ಗಿಡಮರ ಉಳಿಸಿ ಬೆಳೆಸಲು ಸೀಡ್‌ಬಾಲ್‌ ಸಹಕಾರಿ


Team Udayavani, May 29, 2017, 1:12 PM IST

mys4.jpg

ಹುಣಸೂರು: ರಾಜ್ಯ ಸರ್ಕಾರದ ಮಹತ್ವಾಂಕಾಂಕ್ಷೆಯ ಯೋಜನೆಗಳಲ್ಲೊಂದಾದ ಸೀಡ್‌ಬಾಲ್‌ ನಿಂದ ಸಸಿ ತಯಾರಿಕೆಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಎರಡನೇ ಬಾರಿಗೆ ಅರಣ್ಯ ಇಲಾಖೆಯ ಕೇಂದ್ರೀಯ ಸಸ್ಯ ಕ್ಷೇತ್ರದಲ್ಲಿ ಹಸಿರು ಕ್ರಾಂತಿಯ ಸೀಡ್‌ ಬಾಲ್‌(ಮಣ್ಣುನುಂಡೆ) ತಯಾರಿಸುವ ಕಾರ್ಯಾಗಾರ ನಡೆಯಿತು.

ನಗರದ ಪ್ರಾದೇಶಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಕಾರಿಗಳ ಕಚೇರಿ ಆವರಣದಲ್ಲಿ ಬನ್ನಿಕುಪ್ಪೆ ಜಿಪಂ ವ್ಯಾಪ್ತಿಯ ಗ್ರಾಪಂಗಳು, ಸ್ನೇಹ ಜೀವಿಸಂಸ್ಥೆ, ಗೋಗ್ರೀನ್‌ಕ್ಲಬ್‌, ಅರಣ್ಯಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೀಡ್‌ಬಾಲ್‌ ಹಸಿರು ಕ್ರಾಂತಿಯಲ್ಲಿ ನೆರೆದಿದ್ದ ಮಹಿಳೆಯರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಸುಮಾರು 7 ಸಾವಿರಕ್ಕೂ ಹೆಚ್ಚು ಸೀಡ್‌ಬಾಲ್‌ ತಯಾರಿಸಿದರು.

ಜಿಪಂ ಸದಸ್ಯೆ ಡಾ.ಪುಷ್ಪ ಅಮರ್‌ನಾಥ್‌ ಮಾತನಾಡಿ, ಕಳೆದ ಭೂಮಿ ದಿನಾಚರಣೆಯ ಅಂಗವಾಗಿ ಲಕ್ಷಕ್ಕೂ ಹೆಚ್ಚು ಮಣ್ಣಿನುಂಡೆಗಳನ್ನು ತಯಾರಿಸಿ ತಾಲೂಕಿನ ವಿವಿಧ ಕೆರೆ ಅಂಗಳದಲ್ಲಿ ಹಾಕಲಾಗಿದೆ. ಈ ವರ್ಷ ಉತ್ತಮ ಮಳೆಯಾಗಿದ್ದು, ಕೆಲವು ಮೊಳಕೆಯೊಡೆದಿರುವುದನ್ನು ಮನಗಂಡು ಇದೀಗ ಮತ್ತೆ ಸೀಡ್‌ಬಾಲ್‌ ತಯಾರಿಸಿ ಅವಶ್ಯವಿರುವೆಡೆ ಹಾಕಲಾಗುವುದು.

ಇದರಿಂದ ಕಡಿಮೆ ಖರ್ಚಿನಲ್ಲಿ ಗಿಡಮರ ಉಳಿಸಿ ಪರಿಸರಕ್ಕೆ ಕೊಡಬಹುದಾದ ದೊಡ್ಡ ಕಾಣಿಕೆ ಎಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್‌ ಮಾತನಾಡಿ, ಕಡಿಮೆ ಖರ್ಚಿನಲ್ಲಿ ನಮ್ಮ ಪ್ರಾಚೀನರು ಬಳಸುತ್ತಿದ್ದ ಮಣ್ಣಿನುಂಡೆ ಮೂಲಕ ಸಸಿ ಬೆಳೆಸುವ ಪ್ರವೃತ್ತಿ ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ ಇದಾಗಿದ್ದು, ಪಿಡಿಒಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಎನ್‌ಆರ್‌ಇಜಿ ಯೋಜನೆಯಡಿಯಲ್ಲಿ  ಈ ಯೋಜನೆ ಸಾಕಾರಗೊಳಿಸಿ,

ರೈತರು, ವಿದ್ಯಾರ್ಥಿಗಳು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ನಾಗರಿಕರು ಇಂತಹ ಪರಿಸರ ಪೂರಕ ಕಾ  ರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು. ಇಂದಿನ ಸೀಡ್‌ಬಾಲ್‌ನಲ್ಲಿ ಜೆವಿಕ ಇಂಧನಕ್ಕೆ ಪೂರಕವಾದ ಹೊಂಗೆ ಸೇರಿದಂತೆ ಹುಣಸೇ, ನೆಲ್ಲಿ, ಬಸರಿ, ನೇರಳೆ ಹೀಗೆ ಅನೇಕ ಬೀಜಗಳನ್ನು ಮಣ್ಣಿನುಂಡೆಯಲ್ಲಿ ಹಾಕಿದರು.

ಮಣ್ಣಿನುಂಡೆ: ರೈತರು ಮಳೆಗಾಲಕ್ಕೂ ಮುನ್ನ ಸಸಿ ತಯಾರಿಸುವ ಸಲುವಾಗಿ ಕೆಮ್ಮಣ್ಣನ್ನು ಸಗಣಿ, ಗೋ ಮೂತ್ರದೊಂದಿಗೆ ಮಿಶ್ರಮಾಡಿ  ಮೂರ್‍ನಾಲ್ಕು ದಿನಗಳ ಕಾಲ ಒಂದೆಡೆ ರಾಶಿಹಾಕಿದ ನಂತರ ಉಂಡೆ ಮಾಡಿಕೊಂಡು ಮಧ್ಯದಲ್ಲಿ ತಮ್ಮ ಜಮೀನಿಗೆ ಬೇಕಾದ ಸಸಿಗಳ ಬೀಜವನ್ನು ಉಂಡೆಯೊಳಗೆ ಹಾಕಿ ನಂತರ ಉಂಡೆಗಳನ್ನು ಒಂದೆಡೆ ಶೇಖರಿಸಿ, ಸಸಿ ಮೊಳಕೆಯೊಡೆದ ನಂತರ ಅಗತ್ಯವಿರುವ ಕಡೆಗಳಲ್ಲಿ ಹಾಕಿ ಪೋಷಿಸುವುದೇ ಸೀಡ್‌ಬಾಲ್‌.

ಅಧಿಕಾರಿಗಳು, ಸ್ವಯಂ ಸೇವಕರೂ ಭಾಗಿ: ಈ ಕಾರ್ಯಕ್ರಮದಲ್ಲಿ ಗೋಗ್ರೀನ್‌ ಸಂಸ್ಥೆ, ಸ್ನೇಹಜೀವಿ ಸಂಸ್ಥೆ, ಅರಣ್ಯ ಸಿಬ್ಬಂದಿ, ಮಹಿಳಾ ಸಂಘಗಳವರ ಜೊತೆಗೆ ಪಿಡಿಒಗಳಾದ ನರಹರಿ, ಶ್ರೀಶೈಲ, ಸೋಮಣ್ಣ, ಭವ್ಯ ಹಾಗೂ ಗ್ರಾಪಂ ಸಿಬ್ಬಂದಿ ಹಾಗೂ ಕೆಲ ಸ್ವಯಂಸೇವಕರು ಸಹ ಮಣ್ಣಿನುಂಡೆ ಮಾಡಿ ಬೀಜ ನೆಟ್ಟು, ಪರಿಸರ ಪ್ರೀತಿ ಮೆರೆದರು.

ಮೊಳಕೆ ಕಂಡು ಹರ್ಷ: ವಿಶ್ವ ಭೂಮಿ ದಿನಾಚರಣೆಯಂದು ವಿವಿಧ ತಳಿಗಳ ಬೀಜಹಾಕಿ, ತಯಾರಿಸಿದ್ದ ಮಣ್ಣಿನುಂಡೆಯನ್ನು ಪ್ರಾಯೋಗಿಕವಾಗಿ ಅರಣ್ಯ ಇಲಾಖೆ ಆವರಣದಲ್ಲಿ ಹಾಕಲಾಗಿತ್ತು. ಮಳೆ ಬೀಳುತ್ತಿದ್ದಂತೆ ಅಲ್ಲಲ್ಲಿ ನೂರಾರು ಸೀಡ್‌ ಬಾಲ್‌ ಗಳಿಂದ ಸಸಿಯ ಮೊಳಕೆಯಾಗಿದ್ದನ್ನು ಅರಣ್ಯ ಇಲಾಖೆಯ ಸಸಿ ಮಡಿ ನಿರ್ವಹಣೆಯ ನೌಕರ ರಮೇಶ ತೋರಿಸಿದ್ದನ್ನು ಕಣ್ತುಂಬಿಕೊಂಡ ಜಿಪಂ ಸದಸ್ಯೆ ಡಾ.ಪುಷ್ಪ, ಇಒ ಕಷ್ಣಕುಮಾರ್‌ ಸೇರಿದಂತೆ ಅನೇಕರು ಪುಳಕಿತಗೊಂಡು ಸೀಡ್‌ಬಾಲ್‌ ತಯಾರಿಕೆಯ ಸಾರ್ಥಕತೆಯಲ್ಲಿ ಮಿಂದೆದ್ದರು.

ಟಾಪ್ ನ್ಯೂಸ್

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

1-sindd

Syed Modi International: ಫೇವರಿಟ್‌ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ

1-proo

Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur

Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

1-kar

Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.