ಜಿಟಿಡಿಗೆ ನನ್ನ ಮೇಲೆ ಏಕಿಷ್ಟು ದ್ವೇಷ?: ಸಾರಾ ಕಣ್ಣೀರು
ನಾನು ರಾಜಕೀಯ ನಿವೃತ್ತಿಯಾಗುತ್ತೇನೆ , ತಪ್ಪಿದ್ದರೆ ನೀವೇ ತಿದ್ದಿ ಹೇಳಿ
Team Udayavani, Mar 18, 2021, 9:16 AM IST
ಮೈಸೂರು: “ನಾನು ರಾಜಕೀಯ ನಿವೃತ್ತಿಯಾಗುತ್ತೇನೆ. ಬೇಕಿದ್ದರೆಜಿ.ಟಿ.ದೇವೇಗೌಡರು ಬಂದು ಕುಮಾರಸ್ವಾಮಿ ಅವರೊಡನೆ ಸೇರಿ ಪಕ್ಷ ಕಟ್ಟಲಿ. ನನ್ನ ಮೇಲೇಕೆ ಇಷ್ಟೊಂದು ದ್ವೇಷ’ ಎಂದು ಶಾಸಕ ಸಾ.ರಾ.ಮಹೇಶ್ ಕಣ್ಣೀರಿಟ್ಟರು.
ಬುಧವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜಿ.ಟಿ.ದೇವೇಗೌಡರು ಏಕಾಗಿ ನನ್ನನ್ನು ವಿರೋಧಿಸುತ್ತಾರೋ ಗೊತ್ತಿಲ್ಲ. ನೀವು ಬರುವುದಾದರೆ ನಾನು ಪಕ್ಷ ಬಿಡುತ್ತೇನೆ. ಇನ್ನೆರೆಡು ವರ್ಷ ಆದ ಮೇಲೆ ನಾನೇ ಸಾರ್ವಜನಿಕ ಜೀವನದಿಂದ ದೂರವಾಗುತ್ತೇನೆ. ನಿಮ್ಮನ್ನು ನಮ್ಮ ನಾಯಕರು ಎಂದು ಒಪ್ಪಿಕೊಂಡಿದ್ದೇವೆ. ನೀವುಬೇಕಿದ್ದರೆ ಕುಮಾರಸ್ವಾಮಿ ಅವರ ಜತೆ ಸೇರಿ ಪಕ್ಷಕಟ್ಟಿ. ಬನ್ನಿನಾಳೆಯಿಂದ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಹೇಳಿದರು.
ನಾಳೆಯಿಂದ ಜವಾಬ್ದಾರಿ ತೆಗೆದುಕೊಳ್ಳಿ: ನೀವು ಪಕ್ಷದಲ್ಲಿಯೇ ಇದ್ದ ಮೇಲೆ ನೇತೃತ್ವ ವಹಿಸಿಕೊಂಡು ಪಕ್ಷವನ್ನು ಮುನ್ನಡೆಸಿ. 2006ರಲ್ಲಿ ಪಕ್ಷ ಬಿಟ್ಟಾಗ ಯಾರು ನೋವು ಕೊಟ್ಟಿದ್ದು ಹೇಳಿ? ಹುಣಸೂರು ಉಪಚುನಾವಣೆಯಲ್ಲಿ ಏಕೆ ನೀವು ಹಾಗೆ ಮಾಡಿದಿರಿ? ನಗರ ಪಾಲಿಕೆ ಚುನಾವಣೆಗೆ ಏಕೆ ಗೈರಾಗಿದ್ದು? ನಮ್ಮ ತಪ್ಪು ಇದ್ದರೆ ನೀವು ತಿದ್ದಿ. ನಿಮ್ಮನ್ನು ನಮ್ಮ ನಾಯಕರು ಎಂದು ಒಪ್ಪಿಕೊಂಡಿದ್ದೇವೆ. ಬನ್ನಿ ನಾಳೆಯಿಂದ ಜವಾಬ್ದಾರಿ ತೆಗೆದುಕೊಳ್ಳಿ ಎಂದರು.
ಇದನ್ನು ಹೇಳಿದರೆ ನನ್ನನ್ನು ಶಕುನಿ ಎಂದು ಹೇಳುತ್ತಾರೆ. ಮಹಾಭಾರತದಲ್ಲಿ ಶಕುನಿ ಇಲ್ಲದಿದ್ದರೆ ಮಹಾಭಾರತ ನಡೆಯುತ್ತಿತ್ತ? ಧರ್ಮ ಸ್ಥಾಪನೆ ಆಗುತ್ತಿತ್ತಾ? ನನ್ನನ್ನು ಮಂಥರೆ ಎಂದು ಪ್ರಸ್ತಾಪಿಸುತ್ತಾರೆ. ಮಂಥರೆ ಇಲ್ಲದಿದ್ದರೆ ರಾವಣನ ಸಂಹಾರ ಆಗುತ್ತಿತ್ತಾ? ರಾಮರಾಜ್ಯ ನಿರ್ಮಾಣ ಸಾಧ್ಯವಾಗುತ್ತಿತ್ತೆ? ಅವರಿಂದ ಇದೆಲ್ಲವೂ ಸಾಧ್ಯವಾಗಿದೆ. ನೀವೆ ಹೇಳಿ, ಅವರು ಇದ್ದಿದ್ದರಿಂದಲೇಒಳ್ಳೆದಾಯಿತು. ನಾನು ಪಕ್ಷಕ್ಕೋಸ್ಕರ ತ್ಯಾಗ ಮಾಡುತ್ತೇನೆ. ನನಗೂ ರಾಜಕೀಯ ಸಾಕಾಗಿದೆ. ಜನ ನನ್ನನ್ನು 3ಬಾರಿ ಆಯ್ಕೆ ಮಾಡಿದ್ದಾರೆ.ಈ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟು ಯಾರನ್ನೂ ಮೂರುಬಾರಿ ಗೆಲ್ಲಿಸಿಲ್ಲ. ನಿಮ್ಮನ್ಮು ಸೇರಿದಂತೆ ಯಾರನ್ನೂ ಗೆಲ್ಲಿಸಿಲ್ಲ. ಇದಕ್ಕೆಲ್ಲ ಜೆಡಿಎಸ್ ಕಾರಣ. ಜೆಡಿಎಸ್ ನನ್ನ ಶಕ್ತಿ ಎಂದರು.
ಸಸಿ ನೆಡುವ ಕಾರ್ಯ ಮಾಡಿದ್ದೇವೆ:ಮರವಾಗಲು ಕುಮಾರಣ್ಣ ನೀರು ಹಾಕಿದ್ದಾರೆ: ಜೆಡಿಎಸ್ ಹಣಿಯಲು ಬಿಜೆಪಿ- ಕಾಂಗ್ರೆಸ್ ಜೊತೆ ಜಿಟಿಡಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕಳೆದ 50 ವರ್ಷದಿಂದಸಹಕಾರಿ ಕ್ಷೇತ್ರದಲ್ಲಿ ನಾನಿದ್ದೀನಿ. ನಾನು ಆಲದಮರ ಎಂದು ಹೇಳಿದ್ದುನೀವು. ಅದನ್ನು ನಾವು ಹೇಳಿಲ್ಲ. ಆಲದ ಮರ ತನ್ನ ಬೇರನ್ನು ಹೊರತುಪಡಿಸಿದರೆ ಬೇರೊಂದು ಸಸಿಯನ್ನು ಬೆಳೆಯಲು ಬಿಡಲ್ಲ. ಈ ಆಲದ ಮರಕ್ಕೆ ಎಚ್.ಡಿ.ದೇವೇಗೌಡ, ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ನೀರು ಹಾಕಿದ್ದಾರೆ. ಅರಣ್ಯಾಧಿಕಾರಿಪರಿಸರ ತಜ್ಞರನ್ನು ಕೇಳಿಕೊಂಡು ಬೇರೆ ಸಸಿ ನೆಡುವ ಕಾರ್ಯವನ್ನು ಎಚ್‌ಡಿಕೆ ನೇತೃತ್ವದಲ್ಲಿ ಇದೀಗ ಮಾಡಿದ್ದೇವೆ ಎಂದು ಜಿಟಿಡಿಗೆ ಪ್ರತ್ಯೇಕ ನಾಯಕರನ್ನು ಬೆಳೆಸಲಾಗುತ್ತಿದೆ ಎಂದು ಪರೋಕ್ಷವಾಗಿ ನುಡಿದರು.
ಕೆಲ ಮೈಮುಲ್ ಅಭ್ಯರ್ಥಿಗಳಿಗೆ ನಮ್ಮ ಟೀಂಗೆ ಬಂದರೆ ಮಾತ್ರ ಟಿಕೆಟ್ ಕೊಡುತ್ತೇನೆ ಎಂದವರು ಯಾರು? ಪಿರಿಯಾಪಟ್ಟಣಶಾಸಕರ ಮಗ ಹಾಗೂ ಮತ್ತೂಬ್ಬ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೀರಾಇಲ್ಲ. ಆ ಶಾಸಕರು ನಮ್ಮ ಜೆಡಿಎಸ್ ಪಕ್ಷದಿಂದ ಗೆದ್ದವರಲ್ಲವೇ?ಕಡೆಯಲ್ಲಿ ಜೆಡಿಎಸ್ ಬೆಂಬಲಿತರಿಗೆ ನೀವು ಟಿಕೆಟ್ ಕೊಡಲಿಲ್ಲ.ಮೈಸೂರು ಹಾಗೂ ಹುಣಸೂರು ಉಪ ಭಾಗದಲ್ಲಿ ಬಿಜೆಪಿ, ಕಾಂಗ್ರೆಸ್‌ನೀವೂ ಮೂರು ಜನ ಒಂದಾದ್ರಿ. ಆದರು ಇಲ್ಲಿ ರಾಜಕಾರಣ ಬೇಡ ಎಂದು ಹೇಳುತ್ತೀರಾ? ಆದರೂ ಕುಮಾರಸ್ವಾಮಿ ಅವರನ್ನು ಇಲ್ಲಿಗೆ ತರಬಾರದಿತ್ತು ಅಂತೀರಾ? ಮೈಮುಲ್ ಚುನಾವಣೆಯಲ್ಲಿ ನಿಮ್ಮನಡೆಯ ಬಗ್ಗೆ ಅನುಮಾನ ಬಂದು ನಾವು ಪಕ್ಷಕ್ಕಾಗಿ ಟೀಂ ಮಾಡಿಕೊಂಡೆವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನಗೆ ಕಣ್ಣೀರು ಹಾಕಿಸಿ ಅನುಭವಿಸಿದ್ದಾರೆ… :
ನನ್ನ ಮೇಲೆ ಏಕೆ ಇಷ್ಟು ದ್ವೇಷ. ಗೆಸ್ಟ್ ಹೌಸ್‌ನಲ್ಲಿ ನಿಮ್ಮ ಕಾಲಿಗೆ ಬಿದ್ದು ಕೇಳಿಕೊಂಡೆ. ಏಕೆ ನನ್ನ ಮೇಲೆ ಇಷ್ಟು ಕೋಪ ಎಂದುಕಣ್ಣೀರಿಟ್ಟ ಸಾ.ರಾ.ಮಹೇಶ್, ಒಬ್ಬರು ಚಾಮುಂಡಿಬೆಟ್ಟದಲ್ಲಿನನಗೆ ಕಣ್ಣೀರಾಕಿಸಿ ಅನುಭವಿಸುತ್ತಿದ್ದಾರೆ. ಇದೀಗ ನೀವುಚಾಮುಂಡಿಬೆಟ್ಟದಲ್ಲಿ ನನ್ನ ಬಗ್ಗೆ ಮಾತನಾಡಿದ್ದೀರಿ. ನನ್ನ ನಿಷ್ಠೆಏನೆಂದು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಕಳೆದ2013, 2018ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಯಾರ್ಯಾರನ್ನು ಎತ್ತಿ ಕಟ್ಟಿದ್ದೀರಿ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.