ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್: ಸೋಮಶೇಖರ್
Team Udayavani, May 6, 2021, 5:08 PM IST
ಮೈಸೂರು: ಕೋವಿಡ್ ಪಾಸಿಟಿವ್ ಆದವರು ಮನೆಯಿಂದ ಹೊರಗೆ ಬಂದರೆ ಅವರ ವಿರುದ್ಧ ಎಫ್ ಐಆರ್ ವಿಧಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಟೆಸ್ಟ್ ಕೊಟ್ಟು ಪಾಸಿಟಿವ್ ಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಅಂತವರ ಲೊಕೇಶನ್ ಪತ್ತೆ ಹಚ್ಚಬೇಕೆಂದು ಪೊಲೀಸರಿಗೆ ಸೂಚನೆ ನೀಡಿದರು.
ಲಾಕ್ ಡೌನ್ ಸಂಪೂರ್ಣ ಯಶಸ್ವಿಯಾಗಿದೆ. ಆದರೆ ಬೆಳಿಗ್ಗೆ 06 ರಿಂದ 10 ಗಂಟೆವರೆಗೆ ಅವಕಾಶ ನೀಡಿರುವುದು ಮಾತ್ರ ಎಡವಟ್ಟಾಗಿದೆ. ಪ್ರತಿದಿನವೂ ತರಕಾರ ಅಂಗಡಿ ಓಪನ್ ಆಗುತ್ತಿವೆ. ಆದರೆ ಜನ ವರ್ಷಪೂರ್ತಿ ಲಾಕ್ ಡೌನ್ ಆಗಿದೆಯೆನೋ ಎನ್ನುವ ಹಾಗೆ ಕ್ಯೂ ನಿಲ್ಲುತ್ತಿರೋದು ಸಮಸ್ಯೆಯಾಗಿದೆ ಎಂದು ಕಳವಳ ವ್ತಕ್ತಪಡಿಸಿದರು.
ಇದನ್ನೂ ಓದಿ:ತನ್ನ ಎಲ್ಲಾ ಚಾಲಕರಿಗೆ ಲಸಿಕೆಗಾಗಿ ಪ್ರೋತ್ಸಾಹ ಧನ ನೀಡಲು ಮುಂದಾದ ಉಬರ್ !
ಮೇ.14ರ ವರೆಗೂ ಈ ನಿಯಮವೇ ಮುಂದುವರೆಯುತ್ತದೆ. ಮೇ13 ರ ಸಂಜೆ ಮುಂದೆ ಏನು ಮಾಡಬೇಕು ಎನ್ನುದನ್ನ ಸಿಎಂ ತಿರ್ಮಾನ ಮಾಡುತ್ತಾರೆ ಎಂದರು.
ಮೈಸೂರಿನ ವರ್ತಕರು, ಪೊಲೀಸರು, ಸಂಘ ಸಂಸ್ಥೆಯವರು ಸೇರಿದಂತೆ ಹಲವರಿಂದ ನಾನೂ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇನೆ. ಮೈಸೂರಿಗೆ ಏನು ಬೇಕು ಬೇಡ ಅನ್ನೋದನ್ನ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಗಮನಕ್ಕೆ ತರುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.