಾ ಮಾಜಿ ಉಪಾಧ್ಯಕ್ಷ ಪಾರ್ಥಸಾರತಿ, ಮಾಜಿ ಸದಸ್ಯ ಡಾ.ಬಿ.ಕೆ.ಜಾನಪ್ರಕಾಶ್‌, ತಾ.ಪಂ ಸದಸ್ಯ ಬಿ.ಸಾಜಿದ್‌ ಅಹಮ್ಮದ್‌, ಮಾಜಿ ಅಧ್ಯಕ್ಷ ಅತ್ತಹಳ್ಳಿ ಕುಮಾರಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಡಿ.ಶಿವು, ಮುಖಂಡರಾದ ಮೇಗಡಹಳ್ಳಿ ಶಿವಕುಮಾರ್‌, ನಾಗಾರ್ಜುನ, ಸರ್ದಾರ್‌ ಪಾಷ, ರಾಧಾಕೃಷ್ಣ, ವೈ.ಕೆ.ನವೀನ, ಮಹೇಶ ನೂರಾರು ಜೆಡಿಎಸ್‌ ಕಾರ್ಯಕರ್ತರು ಹಾಜರಿದ್ದರು.

ಕಾಂಗ್ರೆಸ್ಸಿಗರೇ ಕೈ ಕೊಟ್ಟರು!
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಐವರು ಕೃಷಿಕರ ಕ್ಷೇತ್ರದ ಸದಸ್ಯ, ಮೂವರು ನಾಮ ನಿರ್ದೇಶಿತರು ಹಾಗೂ ಟಿಎಪಿಸಿಎಂಸ್‌ನ ಪ್ರತಿನಿಧಿಯಿದ್ದರೂ ಕಾಂಗ್ರೆಸ್‌ಗೆ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಕೃಷಿಕರ ಕ್ಷೇತ್ರದ ಕಾಂಗ್ರೆಸ್‌ ಸದಸ್ಯರಿಬ್ಬರೂ ಕೈ ಕೊಟ್ಟದ್ದರಿಂದ ಅಧಿಕಾರ ಕೈ ತಪ್ಪಿ, ಜೆಡಿಎಸ್‌ ಪಾಲಾಗಿದೆ.

ಜೆಡಿಎಸ್‌ನ ಐವರು ಕೃಷಿಕರ ಕ್ಷೇತ್ರದ ಸದಸ್ಯರು ಸೇರಿದಂತೆ ಓರ್ವ ಬಿಜೆಪಿ ಸದಸ್ಯೆ, ವರ್ತಕರ ಕ್ಷೇತ್ರದ ಸದಸ್ಯ ಮತ್ತು ಟಿಎಪಿಸಿಎಂಎಸ್‌ ಪ್ರತಿನಿಧಿ ಹಾಗೂ ಇಬ್ಬರು ಕೈ ಸದಸ್ಯರ ಬೆಂಬಲವನ್ನು ಪಡೆಯಲು ತಂತ್ರಗಾರಿಕೆ ರೂಪಿಸಿ ಸಿಎಂ ಸಿದ್ದರಾಮಯ್ಯ ಮತ್ತು ಪ್ರಭಾವಿ ಸಚಿವರಾಗಿರುವ ಡಾ. ಎಚ್‌.ಸಿ. ಮಹದೇವಪ್ಪ ಅವರಿಗೆ ಸೆಡ್ಡು ಹೊಡೆದು ಅಧಿಕಾರ ಹಿಡಿಯುವಲ್ಲಿ ಜೆಡಿಎಸ್‌ ಸಫ‌ಲವಾಗಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಬ್ಬರನ್ನೂ ಮಾಜಿ ಶಾಸಕ ಡಾ. ಎನ್‌.ಎಲ್‌. ಭಾರತೀಶಂಕರ್‌ ಅಭಿನಂದಿಸಿದ್ದು ವಿಶೇಷವಾಗಿತ್ತು.

ಟಾಪ್ ನ್ಯೂಸ್

musk

Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್‌

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಮೃತ್ಯು

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

musk

Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್‌

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.