ಸಲಗ ದಾಳಿ: ಕಾಫಿ ತೋಟ ನಾಶ
Team Udayavani, Jun 10, 2018, 12:43 PM IST
ಹುಣಸೂರು: ನಾಗರಹೊಳೆ ಉದ್ಯಾನದಂಚಿನಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಬೆಳೆ ನಷ್ಟ, ಪಂಪ್‌ಸೆಟ್ ಹಾನಿಯಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಶನಿವಾರ ಬೆಳಗಿನ ಜಾವ ಸಲಗವೊಂದು ದಾಂಗುಡಿ ಇಟ್ಟು ಬಿಲ್ಲೇನ ಹೊಸಹಳ್ಳಿಯಲ್ಲಿ ದಾಂಧಲೆ ನಡೆಸಿದೆ.
ಅಪ್ಪಣ್ಣರಿಗೆ ಸೇರಿದ 5 ಎಚ್.ಪಿ.ಸಾಮರ್ಥ್ಯದ ಪಂಪ್‌ಸೆಟ್‌ನ ಶೆಡ್ ಹಾಗೂ ಪಂಪ್ ಸೆಟ್‌ನ ಉಪಕರಣ, ಹನಿ ನೀರಾವರಿ ಪೈಪ್‌ಗ್ಳನ್ನು ತುಳಿದು ನಾಶ ಪಡಿಸಿದೆ. ಕಾಫಿ ತೋಟ, ಶುಂಠಿ, ಜೋಳದ ಬೆಳೆಯೊಳಗೆ ಅಡ್ಡಾಡಿ ಸಾಕಷ್ಟು ಬೆಳೆ ನಷ್ಟ ಉಂಟುಮಾಡಿದೆ. ಅಲ್ಲದೆ ಶಂಕರ್, ಪಾಲಾಕ್ಷ,ರಾಜಶೆಟ್ಟಿರಿಗೆ ಸೇರಿದ ಹಲಸಿನ ಮರವನ್ನು ಸಿಗಿದಿದೆ,
ಪೊನ್ನಪ್ಪ, ವಾಸುರಿಗೆ ಸೇರಿದ ಜೋಳದ ಬೆಳೆಯನ್ನು ತುಳಿದು ಹಾಳು ಮಾಡಿದ್ದು, ಲಕ್ಷಾಂತರ ರೂ ನಷ್ಟ ಉಂಟಾಗಿದೆ. ಬಿಲ್ಲೇನಹೊಸಹಳ್ಳಿ, ಕೆ.ಜಿ.ಹಬ್ಬನಕುಪ್ಪೆ ಗ್ರಾಮದಲ್ಲಿ ಶನಿವಾರ ಮುಂಜಾನೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಲು ಅನುವಾಗುತ್ತಿದ್ದಂತೆ ಒಂಟಿ ಸಲಗ ಕಾಣಿಸಿಕೊಂಡಿದೆ.
ಗಾಬರಿಗೊಂಡ ಗ್ರಾಮಸ್ಥರು ಜಿಟಿ-ಜಿಟಿ ಮಳೆ ನಡುವೆಯೇ ಆನೆಯನ್ನು ಕಾಡಿಗಟ್ಟಲು ಅನುವಾಗುತ್ತಿದ್ದಂತೆ ರೈತರ ಕಣ್ಮಂದೆಯೇ ಪಂಪ್‌ಸೆಟ್ ಹಾಗೂ ಪೈಪ್‌ಗ್ಳನ್ನು ನಾಶಪಡಿಸಿತು. ಅತ್ತಿಂದಿತ್ತಾ ಅಡ್ಡಾಡುತ್ತಾ ಮುಸುಕಿನ ಜೋಳ, ಶುಂಠಿ ಬೆಳೆ, ಹಲಸು, ಕಾಫಿ ತೋಟವನ್ನು ಹಾಳು ಮಾಡಿತು. ಕೊನೆಗೆ ಹರಸಾಹಸ ಪಟ್ಟು ಕಾಡಿಗಟ್ಟುವಲ್ಲಿ ಯಶಸ್ವಿಯಾದರು. ಕಚುವಿನಳ್ಳಿ ವನಪಾಲಕ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಪ್ರತಿಭಟನೆ ಎಚ್ಚರಿಕೆ: ಅರಣ್ಯ ಇಲಾಖೆ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರ ಬರದಂತೆ ನೋಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಶೀಘ್ರ ಪರಿಹಾರದ ಜೊತೆಗೆ ರೈಲ್ವೆ ಕಂಬಿ ಬೇಲಿ ನಿರ್ಮಿಸಲು ಮುಂದಾಗದಿದ್ದಲ್ಲಿ ಹಾಗೂ ಆನೆಗಳ ಹಾವಳಿ ನಿಯಂತ್ರಿಸದಿದ್ದಲ್ಲಿ ಆ ಭಾಗದ ರೈತರು ಹುಣಸೂರು ವನ್ಯ ಜೀವಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.