ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಸಮ್ಮೇಳನ ಇಂದು
Team Udayavani, Jun 13, 2017, 1:14 PM IST
ಮೈಸೂರು: ಕೇಂದ್ರ ಸರ್ಕಾರ ಮೂರು ವರ್ಷ ಪೂರೈಸಿರುವ ಹಿನ್ನೆಲೆ ಬಿಎಸ್‌ಎನ್‌ಎಲ್ ಪ್ರಾಯೋಜಕತ್ವದಲ್ಲಿ ಮಂಗಳವಾರ ಮೈಸೂರಿನಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ದೂರ ಸಂಪರ್ಕ ಜಿಲ್ಲೆಯ ಪ್ರಧಾನ ವ್ಯವಸ್ಥಾಪಕ ಕೆ.ಎಲ್.ಜಯರಾಂ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳವಾರ ಮಧ್ಯಾಹ್ನ 2.30ಕ್ಕೆ ಕಲಾಮಂದಿರದಲ್ಲಿ ನಡೆಯುವ ಸಮ್ಮೇಳನದಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಹಾಗೂ ಸ್ವಾಮಿ ವಿವೇಕಾನಂದಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ.ಆರ್.ಬಾಲಸುಬ್ರಮಣಿಯಮ್ ಸಂಪನ್ಮೂಲ ವ್ಯಕ್ತಿಗಳಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಜತೆಗೆ ಕೇಂದ್ರ ಸರ್ಕಾರದ ಮೂರು ವರ್ಷಗಳ ಸಾಧನೆಯ ವೀಡಿಯೋ ಪ್ರದರ್ಶನವು ಇರಲಿದೆ ಎಂದರು.
ಕೇಂದ್ರ ಸರ್ಕಾರ ಮೂರು ವರ್ಷ ಪೂರೈಸಿರುವ ಹಿನ್ನೆಲೆ ಮೇ 27 ರಿಂದ ಜೂನ್ 15ರ ವರೆಗೆ ದೇಶದ 584 ಕಡೆಗಳಲ್ಲಿ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಮೈಸೂರಿನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ 83 ಕಚೇರಿಗಳು, ಕಾರ್ಖಾನೆಗಳು ಇರುವುದರಿಂದ ಬಿಎಸ್‌ಎನ್‌ಎಲ್ ಪ್ರಾಯೋಜಕತ್ವದಲ್ಲಿ ಈ ಸಮ್ಮೇಳನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಕೇಂದ್ರೀತ: ಹಿಂದೆಲ್ಲಾ ಅಭಿವೃದ್ಧಿ ನಗರ ಕೇಂದ್ರೀತವಾಗಿತ್ತು. ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಇದೀಗ ಅಭಿವೃದ್ಧಿಗೆ ಗ್ರಾಮೀಣ ಪ್ರದೇಶವನ್ನು ಕೇಂದ್ರೀಕರಿಸಲಾಗಿದೆ. ಗ್ರಾಮೀಣ ಪ್ರದೇಶಗಳಿಗೂ ಗುಣಮಟ್ಟದ ಬ್ರಾಡ್‌ಬ್ಯಾಂಡ್ ಸಂಪರ್ಕ ಸೌಲಭ್ಯ ಒದಗಿಸಬೇಕು ಎಂಬುದು ನಮ್ಮ ಧ್ಯೇಯ ಎಂದರು.
ಹೈಸ್ಪೀಡ್ ಇಂಟರ್‌ನೆಟ್ ಬ್ರಾಡ್‌ಬ್ಯಾಂಡ್ ಸೌಲಭ್ಯದಿಂದಾಗಿ ಮನೆಬಾಗಿಲಿಗೆ ಮಾಹಿತಿ ತಲುಪುತ್ತಿದೆ. ಜಿಲ್ಲೆಯ 355 ಗ್ರಾಪಂಗಳಿಗೂ ಹೈಸ್ಪೀಡ್ ಬ್ರಾಡ್ ಬ್ಯಾಂಡ್ ಸೌಲಭ್ಯ ಕಲ್ಪಿಸಲಾಗಿದ್ದು, ಈ ತಿಂಗಳಾಂತ್ಯದೊಳಗೆ ಉಳಿದ 49 ಪಂಚಾಯ್ತಿಗಳಿಗೂ ಬ್ರಾಡ್‌ಬ್ಯಾಂಡ್ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕೇರಳ ಗಡಿಯಲ್ಲಿ ಬರುವ ಎಚ್.ಡಿ.ಕೋಟೆ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬರುವ ಡಿ.ಬಿ.ಕುಪ್ಪೆ ಗ್ರಾಪಂಗೆ ಹೈಸ್ಪೀಡ್ ಬ್ರಾಡ್ ಬ್ಯಾಂಡ್ ಸೌಲಭ್ಯ ಕಲ್ಪಿ$ಸಿದ್ದು, ಸುಮಾರು 15 ದಿನಗಳ ಕಾಲ ಈ ಸೇವೆಯ ಗುಣಮಟ್ಟವನ್ನು ಪರೀಕ್ಷಿಸಿದ ಬೆಂಗಳೂರಿನ ಐಐಎಂಬಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೆಪ ಹೇಳ್ತಾರೆ: ಗ್ರಾಪಂಗಳಿಗೆ ನೀಡಲಾಗಿರುವ ಬ್ರಾಡ್‌ಬ್ಯಾಂಡ್ ಸಂಪರ್ಕ ಉತ್ತಮವಾಗಿದ್ದರೂ ಕೆಲಸ ಮಾಡಲು ಇಚ್ಚಿಸದ ಅಧಿಕಾರಿಗಳು, ಸಿಬ್ಬಂದಿ ಸರ್ವರ್ ಇಲ್ಲ, ವಿದ್ಯುತ್ ಇಲ್ಲ ಎಂದು ನೆಪ ಹೇಳಿ ಜನರನ್ನು ಅಲೆಸುತ್ತಾ ಬಿಎಸ್‌ಎನ್‌ಎಲ್‌ಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಹೇಳಿದರು.
ಎಫ್ಟಿಎಚ್ ಸಂಪರ್ಕ: 2019ರೊಳಗೆ ರಸ್ತೆ ಬದಿಗಳಲ್ಲಿ ಜೋತು ಬಿಡಲಾಗಿರುವ ಬ್ರಾಡ್‌ಬ್ಯಾಂಡ್ ಕೇಬಲ್‌ಗಳನ್ನು ತಪ್ಪಿಸಬೇಕು ಎಂದು ಕಾರ್ಯಪ್ರವೃತ್ತವಾಗಿದ್ದು, ಬಳಕೆದಾರರ ಮನೆಬಾಗಿಲಿಗೆ ಫೈಬರ್ ಟೂ ಹೋಮ್ ಸೇವೆ ಮೂಲಕ ವೈಫೈ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಮೈಸೂರು ನಗರದಲ್ಲಿ ತಿಂಗಳಿಗೆ 300 ರಿಂದ 400 ಸಂಪರ್ಕಗಳನ್ನು ನೀಡಲಾಗುತ್ತಿದ್ದು, ಇದನ್ನು ಸಾವಿರಕ್ಕೆ ಹೆಚ್ಚಿಸುವ ಉದ್ದೇಶವಿದೆ. ಸದ್ಯ ಮೈಸೂರು ದೂರ ಸಂಪರ್ಕ ಜಿಲ್ಲೆಯಲ್ಲಿ ಇರುವ 25 ಸಾವಿರ ಬ್ರಾಡ್‌ಬ್ಯಾಂಡ್ ಸಂಪರ್ಕಗಳನ್ನು ಎಫ್ಟಿಎಚ್‌ಗೆ ಪರಿವರ್ತಿಸುವ ಕೆಲಸ ನಡೆಯುತ್ತಿದ್ದು, ಈಗಾಗಲೇ 3 ಸಾವಿರ ಎಫ್ಟಿಎಚ್ ಸಂಪರ್ಕ ನೀಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶಕ್ಕೆ ಬ್ರಾಡ್‌ಬ್ಯಾಂಡ್ ಸೌಲಭ್ಯ ಕಲ್ಪಿಸಲು ಬಿಎಸ್‌ಎನ್‌ಎಲ್ ಸಿದ್ಧವಿದ್ದರೂ ಬೇರೆ ಬೇರೆ ಇಲಾಖೆಗಳ ಸಹಕಾರ ಸಿಗುತ್ತಿಲ್ಲ. ಜತೆಗೆ ರಸ್ತೆಯಡಿ ಫೈಬರ್ ಕೇಬಲ್ ಅಳವಡಿಕೆಗೆ ನಗರದ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ದರ ನಿಗದಿಪಡಿಸಿರುವುದರಿಂದಲೂ ಹಿನ್ನಡೆಯಾಗುತ್ತಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.