ಸಮುದಾಯದತ್ತ ಶಾಲೆ ಪುನರಾರಂಭ

Team Udayavani, Nov 15, 2018, 3:26 PM IST

mys-1.jpg

ಹುಣಸೂರು: ಶೈಕ್ಷಣಿಕ ಪ್ರಗತಿ ಜೊತೆಗೆ ಸವಲತ್ತು ವೃದ್ಧಿಸಿಕೊಳ್ಳಲು ಸಹಕಾರಿ ಯಾಗುವಂತೆ ತಿಂಗಳಿಗೊಮ್ಮೆ ಸಮುದಾಯದತ್ತ ಶಾಲೆ ಯೋಜನೆಯನ್ನು ತಾವು ಶಿಕ್ಷಣ ಸಚಿವರಾಗಿದ್ದ ವೇಳೆ ಜಾರಿಗೆ ತಂದು ಅಭಿವೃದ್ಧಿಗೆ ನೆರವಾಗಿದ್ದೆ, ಈ ಯೋಜನೆಯನ್ನು ಪುನರಾರಂಭಿಸುವ ಅವಶ್ಯವಿದೆ ಎಂದು ಶಾಸಕ ಎಚ್‌. ವಿಶ್ವನಾಥ್‌ ಹೇಳಿದರು.

ತಾಲೂಕಿನ ನಾಗಾಪುರ ಗಿರಿಜನ ಆಶ್ರಮಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಗ್ರಾಮಸಭೆಯನ್ನು ಮಕ್ಕಳಿಂದಲೇ ಉದ್ಘಾಟಿಸಿ ಮಾತನಾಡಿ, ಇಂದು ಯಾವುದೇ ಜನಪ್ರತಿನಿಧಿಗಳು ಶಿಕ್ಷಣದ ಬಗ್ಗೆ ಚಕಾರವೆತ್ತದಿದ್ದರಿಂದಾಗಿ ಆದಿವಾಸಿಗಳ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂದರು. 

ಕೋಟಿಗಟ್ಟಲೆ ಹಣ ವ್ಯಯಮಾಡಿ ಕಟ್ಟಡ ನಿರ್ಮಿಸದರೆ ಸಾಲದು ಬದಲಿಗೆ ಪೋಷಕರು ಹಾಗೂ ಜನಪ್ರತಿನಿಧಿಗಳು
ಶಾಲೆಗಳಲ್ಲಿನ ಚಟುವಟಿಗೆಗಳ ಬಗ್ಗೆ ನಿಗಾವಹಿಸಬೇಕು, ಶಾಲೆಗಳಲ್ಲಿ ರಚಿತ ವಾಗಿರುವ ಎಸ್‌.ಡಿ.ಎಂ.ಸಿ.ಗೆ ಮುಖ್ಯ
ಶಿಕ್ಷರನ್ನು ಪ್ರಶ್ನಿಸುವ ಅಧಿಕಾರ ನೀಡಿದ್ದರೂ ಸಹ ಆ ಸಮಿತಿಗೆ ಯಾವುದೇ ಮಾಹಿತಿ ನೀಡದಿರುವುದು ನಮ್ಮ ವ್ಯವಸ್ಥೆಯ
ಧ್ಯೂತಕವೆಂದ ಅವರು, ಸಂಬಂಧಿಸಿದ ಬಿಇಒ ಈ ಬಗ್ಗೆ ಜಾಗೃತರಾಗಿರಬೇಕು, ಎಲ್ಲ ಎಸ್‌.ಡಿ.ಎಂ.ಸಿ. ಸಮಿತಿ ಹಾಗೂ
ಗ್ರಾಮ ಪಂಚಾಯ್ತಿ ಸದಸ್ಯರ, ಎಲ್ಲ ಶಿಕ್ಷಕರ ಪ್ರತ್ಯೇಕ ಸಭೆ ನಡೆಸಿ, ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು, ಭೋದನಾ ಮಟ್ಟವನ್ನು ಮೌಲ್ಯ ಮಾಪನ ನಡೆಸಲು ಶಿಕ್ಷಣ ಇಲಾಖೆ ನಿರ್ದೇಶಕ ರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ನಿಧನರಾದ ಕೇಂದ್ರ ಸಚಿವ ದಿ.ಅನಂತಕುಮಾರ್‌ರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅವರು ಅದಮ್ಯ ಚೇತನ ಟ್ರಸ್ಟ ವತಿಯಿಂದ ಬಡ ಮಕ್ಕಳ ಊಟ- ಶಿಕ್ಷಣಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದು, 50 ಶಾಲೆಯಲ್ಲಿ ಆರಂಭಿಸಿದ ಯೋಜನೆ ಯಿಂದ ಒಂದು ಲಕ್ಷ ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ. ಅವರ ಹೆಸರಿನಲ್ಲಿ ತಾಲೂಕು ಮಟ್ಟದ ಚರ್ಚಾ ಸ್ಪರ್ಧೆ ಆಯೋಜಿಸಲಾಗುವುದು ಎಂದರು.

ಮುಖಂಡ ಎಂ.ಬಿ.ಪ್ರಭು ಮಾತ ನಾಡಿ, ಜಿಲ್ಲೆಯಲ್ಲಿ 27 ಗಿರಿಜನ ಆಶ್ರಮ ಶಾಲೆಗಳಲ್ಲಿ 2700 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ನುರಿತ ಶಿಕ್ಷಕರಿಲ್ಲದೆ ಅರಣ್ಯದಿಂದ ಹೊರಬಂದಿರುವ ಆ ವರ್ಗದ ಮಕ್ಕಳಲ್ಲಿ ಯಾವೊಬ್ಬರೂ ಸರಕಾರಿ ಕೆಲಸಕ್ಕೆ ಸೇರದಂತಾಗಿದೆ, ಕೇವಲ ಗುಣಮಟ್ಟದ ಶಿಕ್ಷಣ ನೀಡಿದರೆ ಸಾಲದು, ಬದಲಿಗೆ ಆ ಮಕ್ಕಳು ಆಯ್ಕೆ ಮಾಡಿಕೊಳ್ಳುವ ಶಿಕ್ಷಣ ನೀಡಿದಲ್ಲಿ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ ಎಂದು ತಿಳಿಸಿದರು. 

ತಾ.ಪಂ.ಸದಸ್ಯೆ ಪುಷ್ಪಲತಾ ಮಾತನಾಡಿ, ಹಾಡಿಗಳಲ್ಲಿ ಕೂಲಿಗೆ ತೆರಳುವವರೊಂದಿಗೆ ಮಕ್ಕಳನ್ನು ಕರೆದೊಯ್ಯು ವುದರಿಂದಾಗಿ ಕಲಿಕೆಯಲ್ಲಿ ಹಿಂದುಳಿದಿದ್ದಾರೆ, ಈ ಬಗ್ಗೆಯೂ ಕ್ರಮವಾಗ ಬೇಕೆಂದರೆ, ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ  ಮಹೇಶ್‌ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ನುರಿತ ಶಿಕ್ಷಕರಿದ್ದಾರೆ, ಆದರೆ ಹಾಡಿಗಳಲ್ಲಿ ಮಕ್ಕಳನ್ನು ಮನೆಯಿಂದ ಕರೆತಂದು ಪಾಠ ಮಾಡುವ ಸ್ಥಿತಿ ಇದೆ, ಮತ್ತೂಂದೆಡೆ ಊಟದ ನಂತರ ಮನೆ ಯತ್ತ ಮುಖಮಾಡುತ್ತಾರೆ. ಆಶ್ರಮ ಶಾಲೆಗಳಲ್ಲಿ ಕಡಿಮೆ ಸಂಬಳಕ್ಕೆ ಬೇರೆ ಊರುಗಳಿಂದ ಬಂದು ಪಾಠ ಮಾಡುತ್ತಿದ್ದಾರೆ, ಆ ಶಿಕ್ಷಕರಿಗೆ ಸಂಬಳ, ಸವಲತ್ತು ಒದಗಿಸಿದಲ್ಲಿ, ಆದಿವಾಸಿ ಮಕ್ಕಳಿಗೂ ಪಾಠ ಮಾಡಲು ಮನಸ್ಸು ಮಾಡುತ್ತಾರೆ ಎಂದರು.

ರಾಜ್ಯ ಲ್ಯಾಂಪ್ಸ್‌ ಸಹಕಾರ ಮಹಾ ಮಂಡಳದ ಅಧ್ಯಕ್ಷ ಕೃಷ್ಣಯ್ಯ, ಜಿಪಂ ಸದಸ್ಯ ಕಟ್ಟನಾಯಕ, ಗ್ರಾಪಂ ಅಧ್ಯಕ್ಷೆ ಮಹದೇವಿ ಇತರರು ಇದ್ದರು.

ಟಾಪ್ ನ್ಯೂಸ್

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

11

KR Nagar: ಸೂಕ್ತ ನಿರ್ವಹಣೆ ಇಲ್ಲದ ಚುಂಚನಕಟ್ಟೆ ನಿಲ್ದಾಣ!

Hanuma-mala

SriRangapattana: ಹನುಮ ಮಾಲಾಧಾರಿಗಳಿಂದ ಮಸೀದಿ ಪ್ರವೇಶ ಯತ್ನ

HD-Kote

H.D.Kote: ಹೆಬ್ಬುಲಿ ದಾಳಿಗೆ ಒಂದೂವರೆ ವರ್ಷದ ಮರಿ ಹುಲಿ ಸಾವು!

court

Mysuru: ಕ್ಷುಲ್ಲಕ ಕಾರಣಕ್ಕೆ ಜೋಡಿ ಕೊ*ಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.