ಮೈಸೂರು ಜಿಲ್ಲೆಯ 9ನೇ ತಾಲೂಕಾಗಿ ಸಾಲಿಗ್ರಾಮ ಅಸ್ತಿತ್ವಕ್ಕೆ
ಸಾಲಿಗ್ರಾಮ ತಾಲೂಕಿನ ಜನತೆಗೆ ಹೊಸವರ್ಷದ ಉಡುಗೊರೆ ನೂತನ ತಾಲೂಕಿಗೆ ಚುಂಚನಕಟ್ಟೆ, ಮಿರ್ಲೆ ಹೋಬಳಿ ಸೇರ್ಪಡೆ
Team Udayavani, Jan 4, 2021, 2:28 PM IST
ಕೆ.ಆರ್.ನಗರ: ಸಾಲಿಗ್ರಾಮ ನೂತನ ತಾಲೂಕು ಅಸ್ತಿತ್ವಕ್ಕೆ ಬಂದಿದ್ದು, ಈ ಸಂಬಂಧ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ತಾಲೂಕು ರಚನೆ ಆಗಿರುವ ಬಗ್ಗೆ ಡಿ.31ರಂದು ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ರಾಜರ್ಷಿ ಆದೇಶ ಮಾಡಿದ್ದು, ಇದು ಸಾಲಿಗ್ರಾಮ ತಾಲೂಕಿನ ಜನರಿಗೆ ಹೊಸ ವರ್ಷದ ಕೊಡುಗೆಯಾಗಿದೆ.
ಕೆ.ಆರ್.ನಗರ ತಾಲೂಕಿನಿಂದ ಚುಂಚನಕಟ್ಟೆ, ಸಾಲಿಗ್ರಾಮ ಮತ್ತು ಮಿರ್ಲೆ ಹೋಬಳಿಗಳನ್ನು ಬೇರ್ಪಡಿಸಿ ಸಾಲಿಗ್ರಾಮವನ್ನು ಕೇಂದ್ರ ವನ್ನಾಗಿಸಿ ತಾಲೂಕು ರಚನೆ ಮಾಡಲಾಗಿದ್ದು, ಮುಂದೆ ಸಾಲಿಗ್ರಾಮಜಿಲ್ಲೆಯ 9ನೇ ತಾಲೂಕಾಗಿ ಕಾರ್ಯನಿ ರ್ವಹಿಸಲಿದೆ.ಶಾಸಕ ಸಾ.ರಾ.ಮಹೇಶ್ ಅವರ ಸತತ ಪ್ರಯತ್ನದ ಫಲವಾಗಿಸಾಲಿಗ್ರಾಮ ತಾಲೂಕು ರಚನೆಯಾಗಿದ್ದು, ಅವರು ರೇಷ್ಮೆ ಮತ್ತುಪ್ರವಾಸೋದ್ಯಮ ಸಚಿವರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಮಾಡಿದ ಮನವಿಯ ಮೇರೆಗೆ ಆಸರ್ಕಾರ ನೂತನ ತಾಲೂಕು ರಚನೆಗೆ ನಿರ್ಧಾರ ಮಾಡಿತ್ತು.
ಸಾಲಿಗ್ರಾಮ ವ್ಯಾಪ್ತಿಯ ಹಳ್ಳಿಗಳು: ಹೊಸ ತಾಲೂಕಿನ ವ್ಯಾಪ್ತಿಗೆ ತಾಲೂಕು ಕೇಂದ್ರ ಸಾಲಿಗ್ರಾಮ ಸೇರಿದಂತೆ ಆ ಹೋಬಳಿಯಬಳ್ಳೂರು, ಬೈಲಾಪುರ, ಅಂಕನಹಳ್ಳಿ, ಮೂಡಲಬೀಡು, ಕಳ್ಳಿಮುದ್ದನಹಳ್ಳಿ, ರಾಂಪುರ, ಕರ್ಪೂರವಳ್ಳಿ, ಎಲಾದಹಳ್ಳಿ, ಮುಂಡೂರು, ದೊಡ್ಡಕೊಪ್ಪಲು, ಸಾಲುಕೊಪ್ಪಲು, ಬಸವರಾಜಪುರ, ಕುಲುಮೆಹೊಸೂರು,ಸಂಕನ ಹಳ್ಳಿ, ಹೊನ್ನೇನಹಳ್ಳಿ, ದಡದಹಳ್ಳಿ, ಮಾದಾಪುರ, ಕೆಡಗ, ಹರದನ ಹಳ್ಳಿ, ಲಕ್ಕಿಕುಪ್ಪೆ, ಲಕ್ಕಿಕುಪ್ಪೆಕೊಪ್ಪಲು, ಶೀಗವಾಳು, ಸುಬ್ಬೇಗೌಡನಕೊಪ್ಪಲು, ಕಾಳಮ್ಮನಕೊಪ್ಪಲು, ಕಳ್ಳಿಕೊಪ್ಪಲು, ಪುಟ್ಟತಿಮ್ಮನಕೊಪ್ಪಲು, ಬೆಟ್ಟಹಳ್ಳಿ, ಮಲುಗನಹಳ್ಳಿ, ಬಕ್ರೆಹಳ್ಳದಕಾವಲು, ಬೆಟ್ಟಹಳ್ಳಿಕಾವಲು,ಗಾಯನಹಳ್ಳಿ, ಮಾವನೂರು, ಪಶುಪತಿ, ಪಶುಪತಿಕೊಪ್ಪಲು, ಚಿಕ್ಕ ನಾಯಕನಹಳ್ಳಿ, ಲಕ್ಷ್ಮೀಪುರ, ಹೆಬ್ಬೂರು, ಸರಗೂರು, ಗುಮ್ಮನಹಳ್ಳಿ ಮತ್ತು ಬೇವಿನಹಳ್ಳಿ ಒಳಪಡಲಿವೆ.
ಚುಂಚನಕಟ್ಟೆ: ಚುಂಚನಕಟ್ಟೆ ಹೋಬಳಿಯ ಶ್ರೀರಾಮಪುರ, ಹೊಸಕೋಟೆ, ಹೊಸಕೋಟೆಕೊಪ್ಪಲು, ಕರ್ತಾಳು, ತಂದ್ರೆ, ವಲ್ಲಂಬೂದಿ, ಅಬ್ಬೂರು, ಹುಲ್ಲೆಹೊಸೂರು, ಚಿಬುಕಹಳ್ಳಿ, ಕೋಗಿಲೂರು, ಬೆಣಗನ ಹಳ್ಳಿ, ಹಳಿಯೂರು, ದೊಡ್ಡಕೊಪ್ಪಲು, ಸಾಲೇಕೊಪ್ಪಲು, ಜವರೇಗೌಡನ ಕೊಪ್ಪಲು, ಹಾಡ್ಯ, ಹಲಗೇಗೌಡನಕೊಪ್ಪಲು, ಗೊಲ್ಲರಕೊಪ್ಪಲು, ಕಗ್ಗಳ, ಸಕ್ಕರೆ, ಕುಪ್ಪೆ, ಮುದ್ದನಹಳ್ಳಿ, ಚಿಕ್ಕಕೊಪ್ಪಲು, ಚುಂಚನಕಟ್ಟೆ, ಅಂಕನಹಳ್ಳಿ, ಅಂಕನಹಳ್ಳಿಕೊಪ್ಪಲು, ಸೋಮನಹಳ್ಳಿ,ಮಾಯಿಗೌಡನಹಳ್ಳಿ, ಗುಡುಗನಹಳ್ಳಿ, ವಡ್ಡರಕೊಪ್ಪಲು, ಹೊಸೂರು,ದಿಡ್ಡಹಳ್ಳಿ, ಹನಸೋಗೆ, ಚಿಕ್ಕಹನಸೋಗೆ, ಚನ್ನಂಗೆರೆ, ಎರೆಮನುಗನಹಳ್ಳಿ, ಸಣ್ಣೇಗೌಡನಕೊಪ್ಪಲು, ಕೋಳೂರು, ಬಂಡಹಳ್ಳಿ, ನಾಡಪನಹಳ್ಳಿ ಹಾಗೂ ದಮ್ಮನಹಳ್ಳಿ ಸೇರಿವೆ.
ಮಿರ್ಲೆ: ಮಿರ್ಲೆ ಹೋಬಳಿಯ ಕುಪ್ಪೆಬೋರೆ, ಮೇಲೂರು, ಮುದು ಗುಪ್ಪೆ, ಕುಪ್ಪಹಳ್ಳಿ, ಕುಚೇನಹಳ್ಳಿ, ದೇವಿತಂದ್ರೆ, ತಂದ್ರೆಕೊಪ್ಪಲು, ಅಳಲಕುಪ್ಪೆ, ತಂದ್ರೆಅಂಕನಹಳ್ಳಿ, ಕಾಟ್ನಾಳು, ಎಲೆ ಮುದ್ದನಹಳ್ಳಿ, ಬಾಚಹಳ್ಳಿ, ಕುರುಬಳ್ಳಿ, ಕೆಂಚನಹಳ್ಳಿ, ಸಂಕನಹಳ್ಳಿ,ಬೀಚನಹಳ್ಳಿ, ಬೀಚನಹಳ್ಳಿಕೊಪ್ಪಲು, ಹನುಮನಹಳ್ಳಿ, ನರಚನಹಳ್ಳಿ, ಕೊಡಿಯಾಲ, ಹುಲ್ಲೇಬೋರೆಕಾವಲು, ನಾಟನಹಳ್ಳಿ, ಶ್ಯಾಬಾಳು, ಹಳೆಮಿರ್ಲೆ, ವಡ್ಡರಕೊಪ್ಪಲು, ಮಾಳನಾಯಕನಹಳ್ಳಿ, ಬಟಿಗನಹಳ್ಳಿ,ಮುಂಜನಹಳ್ಳಿ, ಗೇರದಡ, ಬಸವನಪುರ, ಚಿಕ್ಕಭೇರ್ಯ, ಹೊಸೂರು, ಭೇರ್ಯ, ಸಂಬರವಳ್ಳಿ, ಸೋಮನಹಳ್ಳಿ, ವಲಗೇರಹಳ್ಳಿ, ಗುಳುವಿನಅತ್ತಿಗುಪ್ಪೆ, ಉದಯಗಿರಿ ಮತ್ತು ಅರಕೆರೆ ಗ್ರಾಮಗಳು ನೂತನ ತಾಲೂಕಿನ ವ್ಯಾಪ್ತಿಗೆ ಒಳಪಡಲಿವೆ.
ಕೆ.ಆರ್.ನಗರ ಪಟ್ಟಣಕ್ಕೆ ಸಾಲಿಗ್ರಾಮ, ಮಿರ್ಲೆ ಮತ್ತು ಚುಂಚನಕಟ್ಟೆ ಹೋಬಳಿಗಳಿಂದ ಸಾರ್ವಜನಿಕರು ಬರಲು 40 ರಿಂದ50 ಕಿ.ಮೀ. ಸಂಚರಿಸಬೇಕಿತ್ತು. ಅದನ್ನು ತಪ್ಪಿಸಲು ಸಾಲಿಗ್ರಾಮ ತಾಲೂಕು ಕೇಂದ್ರ ರಚಿಸಲಾಗಿದೆ. ಕೆ.ಆರ್. ನಗರ ಮತ್ತು ಸಾಲಿಗ್ರಾಮತಾಲೂಕುಗಳ ನಡುವೆ ಸಮತೋಲನ ಸೃಷ್ಟಿಯಾಗಿ ಆಯಾಯ ತಾಲೂಕಿನ ಜನರಿಗೆ ಉದ್ಯೋಗ ದೊರಕಲಿದ್ದು, ಆರ್ಥಿಕ ಸ್ಥಿತಿಯೂ ಉತ್ತಮವಾಗಲಿದೆ ಎಂದರು. – ಸಾ.ರಾ. ಮಹೇಶ್, ಶಾಸಕ
ಸಾಲಿಗ್ರಾಮ ಹೊಸ ತಾಲೂಕಾಗಿ ಅಸ್ತಿತ್ವಕ್ಕೆ ಬಂದಿರುವುದು ಈ ಭಾಗದ ಜನತೆಗೆ ತುಂಬಾ ಸಂತೋಷವಾಗಿದೆ. ಸಂಭ್ರಮಾಚಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹಬ್ಬದ ರೀತಿಯಲ್ಲಿಆಚರಿಸಲಾಗುತ್ತದೆ. ಇದಕ್ಕಾಗಿ ಶ್ರಮಿಸಿದ ಶಾಸಕ ಸಾ.ರಾ.ಮಹೇಶ್‌ಗೆ ಅಭಿನಂದನೆ ಸಲ್ಲಿಸುತ್ತೇನೆ.– ಮೆಡಿಕಲ್ ರಾಜಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ
ಗೇರದಡ ನಾಗಣ್ಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.