ಯಂತ್ರಗಳ ಕೈಗೆ ಬುದ್ಧಿ ಕೊಡಬೇಡಿ: ಸದ್ಗುರು
Team Udayavani, Jan 26, 2019, 9:56 AM IST
ಮೈಸೂರು: ಇಂದಿನ ಯಾತ್ರಿಕ ಯುಗದಲ್ಲಿ ನಾವು ಯಂತ್ರಗಳಿಗೆ ದಾಸರಾಗದೆ, ನಮ್ಮ ಜ್ಞಾಪಕಶಕ್ತಿ ಮತ್ತು ಆಲೋಚನಾ ಶಕ್ತಿಯಿಂದ ಉತ್ತಮ ಕೆಲಸ ಮಾಡಬೇಕು ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದರು.
ನಗರದ ಮಹಾಜನ ವಿದ್ಯಾಸಂಸ್ಥೆ ಸ್ಥಾಪಿಸಿರುವ ಸಂಸ್ಥಾಪಕರಾದ ಅಂಬಳೆ ಸುಬ್ರಹ್ಮಣ್ಯ ಅಯ್ಯರ್ ಹಾಗೂ ವಿದ್ಯಾದಾನಿ ರಟ್ಟೆಹಳ್ಳಿ ರಾಮಪ್ಪ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.
ಮನುಷ್ಯನಿಗಿಂತಲು ಯಂತ್ರಗಳು ವೇಗವಾಗಿ ಕೆಲಸ ಮಾಡುತ್ತವೆ. ಈ ಕಾರಣದಿಂದಾಗಿಯೇ ಇಂದು ಎಲ್ಲರ ಕೈಯಲ್ಲೂ ಸ್ಮಾರ್ಟ್ ಮೊಬೈಲ್‌ಗಳು ಬಂದಿವೆ. ಗೂಗಲ್‌ನಲ್ಲಿ ಹುಡುಕಿದರೆ ಎಲ್ಲಾ ವಿಷಯವೂ ತಿಳಿಯುತ್ತದೆ. ಹೀಗಾಗಿ ಜನರು ಮಾಹಿತಿಗಳನ್ನು ತಲೆಯಲ್ಲಿರಿಸಿಕೊಳ್ಳದೆ, ಯಂತ್ರಗಳಲ್ಲಿ ಇರಿಸುತ್ತಿದ್ದಾರೆ. ಆದರೆ, ಮಾಹಿತಿಯೇ ನಿಜವಾದ ಬುದ್ಧಿಮತ್ತೆಯಲ್ಲ. ಅದು ಕೇವಲ ದತ್ತಾಂಶವಷ್ಟೇ. ನಮ್ಮಲ್ಲಿರುವ ಜ್ಞಾಪಕ ಶಕ್ತಿ ಮತ್ತು ಆಲೋಚನಾ ಶಕ್ತಿಯನ್ನು ಬಳಸಿದರೆ ಉತ್ತಮ ಎಂದರು. ತಮ್ಮ ಶಾಲಾ ದಿನಗಳಲ್ಲಿ ಆಗ ತಾನೇ ಪರಿಚಯವಾಗಿದ್ದ ಕ್ಯಾಲ್ಕಲೇಟರ್‌ನ ಕಾರ್ಯವೈಖರಿಯನ್ನು ಕಂಡು ಶಾಲೆಯಲ್ಲಿ ಗಣಿತವನ್ನು ಕಷ್ಟಪಟ್ಟು ಏಕೆ ಕಲಿಯಬೇಕು ಎನಿಸಿತ್ತು ಎಂದರು.
ಅಮೆರಿಕದಲ್ಲಿ ತಂತ್ರಜ್ಞಾನದ ದಾಸರಾಗಿರುವವರನ್ನು ಸರಿಪಡಿಸಲು ಕೆಲವು ಕೇಂದ್ರ ಸ್ಥಾಪಿಸಲಾಗಿದೆ. ಭಾರತದಲ್ಲಿ ಆ ರೀತಿ ಆಗುವುದು ಬೇಡ. ನಾವು ಮೊದಲು ನಮ್ಮನ್ನು ನಮಗೆ ಬೇಕಾದಂತೆ ನಡೆಸಿಕೊಳ್ಳುವಂತೆ ಮಾಡಿಕೊಳ್ಳಬೇಕು. ಏಕೆಂದರೆ, ನಮ್ಮ ಮನೆಯಲ್ಲಿಯೇ ನೂರು ಭಾಗ ನಮ್ಮಂತೆಯೇ ನಡೆಯುವುದಿಲ್ಲ ಎಂದು ಹೇಳಿದರು.
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಬಿ.ಎಸ್.ರವಿಕುಮಾರ್, ರಟ್ಟೆಹಳ್ಳಿ ರಾಮಪ್ಪ ಅವರ ಮೊಮ್ಮಗ ಡಾ.ಆರ್.ಎನ್.ಅಶೋಕ್, ಮಹಾಜನ ವಿದ್ಯಾಸಂಸ್ಥೆ ಅಧ್ಯಕ್ಷ ಆರ್. ವಾಸುದೇವಮೂರ್ತಿ, ಗೌರವ ಕಾರ್ಯದರ್ಶಿ ಡಾ.ಟಿ.ಜಯಲಕ್ಷ್ಮೀ ಮುರಳೀಧರ್, ಉಪಾಧ್ಯಕ್ಷ ಟಿ.ಮುರಳೀಧರ ಭಾಗವತ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.