ಸಂಭ್ರಮದಿಂದ ಆಗಮಿಸಿದ ಮಕ್ಕಳು : ಸ್ಯಾನಿಟೈಸರ್, ಗುಲಾಬಿ ಹೂ ನೀಡಿ ಸ್ವಾಗತಿಸಿದ ಶಿಕ್ಷಕರು
ಕೋವಿಡ್ ಆತಂಕದ ನಡುವೆಯೂ ಶೇ.50 ರಷ್ಟು ವಿದ್ಯಾರ್ಥಿಗಳು ಹಾಜರ್.
Team Udayavani, Aug 24, 2021, 12:21 PM IST
ಹುಣಸೂರು : ಕೊವಿಡ್-19 ನಡುವೆಯೇ ಸರಕಾರ 9-12 ನೇ ತರಗತಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರಿಂದ ತಾಲೂಕಿನಾದ್ಯಂತ 76 ಫ್ರೌಢಶಾಲೆಗಳು, ಹಾಗೂ ಪಿಯು ಕಾಲೇಜುಗಳು ಆರಂಭವಾಗಿದ್ದು, ಶೇ. 50ರಷ್ಟು ವಿದ್ಯಾರ್ಥಿಗಳು ಮಾತ್ರ ಭೌತಿಕ ತಗರತಿಗೆ ಹಾಜರಾಗಿದ್ದಾರೆ.
ಶಾಲಾ-ಕಾಲೇಜು ಆರಂಭವಾಗಿದ್ದರಿಂದ ವಿದ್ಯಾರ್ಥಿಗಳು ಸಂತಸ-ಸಂಭ್ರಮದಿಂದಲೇ ಶಾಲಾ-ಕಾಲೇಜಿನ ಕಡೆಗೆ ಹೆಜ್ಜೆ ಹಾಕಿದರು. ಬಣಗುಡುತ್ತಿದ್ದ ಶಾಲಾ-ಕಾಲೇಜುಗಳಲ್ಲಿ ಬಣ್ಣಬಣ್ಣದ ಉಡುಗೆಯಲ್ಲಿ ವಿದ್ಯಾರ್ಥಿಗಳು ಕಂಗೊಳಿಸುತ್ತಿದ್ದುದು ಕಂಡು ಬಂತು.
ಸುಮಾರು ಒಂದೂವರೆ ವರ್ಷಗಳಿಂದ ತರಗತಿಗಳು ನಡೆಯದೆ ಆವರಣ ಹಾಗೂ ಶಾಲಾ-ಕಾಲೇಜುಗಳ ಸುತ್ತ ಬೆಳೆದಿದ್ದ ಗಿಡಗುಂಟೆಗಳನ್ನು ಕಳೆದ ಎರಡು ದಿನಗಳಿಂದ ಆವರಣದ ಸುತ್ತ ಸ್ವಚ್ಚತೆ, ಸ್ಯಾನಿಟೈಸರ್ ಗೊಳಿಸಲಾಗಿತ್ತು.
ಆನ್ ಲೈನ್ ಮೂಲಕವೇ ಪಾಠ ಕೇಳಿ ಬೇಸತ್ತಿದ್ದ ವಿದ್ಯಾರ್ಥಿಗಳು ಭೌತಿಕ ತರಗತಿಗೆ ಲಗುಬಗೆಯಿಂದಲೇ ಆಗಮಿಸಿ ಮೊದಲ ದಿನವೇ ಸ್ನೇಹಿತರನ್ನು ಕಾಣುತ್ತಲೇ ಸಂತಸದಿಂದಲೇ ಹಿಗ್ಗಿದರು. ಶಿಕ್ಷಕರು-ಉಪನ್ಯಾಸಕರನ್ನು ಕಂಡು ಗುರು ವಂದನೆ ಸಲ್ಲಿಸಿದರು. ಶಾಲಾ-ಕಾಲೇಜುಗಳಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ನೀಡಿ, ದೇಹದ ತಾಪಮಾನ ಪರೀಕ್ಷಿಸಿ, ಗುಲಾಬಿ ಹೂ ನೀಡಿ ಸ್ವಾಗತಿಸಿದರು.
ಮೊದಲ ದಿನವೇ ಗುರುಗಳು ತರಗತಿಗಳಲ್ಲಿ ಕೊರೊನಾ ಬಗೆಗಿನ ಎಚ್ಚರಿಕೆಯ ಪಾಠ ಮಾಡಿದರು. ಕೊರೊನಾದಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ಯಾವಾಗಲೂ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ಬಿಸಿನೀರನ್ನೇ ಕುಡಿಯಬೇಕು. ಅನಗತ್ಯ ಓಡಾಟ ಮಾಡಬಾರದು. ಮದುವೆ ಮತ್ತಿತರ ಸಮಾರಂಭಗಳಲ್ಲಿ ಭಾಗವಹಿಸದಂತೆ ಸಲಹೆ ನೀಡಿದರು. ನಂತರ ಪರಸ್ಪರ ಪರಿಚಯ ಮಾಡಿಸಿ, ಪಾಠದ ಕಡೆ ಗಮನ ಹರಿಸಿದರು.
ಹುಣಸೂರಿನ ಬಾಲಕಿಯರ ಪದವಿ ಪೂರ್ವ ಕಾಲೇಜು, ಫ್ರೌಢ ಶಾಲೆಗಳು ಸೇರಿದಂತೆ ತಾಲೂಕಿನ ಎಲ್ಲೆಡೆ ಸರಕಾರದ ಮಾರ್ಗಸೂಚಿಗಳನ್ನು ತಿಳಿಸಿ, ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಯಿತು. ಪಿಯು ಕಾಲೇಜುಗಳಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಜೊತೆಗೆ ಪ್ರಥಮ ಪಿಯುಗೆ ಸೇರುವ ವಿದ್ಯಾರ್ಥಿಗಳ ದಂಡು ಎಲ್ಲೆಡೆ ಕಂಡುಬಂತು.
ಕೊರೊನಾ ಹೆಚ್ಚುತ್ತಿರುವ ಹುಣಸೂರು ತಾಲೂಕಿನಲ್ಲಿ ಶಿಕ್ಷಕರು-ಅಧಿಕಾರಿಗಳು ಮಾರ್ಗಸೂಚಿ ಅನುಸರಿಸಲು ಹೇಳುತ್ತಾರಾದರೂ ಕೊರೊನಾ ಬಗ್ಗೆ ಮಕ್ಕಳೇ ಎಚ್ಚರ ವಹಿಸಬೇಕು ಎಚ್ಚರ ತಪ್ಪಿದಲ್ಲಿ ಮತ್ತೆ ಅಪಾಯ ಕಟ್ಟಿಟ್ಟ ಬುತ್ತಿ.
ಬಣಗುಡುತ್ತಿದ್ದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆಗಮನದಿಂದ ನಾವು ಪುಳಕಿತರಾಗಿದ್ದೇವೆ. ಕೊರೊನಾ ಎಸ್‌ಓಪಿ ಪಾಲಿಸಿಕೊಂಡೇ ಪಾಠ-ಪ್ರವಚನ ನಡೆಸಲು ಉತ್ಸುಕರಾಗಿದ್ದೇವೆ ಎನ್ನುತ್ತಾರೆ ಬಾಲಕಿಯರ ಪಿಯು ಕಾಲೇಜಿನ ಪ್ರಚಾರ್ಯ ರಾಮೇಗೌಡ.
ಬಿ.ಇ.ಓ.ಭೇಟಿ : ನಗರ ಸೇರಿದಂತೆ ತಾಲೂಕಿನ ಬಹುತೇಕ ಶಾಲೆಗಳಿಗೆ ಬಿಇಓ ನಾಗರಾಜ್, ಬಿ.ಆರ್.ಸಿ. ಸಂತೋಷ್‌ಕುಮಾರ್ ಸೇರಿದಂತೆ ಬಿ.ಆರ್.ಪಿ ಹಾಗೂ ಸಿ.ಆರ್.ಪಿ.ಗಳು ಭೇಟಿ ನೀಡಿ ಮಾರ್ಗಸೂಚಿ ಅನುಸರಿಸಿರುವ ಬಗ್ಗೆ ಪರಿಶೀಲನೆ ನಡೆಸಿ, ಹಲವಾರು ಸೂಚನೆಗಳನ್ನು ನೀಡಿದರು.
ಫ್ರೌಢಶಾಲಾ ವಿಭಾಗದಲ್ಲಿ ಪ್ರಥಮ ದಿನ 8,336 ವಿದ್ಯಾರ್ಥಿಗಳ ಪೈಕಿ 4,066 ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಹಾಜರಾಗಿದ್ದರೆಂದು ಬಿಆರ್ ಸಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಕಾಲೇಜುಗಳು ಆರಂಭಗೊಳ್ಳದೆ ಆನ್‌ಲೈನ್ ಮೂಲಕ ನೀಡುತ್ತಿದ್ದ ಪಾಠವನ್ನು ಸರ್ವರ್ ಮತ್ತಿತರ ಪ್ರಾಬ್ಲಮ್‌ನಿಂದ ಕೇಳಲಾಗದೆ, ಮತ್ತೊಂದೆಡೆ ಆನ್ ಲೈನ್ ಪಾಠ ಆರಂಭದ ವೇಳೆಯೇ ಪೋಷಕರು ಕೆಲಸಕ್ಕೆ ಹೋದ ಸಂದರ್ಭಗಳಲ್ಲಿ ವಂಚಿತಾಗುತ್ತಿದ್ದೆವು.
ಇನ್ನು ಆಟ-ಪಾಠವಿಲ್ಲದೆ ಬೇಸರವಾಗಿತ್ತು. ಇದೀಗ ಕೊರೊನಾದ ಆತಂಕದ ನಡುವೆ ತರಗತಿಗಳು ಆರಂಭವಾಗಿರುವುದು ಸಂತಸ ತಂದಿದೆ. ಮನೆ ಮಾಡಿದೆ. ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಅತ್ಯಗತ್ಯವಾಗಿದ್ದು, ಕಲ್ಪಿಸುವಂತೆ ಮನವಿ ಮಾಡುವೆ.
ಕೌಶಿಕ್, ಫ್ರೌಢಶಾಲೆ ವಿದ್ಯಾರ್ಥಿ. ಕಟ್ಟೆಮಳಲವಾಡಿ.
ಎಸ್.ಎಸ್.ಎಲ್.ಸಿ.ಯು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಮುಖ ಘಟ್ಟ, ತರಗತಿಯಲ್ಲಿ ಪಾಠ ಕೇಳಿ ಅಭ್ಯಾಸವಾಗಿದ್ದ ನಮಗೆ ಮೊಬೈಲ್ ಮೂಲಕ ಪಾಠ ಕೇಳುವುದು ಸಮಸ್ಯೆಯಾಗಿತ್ತು, ಇದೀಗ ತರಗತಿಗಳು ಭೌತಿಕವಾಗಿ ಆರಂಭವಾಗಿರುವುದು ಸಂತಸ ಮನೆಮಾಡಿದೆ. ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಪಾಠ ಕೇಳುವ ಗಟ್ಟಿ ನಿರ್ಧಾರ ಮಾಡಿದ್ದೇನೆ.
ಕವನ, ಬಾಲಕಿಯರ ಪಿಯು ಕಾಲೇಜು ಹುಣಸೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.